Bay Leaves: ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಈ ಎಲೆಯ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ

Health Tips: ಬಹುತೇಕ ಎಲ್ಲರ ಅಡುಗೆ ಮನೆಗಳಲ್ಲಿ ಸಾಂಬಾರ ಪದಾರ್ಥದ ರೂಪದಲ್ಲಿ ಬಳಕೆಯಾಗುವ ತಮಾಲ ಪತ್ರ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದು ಅನೇಕ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ನೀವು ಈ ಎಲೆಗಳನ್ನು ಉಪಯೋಗಿಸಬಹುದು. ಈ ಎಲೆಗಳನ್ನು ಹೇಗೆ ಉಪಯೋಗಿಸಿದರೆ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 26, 2022, 01:01 PM IST
  • ಕೊಲೆಸ್ಟ್ರಾಲ್ ಜೊತೆಗೆ, ತಮಾಲಪತ್ರ ಮಧುಮೇಹ, ಉಸಿರಾಟದ ಕಾಯಿಲೆಗಳು,
  • ತೂಕ ಇಳಿಕೆಗೆ, ಹಲ್ಲುಗಳನ್ನು ಬಲಪಡಿಸಲು, ಉರಿಯೂತ ಕಡಿಮೆ ಮಾಡಲು ಮತ್ತು
  • ಗಾಯಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ. ಇದರ ಗುಣಧರ್ಮ ಬಿಸಿಯಾಗಿರುತ್ತದೆ.
Bay Leaves: ನಿಮ್ಮ ಅಡುಗೆ ಮನೆಯಲ್ಲಿಯೇ ಸಿಗುವ ಈ ಎಲೆಯ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಿಸಿ  title=
Bay Leaf Benefits To Control Cholesterol

Bay Leaves Health Benefits: ಕೊಲೆಸ್ಟ್ರಾಲ್ ಹೆಚ್ಚಾಗುವುದು ಸಂಭವನೀಯ ಹೃದಯಾಘಾತದ ಸಂಕೇತವಾಗಿದೆ. ಕೊಲೆಸ್ಟ್ರಾಲ್ ಅನ್ನು ಸಮಯ ಇರುವಾಗಲೇ ನಿಯಂತ್ರಿಸದಿದ್ದರೆ, ಅದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಕಾಯಿಲೆಗಳಿಗೆ ಮಾತ್ರವಲ್ಲದೆ ಮಧುಮೇಹಕ್ಕೂ ಕಾರಣವಾಗಬಹುದು. ಕೆಲವು ಮನೆಮದ್ದುಗಳನ್ನು ಪ್ರಯತ್ನಿಸುವ ಮೂಲಕ ನಾವು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ನಮ್ಮ ಅಡುಗೆಮನೆಯಲ್ಲಿರುವ ವಸ್ತುಗಳು ಕೂಡ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಉಪಯುಕ್ತವಾಗಿವೆ. ನಮ್ಮ ಮನೆಗಳಲ್ಲಿ ಮಸಾಲೆ ಪದಾರ್ಥದ ರೂಪದಲ್ಲಿ ಬಳಕೆಯಾಗುವ ತಮಾಲ ಪತ್ರದ ಎಲೆಗಳು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿವೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ತಮಾಲಪತ್ರ ಹೇಗೆ ಸೇವಿಸಬೇಕು ತಿಳಿದುಕೊಳ್ಳೋಣ ಬನ್ನಿ.

ತಮಾಳಪತ್ರದಲ್ಲಿರುವ ಪೋಷಕಾಂಶಗಳು
ತಮಾಲ ಪತ್ರ ಅನೇಕ ಔಷಧೀಯ ಗುಣಗಳನ್ನು ಹೊಂದಿವೆ. ಕ್ಯಾಲ್ಸಿಯಂ, ಕಬ್ಬಿಣದ ಮ್ಯಾಂಗನೀಸ್ ಮುಂತಾದ ಖನಿಜಗಳು ಇದರಲ್ಲಿ ಕಂಡುಬರುತ್ತವೆ. ತಮಾಲಪತ್ರ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ನಿರೋಧಕಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ನೀರಿನಲ್ಲಿ ಕುದಿಸಿ ಸೇವಿಸಬಹುದು
ತಮಾಲಪತ್ರ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ನಿತ್ಯ 4-5 ತಮಾಲಪತ್ರ ಎಲೆಗಳನ್ನು ಕುದಿಸಿ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ತಮಾಲಪತ್ರ ಎಲೆಗಳ ಚಹಾ
ಈ ಎಲೆಗಳನ್ನು ಕುದಿಸಿ ಮತ್ತು ಜೇನುತುಪ್ಪವನ್ನು ಸೇರಿಸಿ ಮತ್ತು ಗಿಡಮೂಲಿಕೆ ಚಹಾವನ್ನು ತಯಾರಿಸಿ ನೀವು ಕುಡಿಯಬಹುದು. ಇದಕ್ಕೆ ಬೇಕಾದರೆ ನೀವು ನಿಂಬೆ ರಸವನ್ನು ಕೂಡ ಮಿಶ್ರಣ ಮಾಡಬಹುದು.  ಈ ಚಹಾವು ಕುಡಿಯಲು ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ.

ಅಡುಗೆಯಲ್ಲಿ ಕೂಡ ತಮಾಲಪತ್ರ ಬಳಸಬಹುದು
ಸಾಮಾನ್ಯವಾಗಿ ಈ ಎಲೆಗಳು ತರಕಾರಿಗಳ ಸ್ವಾದವನ್ನು ಹೆಚ್ಚಿಸುತ್ತದೆ. ಈ ಎಲೆಗಳನ್ನು ವಿಶೇಷವಾಗಿ ಗ್ರೇವಿ ತರಕಾರಿಗಳಲ್ಲಿ ಬಳಸಲಾಗುತ್ತದೆ. ಈ ಎಲೆಯನ್ನು ಕಡಿಮೆ ಎಣ್ಣೆ ಮತ್ತು ಮಸಾಲೆಗಳೊಂದಿಗೆ ತರಕಾರಿಗಳಿಗೆ ಸೇರಿಸಬಹುದು, ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Health Care Tips: ಆಹ್ಲಾದಕರ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡುತ್ತವೆ ಈ ಕಾಯಿಲೆಗಳು.. ಎಚ್ಚರ!

ಈ ರೋಗಗಳಲ್ಲಿಯೂ ಇದು ಪ್ರಯೋಜನಕಾರಿಯಾಗಿದೆ
ಕೊಲೆಸ್ಟ್ರಾಲ್ ಜೊತೆಗೆ, ತಮಾಲಪತ್ರ ಮಧುಮೇಹ, ಉಸಿರಾಟದ ಕಾಯಿಲೆಗಳು, ತೂಕ ಇಳಿಕೆಗೆ, ಹಲ್ಲುಗಳನ್ನು ಬಲಪಡಿಸಲು, ಉರಿಯೂತ ಕಡಿಮೆ ಮಾಡಲು ಮತ್ತು ಗಾಯಗಳನ್ನು ಗುಣಪಡಿಸಲು ಇದು ಸಹಾಯ ಮಾಡುತ್ತದೆ. ಇದರ ಗುಣಧರ್ಮ ಬಿಸಿಯಾಗಿರುತ್ತದೆ. ಚಳಿಗಾಲದಲ್ಲಿ ತಮಾಲಪತ್ರ ಎಲೆಗಳ ಸೇವನೆಯು ಶೀತ ಮತ್ತು ಜ್ವರದಿಂದ ನಿಮ್ಮನ್ನು ದೂರವಿರಿಸುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಊತ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ.

ಇದನ್ನೂ ಓದಿ-Pulses Side Effects: ಅಗತ್ಯಕ್ಕಿಂತ ಹೆಚ್ಚು ಬೇಳೆ ಸೇವಿಸುತ್ತಿರಾ? ಈಗಲೇ ಎಚ್ಚೆತ್ತುಕೊಳ್ಳಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News