Gold Price Today : ನಿಮ್ಮ ನಗರದಲ್ಲಿ ಎಂದು ಎಷ್ಟಿದೆ ಗೊತ್ತಾ ಚಿನ್ನ ಬೆಳ್ಳಿ ಬೆಲೆ ?

Gold Price Today : ಹಳದಿ ಲೋಹದ ಬೆಲೆ ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 54,110 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,600 ರೂ. ಆಗಿದೆ.

Written by - Ranjitha R K | Last Updated : Dec 21, 2022, 09:04 AM IST
  • ಚಿನ್ನದ ಬೆಲೆ ತಟಸ್ಥ
  • ಬೆಳ್ಳಿ ಬೆಲೆಯಲ್ಲಿ ಇಳಿಕೆ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ನಿಮ್ಮ ನಗರದಲ್ಲಿ ಎಂದು ಎಷ್ಟಿದೆ ಗೊತ್ತಾ ಚಿನ್ನ ಬೆಳ್ಳಿ ಬೆಲೆ ? title=
Gold silver price

ಬೆಂಗಳೂರು : Gold Price Today : ಚಿನ್ನದ ಬೆಲೆಯಲ್ಲಿ ಒಂದು ದಿನ ಏರಿಕೆಯಾದರೆ ಇನ್ನೊಂದು ದಿನ ಇಳಿಮುಖ ಕಾಣುತ್ತಿದೆ. ಆದರೆ ಇಂದು ಬಂಗಾರದ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಹಳದಿ ಲೋಹದ ಬೆಲೆ ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 54,110 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  49,600 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ.

ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 55,280 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 54,110  ದೆಹಲಿಯಲ್ಲಿ 54,260 ರೂ. ಬೆಂಗಳೂರಿನಲ್ಲಿ 54,160 ರೂಪಾಯಿ ಆಗಿದ್ದರೆ, ಹೈದರಾಬಾದ್ ನಲ್ಲಿ54,110 ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  54,110 ರೂಪಾಯಿ ಆಗಿದೆ. 

ಇದನ್ನೂ ಓದಿ : Indian Railways: ರೈಲು ಪ್ರಯಾಣಿಕರೇ ಗಮನಿಸಿ, ಈ ವಸ್ತುಗಳನ್ನು ಎಂದಿಗೂ ರೈಲಿನಲ್ಲಿ ಕೊಂಡೊಯ್ಯಬೇಡಿ

ಬಂಗಾರದಾ ಬೆಲೆ ತಟಸ್ಥವಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ಚೆನ್ನೈಯಲ್ಲಿ 72,500 ರೂಪಾಯಿ ಆಗಿದ್ದರೆ,  ಮುಂಬಯಿಯಲ್ಲಿ 69,300 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ  69,300 ರೂಪಾಯಿ, 
ಕೋಲ್ಕತ್ತಾದಲ್ಲಿಯೂ  69,300 ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 72,500 ರೂಪಾಯಿ, ಹೈದರಾಬಾದ್ ನಲ್ಲಿ 72,500 ರೂಪಾಯಿ, ಕೇರಳದಲ್ಲಿಯೂ 72,500 ರೂಪಾಯಿ ಆಗಿದೆ. 

ಇದನ್ನೂ ಓದಿ : SUV ಖರೀದಿಸಲು ಬಯಸುವವರಿಗೊಂದು ಬಂಬಾಟ್ ಸುದ್ದಿ... ಈ ಅವಕಾಶ ಮಿಸ್ ಮಾಡ್ಕೋಬೇಡಿ

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News