ಮಾವನ ಮಗಳ ಜೊತೆ ನಾಗಚೈತನ್ಯ : ಸಮಂತಾ ಈ ವಿಡಿಯೋ ನೋಡಿ ಏನ್‌ ಅಂತಾರೋ..!

ಸಾಲು ಸಾಲು ಸಮಸ್ಯೆಗಳ ಬಳಿಕ ಟಾಲಿವುಡ್‌ ಸ್ಟಾರ್‌ ನಟ ನಾಗ ಚೈತನ್ಯ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಆಗಾಗ ಇಂಟರ್‌ನೆಟ್‌ಗೆ ಬರುವ ಅವರು, ತಮ್ಮ ಸಿನಿಮಾಗಳ ಬಗ್ಗೆ ಟ್ವೀಟ್ ಅಥವಾ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ನಟ ವೆಂಕಟೇಶ್‌ ದಗ್ಗುಬಾಟಿ ಅವರ ಮಗಳ ಜೊತೆ ಚೈತನ್ಯ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Dec 5, 2022, 12:35 PM IST
  • ವೆಂಕಟೇಶ್‌ ದಗ್ಗುಬಾಟಿ ಅವರ ಮಗಳ ಜೊತೆ ಚೈತನ್ಯ ಕಾಣಿಸಿಕೊಂಡಿದ್ದಾರೆ
  • ಸಂಬಂಧದಲ್ಲಿ ನಾಗಚೈತನ್ಯ ಅವರಿಗೆ ಆಶ್ರೀತಾ ದಗ್ಗುಬಾಟಿ ಮಾವನ ಮಗಳಾಗಬೇಕು
  • ನೆಟ್ಟಿಗರು ವೆಂಕಿಮಾಮ ಮಗಳು ಮತ್ತು ನಾಗ ಚೈತನ್ಯ ಜೋಡಿ ಕ್ಯೂಟಾಗಿದೆ
 ಮಾವನ ಮಗಳ ಜೊತೆ ನಾಗಚೈತನ್ಯ : ಸಮಂತಾ ಈ ವಿಡಿಯೋ ನೋಡಿ ಏನ್‌ ಅಂತಾರೋ..! title=

Naga Chaitanya With Venkatesh Daughter : ಸಾಲು ಸಾಲು ಸಮಸ್ಯೆಗಳ ಬಳಿಕ ಟಾಲಿವುಡ್‌ ಸ್ಟಾರ್‌ ನಟ ನಾಗ ಚೈತನ್ಯ ಅವರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಆಗಾಗ ಇಂಟರ್‌ನೆಟ್‌ಗೆ ಬರುವ ಅವರು, ತಮ್ಮ ಸಿನಿಮಾಗಳ ಬಗ್ಗೆ ಟ್ವೀಟ್ ಅಥವಾ ಪೋಸ್ಟ್ ಮಾಡಿ ತಮ್ಮ ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತಾರೆ. ಇದೀಗ ನಟ ವೆಂಕಟೇಶ್‌ ದಗ್ಗುಬಾಟಿ ಅವರ ಮಗಳ ಜೊತೆ ಚೈತನ್ಯ ಕಾಣಿಸಿಕೊಂಡಿದ್ದು, ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹೌದು.. ಇತ್ತೀಚೆಗೆ ನಾಗಚೈತನ್ಯ ಅವರು ಟಾಲಿವುಡ್‌ ಸ್ಟಾರ್‌ ನಟ ವೆಂಕಟೇಶ್‌ ದಗ್ಗುಬಾಟಿ ಅವರ ಮಗಳು ಆಶ್ರೀತಾ ದಗ್ಗುಬಾಟಿ ಜೊತೆ ಕಾಣಿಸಿಕೊಂಡಿದ್ದಾರೆ. ಸಂಬಂಧದಲ್ಲಿ ನಾಗಚೈತನ್ಯ ಅವರಿಗೆ ಆಶ್ರೀತಾ ಮಾವನ ಮಗಳಾಗಬೇಕು. ಇನ್ನು ಸಮಂತಾ ಡೈವೋರ್ಸ್‌ ಬಳಿಕ ಚೈ ಮಾವನ ಮಗಳ ಜೊತೆ ಸಡನ್ನಾಗಿ ಕಾಣಿಸಿಕೊಂಡಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ, ವೆಂಕಿಮಾಮ ಮಗಳು ಮತ್ತು ನಾಗ ಚೈತನ್ಯ ಜೋಡಿ ಕ್ಯೂಟಾಗಿದೆ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: ಗಂಡ-ಹೆಂಡತಿ ಆಗ್ತಾರಾ ಕಿಯಾರಾ-ಸಿದ್ಧಾರ್ಥ್‌ : ವೈರಲ್‌ ಆಗ್ತಿದೆ ವಿಡಿಯೋ..!

ವೈರಲ್‌ ಆಗಿರುವ ವಿಡಿಯೋದಲ್ಲಿ ಚೈತನ್ಯ ಮತ್ತು ಆಶ್ರಿತಾ ಜೊತೆ ಸೇರಿ ಫುಡ್‌ ರೆಡಿಮಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ಸ್ವತಃ ಆಶ್ರಿತಾ ತಮ್ಮ ಇನ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಯೂಟ್ಯೂಬ್‌ ವಿಡಿಯೋ, ಫನ್‌ ಡೇ ವಿಥ್‌ ವೆಂಕಿಮಾಮಾ ಅಂತ ಶೀರ್ಷಿಕೆ ಬರೆದುಕೊಂಡಿದ್ದಾರೆ. ಆದರೆ ವಿಡಿಯೋ ಗುಟ್ಟು ಮಾತ್ರ ಬೇರೆನೆ ಇದೆ. ಅದೇನು ಅಂತ ತಿಳಿಯೋಕೆ... ಮುಂದೆ ಓದಿ.

ಯಸ್‌... ನಟ ಚೈತನ್ಯ ಅವರು ಹೊಟೇಲ್ ಬ್ಯುಸಿನೆಸ್‌ ಕೂಡಾ ಮಾಡ್ತಾರೆ. ಇತ್ತೀಚೆಗೆ ವಿದೇಶದಿಂದ ಮರಳಿ ಬಂದಿರುವ ಆಶ್ರಿತಾಗೆ ಚೈ ಜಪಾನೀಸ್ ಫುಡ್ ಶೋಯು ಮಾಡಿ ಉಣಬಡಿಸಿದ್ದಾರೆ. ಅಲ್ಲದೆ, ಮಾವ ಮಾಡಿದ ಶೋಯು ತಿಂದು ಆಶ್ರಿತಾ ಫುಲ್‌ ಖುಷಿಯಾಗಿದ್ದಾರೆ. ಇನ್ನು ವಿಡಿಯೋದಲ್ಲಿ ಆಶ್ರಿತಾ ಚೈ ಭಾವ ಅಂತ ಕರೆದಿದ್ದು, ಚೈತನ್ಯ ಅಭಿಮಾನಿಗಳಲ್ಲಿ ಹೊಸ ಚೈತನ್ಯ ಮೂಡಿಸಿದಂತಾಗಿದೆ. ಅಲ್ಲದೆ, ಈ ವಿಡಿಯೋ ನೋಡಿದ್ರೆ ಸಮಂತಾ ಏನ್‌ ಹೇಗೆ ರಿಯಾಕ್ಟ್‌ ಮಾಡ್ತಾರೆ ಅಂತ ನೆಟ್ಟಿಗರು ಕೌಂಟರ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುತ್ತಾರೆ ಅಷ್ಟೇ.. ಯಾರೂ ಮಾಡಲ್ಲ..!

ಈ ನಡುವೆ ನಾಗ ಚೈತನ್ಯ ಎರಡನೇ ಮದುವೆ ಬಗ್ಗೆಯೂ ಸುದ್ದಿ ಹಬ್ಬಿತ್ತು. ಅಲ್ಲದೆ, ಶೋಭಿತಾ ಧೂಳಿಪಾಲ ಜೊತೆ ಚೈತನ್ಯ ಕಾಣಿಸಿಕೊಂಡಿದ್ದ ಫೋಟೋ ಸೊಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಇದೀಗ ವೆಂಕಿಮಾಮ ತನ್ನ ಪುಟ್ಟ ಮಗಳನ್ನು ನಾಗ ಚೈತನ್ಯಗೆ ಕೊಟ್ಟು ಮದುವೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಅಲ್ಲದೆ, ಈ ವಿಚಾರ ಅಕ್ಕಿನೇನಿ ಹಾಗೂ ದಗ್ಗುಬಾಟಿ ಅಭಿಮಾನಿಗಳಿಗೆ ಖುಷಿ ತಂದಿದೆ. ನಾಗ ಚೈತನ್ಯ ಪ್ರಸ್ತುತ ವೆಂಕಟ್ ಪ್ರಭು ನಿರ್ದೇಶನದ ಕಸ್ಟಡಿ ಎಂಬ ಸಿನಿಮಾ ಮಾಡುತ್ತಿದ್ದಾರೆ. ನ.23ರಂದು ಚೈತನ್ಯ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News