ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ದ್ವಿಶತಕ ಭಾರಿಸುವ ಮೂಲಕ ಮಿಂಚಿದ್ದಾರೆ. ಬಾಂಗ್ಲಾದೇಶದ ಚಟ್ಟೋಗ್ರಾಮ್ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ವಿರಾಟ್ ಕೊಹ್ಲಿ ಜೊತೆಗೆ ದಾಖಲೆಯ ಜೊತೆಯಾಟವಾಡಿದ ಇಶಾನ್ ಕಿಶನ್ ಅತಿವೇಗದ ದ್ವಿಶತಕ ಭಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇಶಾನ್ ಕಿಶನ್ ಅಬ್ಬರ ಬ್ಯಾಟಿಂಗ್!
ಟಾಸ್ ಗೆದ್ದ ಬಾಂಗ್ಲಾದೇಶ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ಶಿಖರ್ ಧವನ್(03) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಬಳಿಕ ಇಶಾನ್ ಕಿಶನ್ ಜೊತೆಗೂಡಿದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಶುರು ಮಾಡಿದರು. ಬಾಂಗ್ಲಾದೇಶದ ಬೌಲರ್ಗಳ ಬೆವರಳಿಸಿದ ಇಶಾನ್ ಕಿಶನ್ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆ ಸುರಿಸುವ ಮೂಲಕ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.
𝟐𝟎𝟎 𝐑𝐔𝐍𝐒 𝐅𝐎𝐑 𝐈𝐒𝐇𝐀𝐍 𝐊𝐈𝐒𝐇𝐀𝐍 🔥🔥
𝐖𝐡𝐚𝐭 𝐚 𝐬𝐞𝐧𝐬𝐚𝐭𝐢𝐨𝐧𝐚𝐥 𝐝𝐨𝐮𝐛𝐥𝐞 𝐡𝐮𝐧𝐝𝐫𝐞𝐝 𝐭𝐡𝐢𝐬 𝐡𝐚𝐬 𝐛𝐞𝐞𝐧.
He is the fourth Indian to do so. Take a bow, @ishankishan51 💥💥#BANvIND pic.twitter.com/Mqr2EdJUJv
— BCCI (@BCCI) December 10, 2022
131 ಎಸೆತಗಳನ್ನು ಎದುರಿಸಿದ ಇಶಾನ್ ಕಿಶನ್ 10 ಭರ್ಜರಿ ಸಿಕ್ಸರ್ ಮತ್ತು 24 ಬೌಂಡರಿ ಇದ್ದ 210 ರನ್ ಗಳಿಸುವ ಮೂಲಕ ದ್ವಿಶಕತ ಭಾರಿಸಿದರು. ಈ ಮೂಲಕ ಅತಿವೇಗದ ದ್ವಿಶತಕ ಭಾರಿಸಿದ ದಾಖಲೆಯನ್ನು ನಿರ್ಮಿಸಿದರು. ವಿರಾಟ್ ಕೊಹ್ಲಿ ಜೊತೆಗೆ 2ನೇ ವಿಕೆಟ್ಗೆ 290 ರನ್ಗಳ ದಾಖಲೆಯ ಜೊತೆಯಾಟವಾಡಿದರು. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ಗೆ ಬಾಂಗ್ಲಾದೇಶದ ಬೌಲರ್ಗಳು ತತ್ತರಿಸಿ ಹೋದರು.
ವಿರಾಟ್ ಕೊಹ್ಲಿ ಸ್ಫೋಟಕ ಶತಕ!
𝐂𝐄𝐍𝐓𝐔𝐑𝐘 𝐅𝐎𝐑 𝐕𝐈𝐑𝐀𝐓 𝐊𝐎𝐇𝐋𝐈 💥💯
He brings up his 44th ODI ton off 85 deliveries.
He goes past Ricky Ponting to be second on the list in most number of centuries in international cricket.
Live - https://t.co/HGnEqtZJsM #BANvIND pic.twitter.com/ohSZTEugfD
— BCCI (@BCCI) December 10, 2022
ಒಂದೆಡೆ ಇಶಾನ್ ಕಿಶನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದರೆ, ಅತ್ತ ಕೊಹ್ಲಿ ಕೂಡ ಅಬ್ಬರಿಸಲು ಶುರು ಮಾಡಿದ್ದರು. ಕ್ರಿಕೆಟ್ ಮೈದಾನದಲ್ಲಿ ಬಹುದಿನಗಳ ನಂತರ ಶತಕ ದಾಖಲಿಸಿದ ಕೊಹ್ಲಿ ಬ್ಯಾಟ್ ಎತ್ತಿ ಸಂಭ್ರಮಿಸಿದರು. ಇದು ಕೊಹ್ಲಿಯವರ 72ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ 89 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 11 ಬೌಂಡರಿ ಇದ್ದ 112 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟೀಂ ಇಂಡಿಯಾ 40 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 339 ರನ್ ಗಳಿಸಿದೆ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...