Yash Birthday : ರಾಕಿಂಗ್ ಸ್ಟಾರ್‌ಗೆ "ರಾಕಿ" ಅಂತ ಹೆಸರಿಟ್ಟವರು ಯಾರು ಗೊತ್ತೇ?

Yash Birthday : ಇಂದು ರಾಕಿಂಗ್‌ ಸ್ಟಾರ್‌ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 36ನೇ ವರ್ಷದ ಹುಟ್ಟು ಹಬ್ಬವನ್ನು ರಾಕಿ ಭಾಯ್‌ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್​ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದಾರೆ. 

Written by - Chetana Devarmani | Last Updated : Jan 8, 2023, 08:15 AM IST
  • ಇಂದು ರಾಕಿಂಗ್‌ ಸ್ಟಾರ್‌ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ
  • 36ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ರಾಕಿ ಭಾಯ್‌
  • "ರಾಕಿ" ಅಂತ ರಾಕಿಂಗ್ ಸ್ಟಾರ್‌ಗೆ ಹೆಸರಿಟ್ಟವರು ಯಾರು ಗೊತ್ತೇ?
Yash Birthday : ರಾಕಿಂಗ್ ಸ್ಟಾರ್‌ಗೆ "ರಾಕಿ" ಅಂತ ಹೆಸರಿಟ್ಟವರು ಯಾರು ಗೊತ್ತೇ?  title=
ಯಶ್‌

Yash Birthday : ಇಂದು ರಾಕಿಂಗ್‌ ಸ್ಟಾರ್‌ ಯಶ್‌ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 36ನೇ ವರ್ಷದ ಹುಟ್ಟು ಹಬ್ಬವನ್ನು ರಾಕಿ ಭಾಯ್‌ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್​ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದಾರೆ. ಅಭಿಮಾನಿಗಳಿಗೆ ಬರ್ತ್‌ ಡೇ ದಿನ ಸಿಗುವುದಿಲ್ಲ ಎಂದು ಮೊದಲೇ ಪತ್ರದ ಮೂಲಕ ಯಶ್‌ ಸಂದೇಶ ನೀಡಿದ್ದರು.  ಯಶ್ ಬೆಳೆದು ಬಂದ ಹಾದಿ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ. 

ಇದನ್ನೂ ಓದಿ : Kichcha Sudeep : ಚಿಕ್ಕಬಳ್ಳಾಪುರ ಉತ್ಸವದಲ್ಲಿ 'ಕಿಚ್ಚ ಸುದೀಪ್ ಹವಾ', ಹೇಗಿದೆ ನೋಡಿ!

ಕಿರುತೆರೆಯಿಂದ ಬಣ್ಣದ ಲೋಕದಲ್ಲಿ ಕೆರಿಯರ್‌ ಆರಂಭಿಸಿ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕರಾಗಿ ಬೆಳೆದವರು ಯಶ್‌. ಇಂದು ನ್ಯಾಷನಲ್‌ ಸ್ಟಾರ್‌ ಆಗಿರುವ ಯಶ್ ವೃತ್ತಿಜೀವನಕ್ಕೆ ಟರ್ನ್‌ ಕೊಟ್ಟದ್ದು, 14 ವರ್ಷದ ಹಿಂದೆ ಬಂದ ಸಿನಿಮಾ. ಆ ಸಿನಿಮಾ ಮೂಲಕ ಯಶ್‌ ಪೂರ್ಣ ಪ್ರಮಾಣದ ನಾಯಕರಾದರು. ಈ ಚಿತ್ರವನ್ನು ಡೈರೆಕ್ಟರ್ ನಾಗೇಂದ್ರ ಪ್ರಸಾದ್ ನಿರ್ದೇಶಿಸಿದ್ದರು. ಇವರೇ ಯಶ್‌ ಅವರನ್ನು ಪೂರ್ಣ ಪ್ರಮಾಣದ ನಾಯಕ ನಟನನ್ನಾಗಿ ಪರಿಚಯಸಿದವರು ಎಂದರೆ ತಪ್ಪಲ್ಲ.

ಕರುನಾಡಲ್ಲಿ ಮಾತ್ರವಲ್ಲ ರಾಕಿಂಗ್ ಸ್ಟಾರ್ ಯಶ್ ಈಗ ದೇಶ ವಿದೇಶದಲ್ಲೂ ರಾಕಿ ಭಾಯ್ ಎಂದೇ ಚಿರಪರಿಚಿತರಾಗಿದ್ದಾರೆ. ಯಶ್ ಪೂರ್ಣ ಪ್ರಮಾಣದ ನಾಯಕನಾದ ಸಿನಿಮಾದಲ್ಲಿ ಬಿಯಾಂಕಾ ದೇಸಾಯಿ ಅನ್ನೋ ಯುವ ನಾಯಕಿ ಅವರ ಜೊತೆ ನಟಿಸಿದ್ದರು. ಯಶ್‌ ಸಿನಿ ಜರ್ನಿಗೆ ಕಿಕ್‌ ಕೊಟ್ಟ ಸಿನಿಮಾ "Rocky". ರಾಕಿ ಸಿನಿಮಾ ಮೂಲಕ ಯಶ್ ಪೂರ್ಣ ಪ್ರಮಾಣದ ನಾಯಕ ನಟನಾದರು. ಈ ಚಿತ್ರದಲ್ಲಿ ಯಶ್‌ ರಾಕಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದರು. ರಾಕಿ ಚಿತ್ರ ಸ್ಯಾಂಡಲ್‌ವುಡ್‌ಗೆ ಒಬ್ಬ ರಾಕಿ ಹೆಸರಿನ ಪಾತ್ರವನ್ನ ಮಾತ್ರವಲ್ಲ ಅದ್ಭುತ ಕೌಶಲ್ಯದ ಹೀರೋನನ್ನ ಪರಿಚಯಿಸಿತು. 14 ವರ್ಷದ ಅಂದಿನ ರಾಕಿಯೇ ಇಂದು ಎಲ್ಲರ ಪ್ರೀತಿಯ ರಾಕಿ ಭಾಯ್‌.  

ಇದನ್ನೂ ಓದಿ : Yash Birthday: ಇದು ರಾಕಿ ಭಾಯ್ ‌ರಿಯಲ್‌ ನೇಮ್‌! ಯಶ್ ಎಂಬ ಹೆಸರು ಬಂದಿದ್ದು ಹೇಗೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News