Dexpole Solar Power Bank : ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್ ಇಲ್ಲದೆ ಇತ್ತೀಚಿನ ದಿನಗಳಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಇವೆರಡೂ ನಮ್ಮ ಜೀವನದ ಪ್ರಮುಖ ಭಾಗವೇ ಆಗಿದೆ. ಸ್ಮಾರ್ಟ್‌ಫೋನ್ ಆಗಲಿ ಲ್ಯಾಪ್‌ಟಾಪ್ ಆಗಲಿ ಅದು ಕಾರ್ಯ ನಿರ್ವಹಿಸಬೇಕಾದರೆ ಚಾರ್ಜ್ ಮಾಡಬೇಕು. ಚಾರ್ಜ್ ಮಾಡಬೇಕಾದರೆ ವಿದ್ಯುತ್ ಬೇಕು. ವಿದ್ಯುತ್ ಇಲ್ಲದ ಜಾಗದಲ್ಲಿ ಅಥವಾ ಕರೆಂಟ್ ಕೈ ಕೊಟ್ಟ ಸಂದರ್ಭದಲ್ಲಿ ಫೋನ್ ಮತ್ತು ಲ್ಯಾಪ್‌ಟಾಪ್ ಬ್ಯಾಟರಿ ಖಾಲಿಯಾದರೆ ಏನು ಮಾಡುವುದು? ಈಗ ಈ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ಸೂರ್ಯನ ಬೆಳಕಿನ ಮೂಲಕ ಚಾರ್ಜ್ ಆಗುವಂಥಹ ಸಾಧನ ಇದೀಗ ಮಾರುಕಟ್ಟೆಗೆ ಬಂದಿದೆ. ಇದರ ಸಹಾಯದಿಂದ ಫೋನ್ ಮತ್ತು ಲ್ಯಾಪ್‌ಟಾಪ್ ಅನ್ನು ಹಲವು ಬಾರಿ ಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ. ಹೌದು, ನಾವಿಲ್ಲಿ ಸೋಲಾರ್ ಪವರ್ ಬ್ಯಾಂಕ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಡೆಕ್ಸ್ಪೋಲ್ ಸೋಲಾರ್ ಪವರ್ ಬ್ಯಾಂಕ್ :
ಡೆಕ್ಸ್‌ಪೋಲ್ ಹೆಸರಿನ ಕಂಪನಿಯು ಸೋಲಾರ್ ಪವರ್ ಬ್ಯಾಂಕ್‌ಗಾಗಿ ಕಿಕ್‌ಸ್ಟಾರ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ. ಇದು 65W USB-C ಚಾರ್ಜಿಂಗ್ ಸಪೋರ್ಟ್ ಹೊಂದಿರಲಿದೆ. ಇದು ಸೋಲಾರ್ ಬ್ಯಾಟರಿಯಾಗಿದ್ದು, ಸೂರ್ಯನ ಬೆಳಕಿನಿಂದ ಡಿವೈಸ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಡೆಕ್ಸ್‌ಪೋಲ್ ಸೋಲಾರ್ ಪವರ್ ಬ್ಯಾಂಕ್ 24,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದರಲ್ಲಿ ಮೂರು ಇನ್‌ಪುಟ್‌ಗಳು ಇವೆ. ಇದರಲ್ಲಿರುವ ಸೋಲಾರ್ ಪ್ಯಾನೆಲ್ ಸಹಾಯದಿಂದ ಸಾಧನವು 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಇದನ್ನೂ ಓದಿ : GPay ಮೂಲಕ ಯಾವುದೇ ಮಿತಿ ಇಲ್ಲದೆ ಹಣ ಪಾವತಿಸಿ, ರೂ.50 ರಿಂದ ರೂ.100 ಕ್ಯಾಶ್ ಬ್ಯಾಕ್ ಪಡೆಯಿರಿ!
ಡೆಕ್ಸ್ಪೋಲ್ ಸೋಲಾರ್ ಪವರ್ ಬ್ಯಾಂಕ್ ವೈಶಿಷ್ಟ್ಯಗಳು :
ಡೆಕ್ಸ್‌ಪೋಲ್ ಸೋಲಾರ್ ಪವರ್ ಬ್ಯಾಂಕ್‌ನಲ್ಲಿ ನಾಲ್ಕು ಸೌರ ಫಲಕಗಳು ಲಭ್ಯವಿವೆ. ಇದು ವಾಲ್ ಸಾಕೆಟ್ ಸೌಲಭ್ಯವನ್ನು ಹೊಂದಿದೆ. ಇದರ ಮೂಲಕ ಸುಮಾರು 2 ಗಂಟೆಗಳಲ್ಲಿ ಸಾಧನವನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಸಾಧನದಲ್ಲಿ ಎಲ್ಇಡಿ ಡಿಸ್ಪ್ಲೇ ಲಭ್ಯವಿದೆ. ಇದರ ಮೂಲಕ ಎಷ್ಟು ಚಾರ್ಜ್ ಆಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಕಂಪನಿಯ ಪ್ರಕಾರ, ಈ ಪವರ್ ಬ್ಯಾಂಕ್ iPhone 14 Pro Max ಅನ್ನು ನಾಲ್ಕು ಬಾರಿ ಅಥವಾ iPad Pro ಅನ್ನು ಎರಡು ಬಾರಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. 65W USB-C ಪೋರ್ಟ್ ಜೊತೆಗೆ ಎರಡು USB-A ಪೋರ್ಟ್‌ಗಳು ಇದರಲ್ಲಿ ಲಭ್ಯವಿದೆ. ಇದು 1.2KG ಯಷ್ಟಿದ್ದು, ನೀರಿನಲ್ಲಿ ಬಿದ್ದರೂ ಹಾನಿಯಾಗುವುದಿಲ್ಲ ಎಂದು ಹೇಳಲಾಗಿದೆ.
ಡೆಕ್ಸ್ಪೋಲ್ ಸೋಲಾರ್ ಪವರ್ ಬ್ಯಾಂಕ್ ಬೆಲೆ :
ಕಿಕ್‌ಸ್ಟಾರ್ಟರ್ ಅಭಿಯಾನದ ಅಡಿಯಲ್ಲಿ, ಡೆಕ್ಸ್‌ಪೋಲ್ ಸೋಲಾರ್ ಪವರ್ ಬ್ಯಾಂಕ್‌ನಲ್ಲಿ ಶೇಕಡಾ 41 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದರ ಬೆಲೆ ಸುಮಾರು 11,871 ರೂಪಾಯಿ. ಡೆಕ್ಸ್‌ಪೋಲ್ ಹೇಳುವಂತೆ ಪವರ್ ಬ್ಯಾಂಕ್ ಎಲ್ಲಾ USB ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರ ಮೇಲೆ ಒಂದು ವರ್ಷದ ವಾರೆಂಟಿಯೊಂದಿಗೆ ಬರುತ್ತದೆ.
ಇದನ್ನೂ ಓದಿ : Maruti Dzire Airbags: 70 ಕಿಮೀ ವೇಗದಲ್ಲಿ ಅಪಘಾತಕ್ಕೀಡಾದರೂ ತೆರೆಯದ Maruti Dzire ಏರ್ ಬ್ಯಾಗ್: ಕಂಪನಿ ಹೇಳಿದ್ದೇನು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.