Sabarimala Makaravilakku 2023: ಶಬರಿಗಿರಿವಾಸನಿಗೆ ಈ ವಿಶೇಷ ಪೂಜೆ ನಡೆಯುತ್ತಿದ್ದಂತೆ ಬಾನಿನಲ್ಲಿ ತಕ್ಷಣ ಗೋಚರಿಸುತ್ತೆ ‘ಪರಂಜ್ಯೋತಿ’

Makara Sankranti 2023: ಮಹಿಷಿ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.  

Written by - Bhavishya Shetty | Last Updated : Jan 14, 2023, 04:00 PM IST
    • ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯನ್ನು "ಹರಿಹರಸುತ” ಎಂದು ಕರೆಯಲಾಗುತ್ತದೆ
    • ಶಿವ ಮತ್ತು ಮಹಾವಿಷ್ಣುವಿನ ಮಗುವಾಗಿ ಜನ್ಮ ತಾಳಿದ ಅಯ್ಯಪ್ಪ
    • ಪಂಬಾ ನದಿಯ ತಟದಲ್ಲಿ ಪಂದಳ ರಾಜನಿಗೆ ಸಿಗುತ್ತಾರೆ
Sabarimala Makaravilakku 2023: ಶಬರಿಗಿರಿವಾಸನಿಗೆ ಈ ವಿಶೇಷ ಪೂಜೆ ನಡೆಯುತ್ತಿದ್ದಂತೆ ಬಾನಿನಲ್ಲಿ ತಕ್ಷಣ ಗೋಚರಿಸುತ್ತೆ ‘ಪರಂಜ್ಯೋತಿ’  title=
Makar Sankranti 2023

Makara Sankranti 2023: ಮಕರ ಸಂಕ್ರಮಣ ಎಂದಾಗ ದಕ್ಷಿಣ ಭಾರತದಲ್ಲಿ ಮೊದಲಿಗೆ ನನೆಪಾಗುವುದು ಶಬರಿಮಲೆಯಲ್ಲಿ ಪ್ರತೀ ವರ್ಷ ಗೋಚರವಾಗುವ ಮಕರ ಜ್ಯೋತಿ. ನಮಗೆಲ್ಲಾ ತಿಳಿದಂತೆ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯನ್ನು "ಹರಿಹರಸುತ” ಎಂದು ಕರೆಯಲಾಗುತ್ತದೆ. ಶಿವ ಮತ್ತು ಮಹಾವಿಷ್ಣುವಿನ ಮಗುವಾಗಿ ಜನ್ಮ ತಾಳಿದ ಅಯ್ಯಪ್ಪ, ಪಂಬಾ ನದಿಯ ತಟದಲ್ಲಿ ಪಂದಳ ರಾಜನಿಗೆ ಸಿಗುತ್ತಾರೆ. ನಂತರ ಅರಮನೆ ಜೀವನ, ಅದಾದ ಬಳಿಕ ಮಹಿಷಿಯ ಮರ್ಧನ ಮಾಡುವ ಸನ್ನಿವೇಶಗಳನ್ನು ಪುರಾಣಗಳಲ್ಲಿ ಅಚ್ಚುಕಟ್ಟಾಗಿ ಹೇಳಲಾಗಿದೆ.

ಇದನ್ನೂ ಓದಿ: Sankranti 2023: ಈ 5 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ! ಸಂಕ್ರಾಂತಿಯಂದು ಮಾಡಿ ಈ ಪರಿಹಾರ

ಮಹಿಷಿ ಸಂಹಾರ ಮಾಡಲು ಹರಿಹರರಿಂದ ಜನ್ಮತಾಳಿದ ಪುತ್ರನೇ ಧರೆಗೆ ಬರಬೇಕು ಎಂದು ಆಕೆ ಬ್ರಹ್ಮ ದೇವರ ಬಳಿ ವರವನ್ನು ಕೇಳುತ್ತಾಳೆ. ಆದರೆ ಅದೇ ವರ ಶಾಪವಾಗಿ ಪರಿಣಮಿಸುತ್ತದೆ ಎಂದು ಮಹಿಷಿ ಊಹಿಸಿರಲಿಲ್ಲ. ಏಕೆಂದರೆ ಮಹಾವಿಷ್ಣು ಮೋಹಿನಿಯ ಅವತಾರ ತಳೆದು, ಶಿವ ಮತ್ತು ಮೋಹಿನಿಯ ಮಿಲನದಿಂದ ಅಯ್ಯಪ್ಪ ಅದಾಗಲೇ ಭೂಮಿಗೆ ಕಾಲಿಟ್ಟಾಗಿತ್ತು.  

ಪಶ್ಚಿಮ ಘಟ್ಟಗಳ ದೊರೆ ರಾಜ ರಾಜಶೇಖರ ಮಕ್ಕಳಿಲ್ಲದೆ ಕೊರಗುತ್ತಿದ್ದ. ಒಂದು ದಿನ ಕಾಡಿಗೆ ಬೇಟೆಗೆಂದು ಬಂದ ಸಂದರ್ಭದಲ್ಲಿ ಶಿವಲಿಂಗದ ಮುಂದೆ ಕೊರಳಲ್ಲಿ ಮಣಿಯನ್ನು ಧರಿಸಿದ ಮಹಾ ತೇಜಸ್ವಿ ಕಂದಮ್ಮ ಅಳುತ್ತಿರುವುದು ಕಂಡುಬರುತ್ತದೆ. ತಕ್ಷಣವೇ ರಾಜನು ದೇವರೇ ಕರುಣಿದ ಪ್ರಸಾದ ಎಂದು ಭಾವಿಸಿ ಅರಮನೆಗೆ ಮಗುವನ್ನು ಕರೆದುಕೊಂಡು ತೆರಳುತ್ತಾರೆ. ಇದಾದ ಬಳಿಕ 12 ವರ್ಷಗಳ ಕಾಲ ಅರಮನೆಯಲ್ಲಿ ಜೀವನ ಸಾಗಿಸಿದ ಮಣಿಕಂಠ, ಮುಂದೆ ಮಹಿಷಿಯ ಮರ್ಧನ ಮಾಡಿ ಲೋಕಕ್ಕೆ ಅಯ್ಯಪ್ಪನೆಂದು ಪ್ರಸಿದ್ಧಿಗೊಳ್ಳುತ್ತಾರೆ.

ಇದಾದ ಬಳಿಕ ಶಬರಿಗಿರಿಯಲ್ಲಿ ತನಗಾಗಿ ದೇವಾಲಯವನ್ನು ನಿರ್ಮಿಸಲು ರಾಜನಿಗೆ ಮನವಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪರಶುರಾಮರಿಂದ ಸೃಷ್ಟಿಗೊಂಡ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿ ಇಂದಿಗೂ ಆ ಮೂರ್ತಿಯನ್ನು ಪೂಜಿಲಾಗುತ್ತದೆ. ಅಷ್ಟೇ ಅಲ್ಲದೆ, ಮಕರ ಸಂಕ್ರಾಂತಿಯಂದು ಮಕರ ಜ್ಯೋತಿ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತೇನೆ ಎಂದು ಅಯ್ಯಪ್ಪ ಅಭಯನೀಡಿ ಶಬರಿಗಿರಿಯಲ್ಲಿ ನೆಲೆಯಾಗುತ್ತಾರೆ. .

ಅಯ್ಯಪ್ಪ ಮಾಲಾಧಾರಿಗಳು ಅನುಸರಿಸಬೇಕಾದ ನಿಯಮಗಳು

1. ಭಕ್ತ ಜನರು ಕಪ್ಪು ಧೋತಿ ಮತ್ತು ಶರ್ಟ್ ಧರಿಸಿ ರಾತ್ರಿ ಪೂಜೆಯಲ್ಲಿ ಭಾಗವಹಿಸಬೇಕು. ವ್ಯಸನಗಳು ಮತ್ತು ದೈಹಿಕ ನಿಕಟತೆಯನ್ನು ಕಟ್ಟುನಿಟ್ಟಾಗಿ ಈ ಸಂದರ್ಭದಲ್ಲಿ ತ್ಯಜಿಸಿರಬೇಕು

2. ನವೆಂಬರ್ ಮತ್ತು ಜನವರಿ ತಿಂಗಳ ನಡುವೆ ವ್ರತವನ್ನು ಆಚರಿಸಲಾಗುತ್ತದೆ. ತೆಂಗಿನಕಾಯಿ, ಕರ್ಪೂರ, ಅಕ್ಕಿ ಮತ್ತು ತುಪ್ಪವನ್ನು ದೇವರಿಗೆ ಪ್ರಸಾದವಾಗಿ ನೀಡಲಾಗುತ್ತದೆ.

3. ಕಪ್ಪು ಬಣ್ಣದ ಬಟ್ಟೆಯ ಜೊತೆ ತುಳಸಿ ಅಥವಾ ರುದ್ರಾಕ್ಷದ ಮಾಲೆಯನ್ನು ಧರಿಸಬೇಕು.

4. ಮಾಲೆಯನ್ನು ಧರಿಸುವುದರೊಂದಿಗೆ 48 ದಿನಗಳ ವ್ರತಾಚರಣೆಯು ಪ್ರಾರಂಭವಾಗುತ್ತದೆ.

5. ಶಬರಿಮಲೆಗೆ 18 ಬಾರಿ ಆಗಮಿಸಿದ ಭಕ್ತನಿಗೆ ಗುರುಸ್ವಾಮಿ ಎಂದು ಹೆಸರಿಸಲಾಗುತ್ತದೆ. ಅವರು ಪೂಜೆಯನ್ನು ಮಾಡಿದ ನಂತರ ಇತರರಿಗೆ ಮಾಲೆಯನ್ನು ಒದಗಿಸುವ ಹಕ್ಕುಗಳನ್ನು ಪಡೆಯುತ್ತಾರೆ. ಆಗ ಭಕ್ತನು ಅವರನ್ನು "ಸ್ವಾಮಿ" ಎಂದು ಕರೆಯುತ್ತಾರೆ.

6. ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು

7. ಭಗವಂತನೇ ಬ್ರಹ್ಮಚಾರಿಯಾಗಿರುವುದರಿಂದ ಭಕ್ತರು ಬ್ರಹ್ಮಚರ್ಯವನ್ನು ಪಾಲಿಸಬೇಕು.

8. ಭಕ್ತರು ತುಂಬಾ ಕಡಿಮೆ ಆಹಾರವನ್ನು ಸೇವಿಸಬೇಕು. ಹೆಚ್ಚಿನ ಸಮಯ ಉಪವಾಸ ಕ್ರಮದಲ್ಲಿರಬೇಕು.

9. ಸ್ವಾಮಿಯು 48 ದಿನಗಳ ಅವಧಿಯಲ್ಲಿ ಸುಳ್ಳು ಹೇಳಬಾರದು ಮತ್ತು ಪಾಪ ಮಾಡಬಾರದು.

10. ಸ್ವಾಮಿಗಳು ಬರಿಗಾಲಿನಲ್ಲಿ ನಡೆಯಬೇಕು.

11. ಭಕ್ತರು ಸಾಮಾನ್ಯವಾಗಿ ಈ ಅವಧಿಯಲ್ಲಿ ಕ್ಷೌರ ಮಾಡುವಂತಿಲ್ಲ

12. ಸ್ವಾಮಿಗಳು ನೆಲದ ಮೇಲೆ ಮಲಗಬೇಕು.

13. ಮಾಲೆ ಧರಿಸಿದ ಸಂದರ್ಭದಲ್ಲಿ ಸಾವಿನ ಮನೆ, ಅಂತ್ಯಕ್ರಿಯೆ ಅಥವಾ ಶ್ರಾದ್ಧಗಳಿಗೆ ಹಾಜರಾಗಬಾರದು

ಇದನ್ನೂ ಓದಿ: ವಿವಿಧ ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬದ ಆಚರಣೆ-ವಿಭಿನ್ನತೆ ಹೇಗಿದೆ ಗೊತ್ತಾ?

ಮಕರ ಜ್ಯೋತಿ ವಾರ್ಷಿಕ ಪೂಜೆ:

ಮಕರ ಜ್ಯೋತಿ ದಿನದಂದು ಪಂದಳಂ ಅರಮನೆಯಿಂದ ತಿರುವಾಭರಣಗಳನ್ನು ಹೊತ್ತ ಮೆರವಣಿಗೆಯು ಭಗವಾನ್ ಅಯ್ಯಪ್ಪನ ದೇವಸ್ಥಾನವನ್ನು ತಲುಪುತ್ತದೆ. ಅಲ್ಲಿ ಸಂಧ್ಯಾ ದೀಪಾರಾಧನೆ ಎಂಬ ದೀಪಗಳ ಆಚರಣೆಯಲ್ಲಿ ಇಡೀ ನಗರವು ಅಲಂಕರಿಸಲ್ಪಟ್ಟಿರುತ್ತದೆ. ಪೆಟ್ಟಿಗೆಯಲ್ಲಿರುವ ಆಭರಣಗಳನ್ನು ಶಬರಿಗಿರಿವಾಸನಿಗೆ ತೊಡಿಸಿ ವಿಶೇಷ ಆರತಿ ಮಾಡುತ್ತಿದ್ದಂತೆ  ಪೊನ್ನಂಬಲಮೇಡುವಿನಲ್ಲಿ ಮಲಯಮಾರನ್ ಬುಡಕಟ್ಟುಮ ಜನರು ಅಯ್ಯಪ್ಪ ದೇವರಿಗೆ ಪೂಜೆ ಮಾಡಿ ಆರತಿ ಬೆಳಗುತ್ತಾರೆ. ಇದೇ ಸಂದರ್ಭದಲ್ಲಿ ಆಕಾಶದಲ್ಲಿ ಮೂರು ಬಾರಿ ಮಕರ ಜ್ಯೋತಿ ಕಾಣಿಸಿಕೊಳ್ಳುತ್ತದೆ. ಈ ವೇಳೆ ಅಯ್ಯಪ್ಪ ಭಕ್ತರೆಲ್ಲರೂ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎನ್ನುತ್ತಾ ಮಣಿಕಂಠನಲ್ಲಿ ತಮ್ಮ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸುತ್ತಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News