ಜೀವನದಲ್ಲಿ ಇಲ್ಲಿಯವರೆಗೆ ನೋಡಿರದಷ್ಟು ದುಡ್ಡು, ಸಂಪತ್ತು ಈ ರಾಶಿಯವರಿಗೆ ನೀಡಲಿದ್ದಾರೆ ಬುಧ ಮತ್ತು ಶುಕ್ರ

Mercury Venus Saturn Transit December 2022:ಡಿಸೆಂಬರ್ ತಿಂಗಳ ಕೊನೆಯಲ್ಲಿ, ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿಗಳು ಒಟ್ಟಿಗೆ ಸೇರಲಿದ್ದಾರೆ. ಈ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪ್ರಭಾವ ಬೀರಲಿದೆ.

ಬೆಂಗಳೂರು : Mercury Venus Saturn Transit December 2022: ಡಿಸೆಂಬರ್ 2022ರ ತಿಂಗಳು ಗ್ರಹಗಳ ಸ್ಥಾನಗಳ ವಿಷಯದಲ್ಲಿ ವಿಶೇಷವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿಸೆಂಬರ್ ಕೊನೆಯ ವಾರದಲ್ಲಿ ಶನಿ, ಬುಧ ಮತ್ತು ಶುಕ್ರ ಮಕರ ರಾಶಿಯಲ್ಲಿರಲಿದೆ. ಶನಿ ಈಗಾಗಲೇ ಮಕರ ರಾಶಿಯಲ್ಲಿದ್ದು, ಡಿಸೆಂಬರ್ 28 ರಂದು, ಬುಧ ಗ್ರಹವು ಮಕರ ರಾಶಿಗೆ ಪ್ರವೇಶಿಸಲಿದೆ. ಇದರ ಜೊತೆಗೆ ಮರುದಿನ ಅಂದರೆ  ಡಿಸೆಂಬರ್ 29 ರಂದು, ಶುಕ್ರ  ಗ್ರಹ ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಡಿಸೆಂಬರ್ ತಿಂಗಳ ಕೊನೆಯಲ್ಲಿ, ಶನಿಯ ರಾಶಿಯಾದ ಮಕರ ರಾಶಿಯಲ್ಲಿ ಬುಧ, ಶುಕ್ರ ಮತ್ತು ಶನಿಗಳು ಒಟ್ಟಿಗೆ ಸೇರಲಿದ್ದಾರೆ. ಈ ಬದಲಾವಣೆಯು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪ್ರಭಾವ ಬೀರಲಿದೆ.  ಇದು  ನಾಲ್ಕು ರಾಶಿಯವರ ಮೇಲೆ ಮಂಗಳಕರ ಪರಿಣಾಮ ಬೀರುತ್ತದೆ. 

2 /5

ಮೇಷ ರಾಶಿ : ಡಿಸೆಂಬರ್‌ನಲ್ಲಿ ಬುಧ-ಶುಕ್ರ ಮತ್ತು ಶನಿಯ ಸಂಯೋಜನೆಯು ಮೇಷ ರಾಶಿಯವರಿಗೆ ಅಗಾಧವಾದ ಲಾಭಗಳನ್ನು ನೀಡುತ್ತದೆ. ವೃತ್ತಿಯಲ್ಲಿ ತ್ವರಿತ ಪ್ರಗತಿ ಕಂಡು ಬರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಗಳಿವೆ. ಹೊಸ ವ್ಯಾಪಾರ ಆರಂಭಿಸುವುದಕ್ಕೆ ಇದು ಸೂಕ್ತ ಸಮಯ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಅನಿರೀಕ್ಷಿತ ಧನಲಾಭವಾಗಲಿದೆ.   

3 /5

ಕನ್ಯಾ ರಾಶಿ : ಮಕರ ರಾಶಿಯಲ್ಲಿ ಬುಧ, ಶುಕ್ರ, ಶನಿ ಒಟ್ಟಿಗೆ ಸೇರಿದ ಕೂಡಲೇ ಕನ್ಯಾ ರಾಶಿಯವರ ಜೀವನದಲ್ಲಿ ಶುಭ ಮುಹೂರ್ತ ಆರಂಭವಾಗಲಿದೆ. ಹೊಸ ಉದ್ಯೋಗಾವಕಾಶ ಸಿಗಲಿದೆ. ವೇತನ ಹೆಚ್ಚಾಗಲಿದೆ. ಬಡ್ತಿ ಸಿಗುವ ಸಾಧ್ಯತೆಗಳೂ ಇವೆ.

4 /5

ಕರ್ಕಾಟಕ ರಾಶಿ : ಶನಿ, ಬುಧ ಮತ್ತು ಶುಕ್ರರು ಕರ್ಕಾಟಕ ರಾಶಿಯವರಿಗೆ  ಅತಿಯಾದ ಲಾಭವನ್ನು ನೀಡುತ್ತಾರೆ. ಆಸ್ತಿ -ಕಾರು ಖರೀದಿಗೆ ಅವಕಾಶಗಳು ಸಿಗಲಿವೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಹೊಸ ರೀತಿಯಲ್ಲಿ ಧನಲಾಭವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಇದ್ದಕ್ಕಿದ್ದಂತೆ ಪೂರ್ವಿಕರ ಆಸ್ತಿಯಲ್ಲಿ ಪಾಲು ಸಿಗಬಹುದು. ಅವಿವಾಹಿತರಿಗೆ ವಿವಾಹವಾಗುವ ಸಾಧ್ಯತೆ ಇದೆ. 

5 /5

ಮೀನ ರಾಶಿ : ಶನಿ-ಬುಧ-ಶುಕ್ರರು ಮೀನ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡಲಿದ್ದಾರೆ. ಹೊಸ ಉದ್ಯೋಗದ ಆಫರ್ ಸಿಗಬಹುದು.   ಆದಾಯದಲ್ಲಿ ಹೆಚ್ಚಳವಾಗಬಹುದು. ವ್ಯಾಪಾರಸ್ಥರಿಗೆ ಹೆಚ್ಚಿನ ಹಣ ಸಿಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)