ನವದೆಹಲಿ: ಸರ್ಕಾರಿ ಅಂಕಿ ಅಂಶದ ಪ್ರಕಾರ ದೇಶದ ಜಿಡಿಪಿ ಬೆಳವಣಿಗೆ ದರ ತ್ರೈಮಾಸಿಕ ಅವಧಿಯಲ್ಲಿ ಈಗ ಶೇ.8.2 ರಿಂದ ಶೇ,7.1 ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ.
ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ 8.2ರಷ್ಟು ಬೆಳವಣಿಗೆ ಕಂಡಿದ್ದ ಜಿಡಿಪಿ, ಈಗ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ 7.1 ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ ಎಂದು ಸರ್ಕಾರಿ ಅಂಕಿ ಅಂಶಗಳ ಮೂಲಕ ತಿಳಿದುಬಂದಿದೆ.
India's GDP growth in Q2 slows down to 7.1 pct from 8.2 pct in Q1 https://t.co/U7YRnzereC
— Zee Business (@ZeeBusiness) November 30, 2018
ವಾರ್ಷಿಕ ಏಜೆನ್ಸಿ ರಾಯಿಟರ್ಸ್ ಅರ್ಥಶಾಸ್ತ್ರಜ್ಞರ ಸಮೀಕ್ಷೆಯಲ್ಲಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಾರ್ಷಿಕ ಆರ್ಥಿಕ ಬೆಳವಣಿಗೆಯು ಶೇ 7.4 ರಷ್ಟಿದೆ ಎಂದು ಹೇಳಿದೆ.ಸ್ಥಿರ ಜಿಡಿಪಿಯು (2011-12)ಯು 2018-19ರ ಎರಡನೇ ತ್ರೈಮಾಸಿಕದಲ್ಲಿ ರೂ. 33.98 ಲಕ್ಷ ಕೋಟಿ ರೂ, ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಅದು 31.72 ಲಕ್ಷ ಕೋಟಿ ರೂ.ಗಳಾಗಿತ್ತು ಎಂದು ತಿಳಿಸಿದೆ.
ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದ ವೇಳೆ ಆರ್ಥಿಕ ಬೆಳವಣಿಗೆ ಶೇ. 7.4 ಕ್ಕೆ ಹೆಚ್ಚಳವಾಗಲಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ.ಈ ಹಿಂದಿನ ವರ್ಷದಲ್ಲಿ ಇದ್ದ 6.7 ಕ್ಕಿಂತ ಇದು ಅಧಿಕವಾಗಿದೆ ಎಂದು ಅದು ತಿಳಿಸಿದೆ