India vs Sri Lanka 3rd T20I, Playing 11 : ಭಾರತ ಕ್ರಿಕೆಟ್ ತಂಡ ಪ್ರಸ್ತುತ ಶ್ರೀಲಂಕಾ ವಿರುದ್ಧ ಟಿ20 ಸರಣಿಯನ್ನು ಆಡುತ್ತಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 16 ರನ್ಗಳಿಂದ ಸೋಲಿಸಿತ್ತು. ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಈ ಗೆಲುವಿನೊಂದಿಗೆ ಪ್ರವಾಸಿ ತಂಡ ಪ್ರಸ್ತುತ ಮೂರು ಪಂದ್ಯಗಳ ಟಿ20ಐ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಇದೀಗ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ರಾಜ್ಕೋಟ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ನಾಯಕ ಪಾಂಡ್ಯ ಪ್ಲೇಯಿಂಗ್-11ರಲ್ಲಿ ಯಾರಿಗೆ ಅವಕಾಶ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಗಿಲ್ ಮತ್ತು ರಾಹುಲ್ ತ್ರಿಪಾಠಿ ಪದಾರ್ಪಣೆ
ನಾಯಕ ಹಾರ್ದಿಕ್ ಪಾಂಡ್ಯ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಇಬ್ಬರು ಆಟಗಾರರಿಗೆ ಚೊಚ್ಚಲ ಅವಕಾಶ ನೀಡಿದ್ದಾರೆ. ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಮುಂಬೈನಲ್ಲಿ ಟಿ20 ಅಂತರಾಷ್ಟ್ರೀಯ ಪದಾರ್ಪಣೆ ಮಾಡಿದರೆ, ರಾಹುಲ್ ತ್ರಿಪಾಠಿ ಪುಣೆ ಟಿ20 ಪಂದ್ಯದಲ್ಲಿ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಇವರಿಬ್ಬರು ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬುದು ಈಗ ಕುತೂಹಲ ಮೂಡಿಸಿದೆ.
ಇದನ್ನೂ ಓದಿ : Best Selling SUV: ಡಿಸೆಂಬರ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 SUV ಕಾರುಗಳು
ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಹಾರ್ದಿಕ್!
ರಾಜ್ಕೋಟ್ ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವೇಗಿ ಅರ್ಷದೀಪ್ ಸಿಂಗ್ ಅವರನ್ನು ಪ್ಲೇಯಿಂಗ್-11 ರಿಂದ ಕೈಬಿಡಬಹುದು. ಪುಣೆಯಲ್ಲಿ ಅವರು 5 ನೋ ಬಾಲ್ಗಳನ್ನು ಎಸೆದಿದ್ದರು. ಆಗ ಅವರನ್ನು ಏಕಾಏಕಿ ತಂಡಕ್ಕೆ ಸೇರಿಸಿಕೊಂಡಿದ್ದು, ಸಂಪೂರ್ಣ ಫಿಟ್ ಆಗಿಲ್ಲ ಎಂಬ ಹಲವು ಪ್ರಶ್ನೆಗಳು ಮೂಡಿವೆ. ಭಾರತಕ್ಕೆ ಹರ್ಷಲ್ ಪಟೇಲ್ ಮತ್ತು ಮುಖೇಶ್ ಕುಮಾರ್ ಅವರ ಆಯ್ಕೆಗಳಿವೆ. ಶುಭಮನ್ ಗಿಲ್ ಬದಲಿಗೆ ರಿತುರಾಜ್ ಗಾಯಕ್ವಾಡ್ ಅವರನ್ನು ಕಣಕ್ಕಿಳಿಸಬಹುದು. ಮೊದಲೆರಡು ಟಿ20ಗಳಲ್ಲಿ ಗಿಲ್ ತಮ್ಮ ಬ್ಯಾಟ್ನಿಂದ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಹಾಗೆ, ರಿತುರಾಜ್ ತಂಡದೊಂದಿಗೆ ಇದ್ದಾರೆ ಆದರೆ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ.
ಚಹಾಲ್ ಅಥವಾ ಸುಂದರ್?
ಇದರೊಂದಿಗೆ, ನಾಯಕ ಪಾಂಡ್ಯ ಸ್ಪಿನ್ನರ್ ಅಥವಾ ಆಲ್ ರೌಂಡರ್ ಅನ್ನು ಆಯ್ಕೆ ಮಾಡಬಹುದು. ಪುಣೆಯಲ್ಲಿ 207 ರನ್ಗಳ ಗುರಿ ಬೆನ್ನತ್ತಿದ ಭಾರತ 190 ರನ್ ಗಳಿಸಿತ್ತು. ಇದೀಗ ನಾಯಕ ಪಾಂಡ್ಯ ವಾಷಿಂಗ್ಟನ್ ಸುಂದರ್ ಅವರನ್ನು ಆಲ್ ರೌಂಡರ್ ಆಗಿ ತಂಡಕ್ಕೆ ಕರೆತರುತ್ತಾರೋ ಅಥವಾ ಚಹಲ್ ನನ್ನ ಪ್ಲೇಯಿಂಗ್-11ರಲ್ಲಿ ಉಳಿಸಿಕೊಳ್ಳುತ್ತಾರೋ ಕಾದು ನೋಡಬೇಕಿದೆ. ಪ್ಲೇಯಿಂಗ್ -11ರಲ್ಲಿ ಪಾಂಡ್ಯ ಬದಲಾವಣೆ ತರುವುದು ಖಚಿತವಾಗಿದ್ದು, ಯಾರಿಗೆ ಅವಕಾಶ ಸಿಗಲಿದೆ ಎಂಬ ಮಾಹಿತಿ ಟಾಸ್ ವೇಳೆಯೇ ಲಭ್ಯವಾಗಲಿದೆ.
ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.