Yash Birthday : ಇಂದು ರಾಕಿಂಗ್ ಸ್ಟಾರ್ ಯಶ್ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್ ಫ್ಯಾಮಿಲಿ ಜೊತೆ ದುಬೈಗೆ ಹಾರಿದ್ದಾರೆ. ಅಭಿಮಾನಿಗಳಿಗೆ ಬರ್ತ್ ಡೇ ದಿನ ಸಿಗುವುದಿಲ್ಲ ಎಂದು ಮೊದಲೇ ಪತ್ರದ ಮೂಲಕ ಮೊದಲೇ ಯಶ್ ಸಂದೇಶ ನೀಡಿದ್ದರು. ಯಶ್ ಬೆಳೆದು ಬಂದ ಹಾದಿ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. ಇಂದ ಕೋಟಿ ಕೋಟಿ ಸಂಭಾವನೆ ಪಡೆಯುವ ಯಶ್ ಅವರ ಮೊದಲ ಸಂಭಾವನೆ ಎಷ್ಟು ಎಂಬ ಕುತೂಹಲ ಅನೇಕರಲ್ಲಿದೆ.
1986 ರ ಜನವರಿ 8ರಂದು ಹಾಸನ ಜಿಲ್ಲೆಯ ಬೂವನಹಳ್ಳಿಯಲ್ಲಿ ಜನಿಸಿದ ನವೀನ್ ಕುಮಾರ್ ಗೌಡ ಅವರ ತಂದೆ ಅರುಣ್ ಕುಮಾರ್ KSRTCಯಲ್ಲಿ ಬಸ್ ಡ್ರೈವರ್ ಆಗಿದ್ದರು. ಇವರ ತಾಯಿ ಪುಷ್ಪ, ತಂಗಿ ನಂದಿನಿ. ಕುಟುಂಬ ನಿರ್ವಹಣೆಗೆ ಮೈಸೂರಿನಲ್ಲಿ ಯಶ್ ಅವರ ತಾಯಿ ದಿನಸಿ ಅಂಗಡಿ ನಡೆಸುತ್ತಿದ್ದರು. ಈ ವೇಳೆ ಯಶ್ ಮಹಾರಾಜ ಎಜುಕೇಶನ್ ಸೊಸೈಟಿಯಲ್ಲಿ ಓದುತ್ತಿದ್ದರು. ನಟನೆಯತ್ತ ಮುಂದುವರಿಯಬೇಕೆಂಬ ಯಶ್ ಅವರಿಗಿದ್ದರೆ, ಮಗ ಸರ್ಕಾರಿ ಅಧಿಕಾರಿ ಆಗಬೇಕೆಂಬ ಆಸೆ ಅಪ್ಪನದಾಗಿತ್ತು.
ಇದನ್ನೂ ಓದಿ : Yash Birthday : ರಾಕಿಂಗ್ ಸ್ಟಾರ್ಗೆ "ರಾಕಿ" ಅಂತ ಹೆಸರಿಟ್ಟವರು ಯಾರು ಗೊತ್ತೇ?
ಕೊನೆಗೆ 2003ರಲ್ಲಿ ಬೆಂಗಳೂರಿಗೆ ಬಂದ ಯಶ್ ಬೆನಕ ಡ್ರಾಮಾ ಟ್ರೂಪ್ ಸೇರಿದರು. ಬ್ಯಾಕ್ ಸ್ಟೇಜ್ ಕೆಲಸಗಾರನಾಗಿ ವೃತ್ತಿ ಆರಂಭಿಸಿದರು. ಆಗ ಯಶ್ ಪಡೆಯುತ್ತಿದ್ದ ಸಂಬಳ ದಿನಕ್ಕೆ 50 ರೂಪಾಯಿ. ಿಲ್ಲಿ ಕೆಲಸ ಮಾಡುತ್ತಲೇ ಬೆಂಗಳೂರಿನ KLE ಆರ್ಟ್ಸ್ ಕಾಲೇಜಿನಲ್ಲಿ BA ಪದವಿ ಪೂರ್ಣಗೊಳಿಸಿದರು. ನಂತರ ರಾಧಿಕಾ ಪಂಡಿತ್ ಜತೆ ನಂದಗೋಕುಲ ಧಾರಾವಾಹಿಯಲ್ಲಿ ನಟಿಸಿದರು. ಆ ಬಳಿಕ ಮಳೆಬಿಲ್ಲು, ಪ್ರೀತಿ ಇಲ್ಲದ ಮೇಲೆ ಹೀಗೆ ಹಲವು ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸಿದರು. 2007ರಲ್ಲಿ ಜಂಬದ ಹುಡುಗಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು.
2011ರಲ್ಲಿ ರಿಲೀಸ್ ಆದ ಕಿರಾತಕ ಸಿನಿಮಾ ಯಶ್ ಸಿನಿ ಜರ್ನಿಗೆ ಬಿಗ್ ಬ್ರೇಕ್ ನೀಡಿತು. ಹಳ್ಳಿ ಹೈದನ ಪಾತ್ರದ ಮೂಲಕ ಯಶ್ ಎಲ್ಲರ ಮನಗೆದ್ದರು. ನಂತರ ತೆರೆಗೆ ಬಂದ ಲಕ್ಕಿ, ಡ್ರಾಮಾ, ಗೂಗ್ಲಿ, ರಾಜಾಹುಲಿ, ಗಜಕೇಸರಿ, ರಾಮಾಚಾರಿ ಹೀಗೆ ಅನೇಕ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡವು. ಆ ಬಳಿಕ 2014ರಲ್ಲಿ ಬಿಡುಗಡೆಯಾದ Mr & Mrs ರಾಮಾಚಾರಿ ಬಾಕ್ಸಾಫೀಸ್ ನಲ್ಲಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿ ರೆಕಾರ್ಡ್ ಬರೆಯಿತು.
ಇದನ್ನೂ ಓದಿ : Kichcha Sudeep : ಚಿಕ್ಕಬಳ್ಳಾಪುರ ಉತ್ಸವದಲ್ಲಿ 'ಕಿಚ್ಚ ಸುದೀಪ್ ಹವಾ', ಹೇಗಿದೆ ನೋಡಿ!
2016 ಡಿಸೆಂಬರ್ 9 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಹುಕಾಲದಿಂದಲೂ ಪ್ರೀತಿಯಲ್ಲಿದ್ದ ಯಶ್ ಹಾಗೂ ರಾಧಿಕಾ ದಂಪತಿ ಸಪ್ತಪದಿ ತುಳಿದರು. ಈ ಜೋಡಿಗೆ ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ.
2018 ಡಿಸೆಂಬರ್ ನಲ್ಲಿ ತೆರೆಕಂಡ ಯಶ್ ಚಿತ್ರ ಕೆಜಿಎಫ್, ರಿಲೀಸ್ ಆದ 5 ದಿನದಲ್ಲಿ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಆ ಬಳಿಕ ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್ 2 ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತು. 1400 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ನಿರ್ಮಿಸಿತು. ಕೆಜಿಎಫ್ ಸಿನಿಮಾ ಮೂಲಕ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಇದೀಗ ವಿಶ್ವದೆಲ್ಲೆಡೆ ರಾಕಿ ಭಾಯ್ ಹೆಸರಿನಿಂದ ಚಿರಪರಿಚಿತರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.