Ketu Astrology: ಕೇತುವಿನ ಪ್ರಭಾವದಿಂದ 2023ರಲ್ಲಿ ಈ ರಾಶಿಯವರ ಮೇಲೆ ಅಶುಭ ಪರಿಣಾಮ!

ಕೇತು ಪರಿಣಾಮ 2023: ಹೊಸ ವರ್ಷದಲ್ಲಿ ನೆರಳು ಗ್ರಹವೆಂದು ಕರೆಯಲ್ಪಡುವ ಕೇತುವು ವರ್ಷವಿಡೀ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವ ರಾಶಿಗಳ ಮೇಲೆ ಕೇತು ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಇದಕ್ಕೆ ಪರಿಹಾರ ಕ್ರಮಗಳೇನು ಅನ್ನೋದನ್ನು ತಿಳಿಯಿರಿ.

Written by - Puttaraj K Alur | Last Updated : Jan 5, 2023, 05:28 PM IST
  • 2023ರ ಈ ವರ್ಷ ಕೇತುವಿನ ಪ್ರಭಾವದಿಂದಾಗಿ ಕೆಲವು ಅಶುಭ ಘಟನೆಗಳು ನಡೆಯುತ್ತವೆ
  • ಪ್ರತಿದಿನವೂ ಕೇತುವಿನ ಬೀಜ ಮಂತ್ರ ಜಪಿಸುವುದರಿಂದ ಅಶುಭ ಪರಿಣಾಮ ದೂರವಾಗುತ್ತವೆ
  • ವಿಘ್ನ ನಿವಾರಕ ಗಣಪತಿಯನ್ನು ಪೂಜಿಸುವುದರಿಂದ ಕೇತುವಿನ ವಕ್ರದೃಷ್ಟಿಯಿಂದ ಪಾರಾಗಬಹುದು
Ketu Astrology: ಕೇತುವಿನ ಪ್ರಭಾವದಿಂದ 2023ರಲ್ಲಿ ಈ ರಾಶಿಯವರ ಮೇಲೆ ಅಶುಭ ಪರಿಣಾಮ! title=
ಕೇತು ಪರಿಣಾಮ 2023

ನವದೆಹಲಿ: 2023ರ ಹೊಸ ವರ್ಷ ಪ್ರಾರಂಭವಾಗಿದೆ. ಈ ವರ್ಷವೂ ಅನೇಕ ಗ್ರಹಗಳು ಮಾನವ ಜೀವನದ ಮೇಲೆ ಅಶುಭ ಪರಿಣಾಮ ಬೀರುತ್ತವೆ. ರಾಹು ಮತ್ತು ಕೇತುಗಳನ್ನು ನೆರಳು ಗ್ರಹಗಳೆಂದು ಪರಿಗಣಿಸಲಾಗುತ್ತದೆ. 2023ನೇ ವರ್ಷವು ಕೇತುವಿನ ಪ್ರಭಾವಕ್ಕೆ ಒಳಗಾಗಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನಾವು 2023ರ ಸಂಖ್ಯೆಗಳನ್ನು ಲೆಕ್ಕ ಹಾಕಿದ್ರೆ, ನಂತರ ಸಂಖ್ಯೆ 7 ರಚನೆಯಾಗುತ್ತಿದೆ. ಕೇತು ರಾಡಿಕ್ಸ್ 7ರ ಅಧಿಪತಿ.

ಇಂತಹ ಪರಿಸ್ಥಿತಿಯಲ್ಲಿ ಈ ವರ್ಷ 2023ರ ಕೇತುವಿನ ಪ್ರಭಾವದಿಂದಾಗಿ ಕೆಲವು ಅಶುಭ ಘಟನೆಗಳು ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಎಚ್ಚರಿಕೆಯ ಅವಶ್ಯಕತೆಯಿದೆ. ಅದೇ ರೀತಿ ಕೆಲವು ಸುಲಭವಾದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಈ ಕೇತುವಿನ ಕರಿನೆರಳಿನಿಂದ ಮುಕ್ತಿ ಪಡೆಯಬಹುದು.  

ಇದನ್ನೂ ಓದಿAstrology: ಅತ್ಯಂತ ಅಶುಭ ನಕ್ಷತ್ರ ಇದು, ಜನವರಿ ತಿಂಗಳಿನಲ್ಲಿ ಯಾವ-ಯಾವ ದಿನ ಈ ನಕ್ಷತ್ರ ಇರಲಿದೆ?

ಕೇತು ಬೀಜ ಮಂತ್ರ

8 ಮಂಗಳವಾರಗಳ ಕಾಲ ನದಿ ಅಥವಾ ಹರಿಯುವ ನೀರಿನಲ್ಲಿ 8 ಕಲ್ಲಿದ್ದಲನ್ನು ಹರಿಬಿಡಿ. ಇದರಿಂದ ಕೇತುವಿನ ಅಡೆತಡೆ ನಿವಾರಣೆಯಾಗಿ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ. ಮತ್ತೊಂದೆಡೆ ಕೇತುವಿನ ಬೀಜ ಮಂತ್ರ ‘ಓಂ ಸ್ರಾನ್ ಶ್ರೀಂ ಸ್ರೋಂಸ: ಕೇತ್ವೇ ನಮಃ’ ಎಂದು ಪ್ರತಿದಿನ ಜಪಿಸಿ. ಇದರಿಂದ ಕೇತುವಿನ ಅಶುಭ ಪರಿಣಾಮಗಳು ದೂರವಾಗುತ್ತವೆ.

ನಾಯಿಗಳಿಗೆ ಆಹಾರ ನೀಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ‘ಓಂ ನಮೋ: ಭಗವತೇ ವಾಸುದೇವಾಯ ನಮಃ’ ಎಂಬ ಮಂತ್ರವನ್ನು ಕಾಳಿಯ ನಾಗನ ಮೇಲೆ ನರ್ತಿಸುವ ಕೃಷ್ಣನ ಚಿತ್ರದ ಮುಂದೆ ಪಠಿಸಬೇಕು. 2 ಬಣ್ಣಗಳ ರೊಟ್ಟಿಯನ್ನು ನಾಯಿಗಳಿಗೆ ತಿನ್ನಿಸಿ. ಕೇತುವಿನ ಋಣಾತ್ಮಕ ಪರಿಣಾಮವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬಾಬಾ ಭೈರವನಾಥನನ್ನು ಪೂಜಿಸುವುದು ಮತ್ತು ಶ್ರೀ ಭೈರವ ಚಾಲೀಸಾವನ್ನು ಪಠಿಸುವುದರಿಂದ ಇದು ಸರಿಯಾಗುತ್ತದೆ.

ಇದನ್ನೂ ಓದಿ: Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು

ದಾನ ಮಾಡಿ

ವಿಘ್ನ ನಿವಾರಕ ಗಣಪತಿ ಎಲ್ಲಾ ರೀತಿಯ ತೊಂದರೆಗಳನ್ನು ದೂರ ಮಾಡುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಕೇತುವಿನ ಪ್ರಭಾವವನ್ನು ತಪ್ಪಿಸಲು, ಅವನನ್ನು ಪೂಜಿಸುವುದು ತುಂಬಾ ಪ್ರಯೋಜನಕಾರಿ. ಕೇತುವನ್ನು ಒಲಿಸಿಕೊಳ್ಳಲು ಮಾವಿನ ಪುಡಿ, ನಿಂಬೆಹಣ್ಣು, 7 ಆಯುಧಗಳು, ಕಪ್ಪು ಎಳ್ಳನ್ನು ದಾನ ಮಾಡಬೇಕು.

(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News