Gas Cylinder Booking: ಹೊಸ ವರ್ಷಕ್ಕೂ ಮೊದಲೇ ಗುಡ್ ನ್ಯೂಸ್, 1000 ರೂ. ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್

LPG Cylinder Price: ಪ್ರಸ್ತುತ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಮುಖಿಯಾಗುತ್ತಿವೆ. ಆದರೆ, ನ್ಯೂ ಇಯರ್ ಆಚರಣೆಗೂ ಮೊದಲು ನಿಮಗೆ ಒಂದು ಗುಡ್ ನ್ಯೂಸ್ ಇದೆ. ನೀವು ಗ್ಯಾಸ್ ಸಿಲಿಂಡರ್ ಅನ್ನು 1,000 ರೂ.ಗಳ ಅಗ್ಗದ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಅದು ಹೇಗೆ ಸಾಧ್ಯ, ನೀವು ಎಲ್ಲಿಂದ ಅಗ್ಗದ ದರದಲ್ಲಿ ಸಿಲಿಂಡರ್ ಖರೀದಿಸಬಹುದು ಎಂದು ತಿಳಿಯಿರಿ. 

Written by - Yashaswini V | Last Updated : Dec 14, 2022, 10:43 AM IST
  • ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಗಳ ಮಧ್ಯೆ, ನೀವು 1000 ರೂ. ಅಗ್ಗದ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು.
  • ಗ್ಯಾಸ್ ಸಿಲಿಂಡರ್ ಅನ್ನು ಸಂಪೂರ್ಣ 1000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ಎಲ್ಲಿ ಬುಕ್ ಮಾಡಬಹುದು
  • ಅದು ಹೇಗೆ ಸಾಧ್ಯ, ನೀವು ಎಲ್ಲಿಂದ ಅಗ್ಗದ ದರದಲ್ಲಿ ಸಿಲಿಂಡರ್ ಖರೀದಿಸಬಹುದು ಎಂದು ತಿಳಿಯಿರಿ.
Gas Cylinder Booking: ಹೊಸ ವರ್ಷಕ್ಕೂ ಮೊದಲೇ ಗುಡ್ ನ್ಯೂಸ್, 1000 ರೂ. ಕಡಿಮೆ ಬೆಲೆಯಲ್ಲಿ ಬುಕ್ ಮಾಡಿ ಗ್ಯಾಸ್ ಸಿಲಿಂಡರ್  title=
LPG Paytm Offer

LPG Cylinder Price: ಹೊಸ ವರ್ಷಕ್ಕೂ ಮೊದಲು ನಿಮಗೊಂದು ಶುಭ ಸುದ್ದಿ. ಏರುತ್ತಿರುವ ಗ್ಯಾಸ್ ಸಿಲಿಂಡರ್ ಬೆಲೆಗಳ ಮಧ್ಯೆ, ನೀವು 1000 ರೂ. ಅಗ್ಗದ ಬೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಗ್ಯಾಸ್ ಸಿಲಿಂಡರ್ ಅನ್ನು ಸಂಪೂರ್ಣ 1000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ಎಲ್ಲಿ ಬುಕ್ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ? ಸಾಮಾನ್ಯವಾಗಿ, ನೀವು ಸರ್ಕಾರಿ ತೈಲ ಕಂಪನಿಗಳ ಗ್ರಾಹಕ ಸೇವೆಗೆ ಕರೆ ಮಾಡುವ ಮೂಲಕ ನಿಮ್ಮ ಸಿಲಿಂಡರ್ ಅನ್ನು ಬುಕ್ ಮಾಡುತ್ತೀರಿ. ಇದಲ್ಲದೆ, ನೀವು ಆನ್‌ಲೈನ್‌ನಲ್ಲಿಯೂ ಕೂಡ ಸಿಲಿಂಡರ್ ಅನ್ನು ಬುಕ್ ಮಾಡಬಹುದು. ಆದರೆ, ಸಿಲಿಂಡರ್ ಖರೀದಿಯಲ್ಲಿ 1000ರೂ. ರಿಯಾಯಿತಿ ಪಡೆಯಲು ನೀವು ಪೇಟಿಎಂ ಮೂಲಕವೇ ಸಿಲಿಂಡರ್ ಬುಕಿಂಗ್ ಮಾಡಬೇಕಾಗುತ್ತದೆ.

ಹೌದು, ನೀವು ಪೇಟಿಎಂ  ಅಪ್ಲಿಕೇಶನ್ ಮೂಲಕ  ಗ್ಯಾಸ್ ಸಿಲಿಂಡರ್‌ಗಳನ್ನು ಅಗ್ಗವಾಗಿ ಖರೀದಿಸಬಹುದಾಗಿದೆ. ಪೇಟಿಎಂ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ಗ್ರಾಹಕರಿಗೆ 1000ರೂ. ವರೆಗೆ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ. ಇದಕ್ಕಾಗಿ ನೀವು ಕೆಲವು ಹಂತಗಳನ್ನು ಅನುಸರಿಸುವುದು ಅಗತ್ಯ.

ಇದನ್ನೂ ಓದಿ- Income Tax ಪಾವತಿದಾರರಿಗೊಂದು ಬಂಬಾಟ್ ಸುದ್ದಿ, ಶೀಘ್ರದಲ್ಲಿಯೇ ವಿತ್ತ ಸಚಿವರಿಂದ ಘೋಷಣೆ!

ಪೇಟಿಎಂನಲ್ಲಿ 4 ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯ:
ಪೇಟಿಎಂ ಗ್ರಾಹಕರಿಗೆ ಪ್ರಸ್ತುತ ನಾಲ್ಕು ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಾಗುತ್ತಿದೆ. ಇದರಲ್ಲಿ ಗ್ರಾಹಕರು ಐದು ರೂಪಾಯಿಯಿಂದ  1000 ರೂ.ವರೆಗಿನ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಪಡೆಯಬಹುದಾಗಿದೆ.  ಇದಕ್ಕಾಗಿ, GAS1000 ಎಂಬ ಪ್ರೋಮೋ ಕೋಡ್  ಅನ್ನು ಬಳಸಬೇಕು. ಇದರಲ್ಲಿ ಗ್ರಾಹಕರು ಕನಿಷ್ಠ 5 ರೂ. ಮತ್ತು ಗರಿಷ್ಠ 1000 ರೂ. ವರೆಗೆ ಕ್ಯಾಶ್‌ಬ್ಯಾಕ್ ಪ್ರಯೋಜನವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ- Affordable Cars: 2 ರಿಂದ 4 ಲಕ್ಷ ರೂ.ಗಳಲ್ಲಿ ಲಭ್ಯವಿರುವ ಕಾರುಗಳಿವು

ಗ್ಯಾಸ್ ಸಿಲಿಂಡರ್‌ಗಳನ್ನು ಅಗ್ಗವಾಗಿ ಖರೀದಿಸಲು ಪೇಟಿಎಂ ಮೂಲಕ ಈ ರೀತಿ ಸಿಲಿಂಡರ್ ಬುಕ್ ಮಾಡಿ:.
ನೀವೂ ಕೂಡ ಪೇಟಿಎಂನಲ್ಲಿ ಲಭ್ಯವಿರುವ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಪಡೆಯಲು ಬಯಸಿದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ:-
* ಮೊದಲು ಪೇಟಿಎಂ ಅಪ್ಲಿಕೇಶನ್‌ಗೆ ಹೋಗಿ.
* ಇದರಲ್ಲಿ ಬುಕ್ ಗ್ಯಾಸ್ ಸಿಲಿಂಡರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ ನೀವು ಸಿಲಿಂಡರ್ ಬುಕ್ ಮಾಡಲು ಬಯಸುವ ಗ್ಯಾಸ್ ಪೂರೈಕೆದಾರರನ್ನು ಆಯ್ಕೆ ಮಾಡಿ.
* ಭಾರತ್‌ಗಾಸ್, ಎಚ್‌ಪಿ ಗ್ಯಾಸ್, ಇಂಡೇನ್  ಸಿಲಿಂಡರ್ ಇವುಗಳಲ್ಲಿ ನಿಮ್ಮ ಗ್ಯಾಸ್ ಪೂರೈಕೆದಾರ ಕಂಪನಿಯನ್ನು ಆರಿಸಿ.
* ನಂತರ ನಿಮ್ಮ ಎಲ್ಪಿಜಿ ಐಡಿ ಸಂಖ್ಯೆ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
* ನಂತರ ಪ್ರೋಸೀಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮಗೆ ಅನ್ವಯಿಸು ಪ್ರೊಮೊಕೋಡ್ ಅನ್ನು ಕ್ಲಿಕ್ ಮಾಡಬೇಕು.
* ನಿಮ್ಮ ಲಭ್ಯವಿರುವ ಆಯ್ಕೆಗಳಲ್ಲಿ ನಿಮ್ಮ ಇಚ್ಛೆಗೆ ಅನುಸಾರವಾಗಿ ಕೊಡುಗೆಯನ್ನು ಆರಿಸಬಹುದು.
* ಪ್ರೋಮೋ ಕೋಡ್ ಅನ್ನು ನಮೂದಿಸಿದ ನಂತರ ಪೇಮೆಂಟ್ ಮಾಡಿ. ಬಳಿಕ ಕ್ಯಾಶ್‌ಬ್ಯಾಕ್ ಲಭ್ಯವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News