Team India: ಭಾರತ 3ನೇ ಬಾರಿ ವಿಶ್ವಕಪ್ ಗೆಲ್ಲುವುದು ಖಚಿತ! ಆದರೆ ಈ ಪಂದ್ಯ ವಿಜೇತರು ಇದ್ದರೆ ಮಾತ್ರ ಸಾಧ್ಯ

India vs New Zealand 1st ODI:  ಭಾರತ ತಂಡ ನ್ಯೂಜಿಲೆಂಡ್ ಗೆಲುವಿಗೆ 350 ರನ್ ಗಳ ಗುರಿ ನೀಡಿತ್ತು. ಒಂದು ಸಮಯದಲ್ಲಿ ಮೈಕಲ್ ಬ್ರೇಸ್‌ವೆಲ್ ಅವರ ಅಪಾಯಕಾರಿ ಇನ್ನಿಂಗ್ಸ್‌ನ ಆಧಾರದ ಮೇಲೆ ಕಿವೀಸ್ ತಂಡವು ಪಂದ್ಯವನ್ನು ಗೆಲ್ಲುವ ಸಮೀಪಕ್ಕೆ ಬಂದಿತ್ತು, ಆದರೆ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಬೌಲಿಂಗ್ ಮಾಡಿ 10 ನೇ ಓವರ್‌ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು. ಸಿರಾಜ್ ತಮ್ಮ 10 ಓವರ್‌ಗಳಲ್ಲಿ 46 ರನ್‌ಗಳಿಗೆ 4 ವಿಕೆಟ್ ಪಡೆದಿದ್ದಾರೆ.

Written by - Bhavishya Shetty | Last Updated : Jan 19, 2023, 11:07 AM IST
    • ಟೀಂ ಇಂಡಿಯಾ ನ್ಯೂಜಿಲೆಂಡ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ
    • ರೋಚಕ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 12 ರನ್ ಗಳಿಂದ ಸೋಲಿಸಿದೆ
    • ಶುಭ್ಮನ್ ಗಿಲ್ ತಮ್ಮ ಸಣ್ಣ ವೃತ್ತಿಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಿದ್ದಾರೆ
Team India: ಭಾರತ 3ನೇ ಬಾರಿ ವಿಶ್ವಕಪ್ ಗೆಲ್ಲುವುದು ಖಚಿತ! ಆದರೆ ಈ ಪಂದ್ಯ ವಿಜೇತರು ಇದ್ದರೆ ಮಾತ್ರ ಸಾಧ್ಯ  title=
Shubman Gill

India vs New Zealand 1st ODI:  ರೋಚಕ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 12 ರನ್ ಗಳಿಂದ ಸೋಲಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಉತ್ತಮ ಫಾರ್ಮ್‌ನಲ್ಲಿ ಸಾಗುತ್ತಿದೆ. ಅವರ ನಾಯಕತ್ವದಲ್ಲಿ ಯುವ ಆಟಗಾರರ ಪ್ರದರ್ಶನ ಮುನ್ನೆಲೆಗೆ ಬರುತ್ತಿದೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರು ಸ್ಟಾರ್ ಆಟಗಾರರು ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಈ ಆಟಗಾರರು ಭಾರತಕ್ಕೆ ಮೂರನೇ ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ನೀಡಬಹುದು.

ಇದನ್ನೂ ಓದಿ: FACT CHECK : ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್‌.!

ಭಾರತ ತಂಡ ನ್ಯೂಜಿಲೆಂಡ್ ಗೆಲುವಿಗೆ 350 ರನ್ ಗಳ ಗುರಿ ನೀಡಿತ್ತು. ಒಂದು ಸಮಯದಲ್ಲಿ ಮೈಕಲ್ ಬ್ರೇಸ್‌ವೆಲ್ ಅವರ ಅಪಾಯಕಾರಿ ಇನ್ನಿಂಗ್ಸ್‌ನ ಆಧಾರದ ಮೇಲೆ ಕಿವೀಸ್ ತಂಡವು ಪಂದ್ಯವನ್ನು ಗೆಲ್ಲುವ ಸಮೀಪಕ್ಕೆ ಬಂದಿತ್ತು, ಆದರೆ ಮೊಹಮ್ಮದ್ ಸಿರಾಜ್ ತಮ್ಮ ಅದ್ಭುತ ಬೌಲಿಂಗ್ ಮಾಡಿ 10 ನೇ ಓವರ್‌ನಲ್ಲಿ 2 ವಿಕೆಟ್ ಕಬಳಿಸುವ ಮೂಲಕ ಟೀಮ್ ಇಂಡಿಯಾದ ಗೆಲುವನ್ನು ಖಚಿತಪಡಿಸಿದರು. ಸಿರಾಜ್ ತಮ್ಮ 10 ಓವರ್‌ಗಳಲ್ಲಿ 46 ರನ್‌ಗಳಿಗೆ 4 ವಿಕೆಟ್ ಪಡೆದಿದ್ದಾರೆ.

ಸದ್ಯ ಮೊಹಮ್ಮದ್ ಸಿರಾಜ್ ಕೆಲವು ಸಮಯದಿಂದ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಭಾರತೀಯ ವೇಗದ ಬೌಲಿಂಗ್ ದಾಳಿಯಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಭಾರತ ಪರ 20 ಏಕದಿನ ಪಂದ್ಯಗಳಲ್ಲಿ 37 ವಿಕೆಟ್ ಪಡೆದಿದ್ದಾರೆ.

ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸ್ಟಾರ್ ಓಪನರ್ ಶಿಖರ್ ಧವನ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದರ ನಂತರ, ರೋಹಿತ್ ಶರ್ಮಾ ದ್ವಿಶತಕ ಗಳಿಸಿದ ಇಶಾನ್ ಕಿಶನ್ ಬದಲಿಗೆ ಶುಭಮನ್ ಗಿಲ್ ಅವರೊಂದಿಗೆ ಓಪನಿಂಗ್ ಮಾಡಲು ನಿರ್ಧರಿಸಿದರು. ಈ ಬಳಿಕ ಸಾಕಷ್ಟು ಚರ್ಚೆಗಳು ನಡೆದಿತ್ತು, ಆದರೆ ಈಗ ಗಿಲ್ ತಮ್ಮ ಆಟದಿಂದಲೇ ಎಲ್ಲರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಟೀಮ್ ಇಂಡಿಯಾಕ್ಕೆ ಶಾಶ್ವತ ಆರಂಭಿಕ ಆಟಗಾರನಾಗುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಕಿವೀಸ್ ತಂಡದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅವರು 208 ರನ್‌ಗಳ ಬಿರುಸಿನ ಇನ್ನಿಂಗ್ಸ್ ಆಡಿದ್ದರು. ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧವೂ ಶತಕ ಸಿಡಿಸಿದ್ದರು.

ಶುಭ್ಮನ್ ಗಿಲ್ ತಮ್ಮ ಸಣ್ಣ ವೃತ್ತಿಜೀವನದಲ್ಲಿ ಎಲ್ಲರನ್ನೂ ಮೆಚ್ಚಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿರುವ ಆಟಗಾರ ಇವರು. ಯಾವುದೇ ಬೌಲಿಂಗ್ ದಾಳಿಯನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ವೇಗವಾಗಿ 1000 ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಅವರು ಭಾರತಕ್ಕಾಗಿ 19 ಏಕದಿನ ಪಂದ್ಯಗಳಲ್ಲಿ 1102 ರನ್ ಗಳಿಸಿದ್ದಾರೆ. ಇದರಲ್ಲಿ ಅವರು 3 ಶತಕಗಳಿ ಸೇರಿವೆ.

ಇದನ್ನೂ ಓದಿ:  ವಿರಾಟ್ ಕೊಹ್ಲಿ ಶಿಖರ್ ಧವನ್ ದಾಖಲೆ ಅಳಿಸಿ ಹಾಕಿದ ಶುಬ್ಮನ್ ಗಿಲ್

ಟಿ20 ವಿಶ್ವಕಪ್‌ನಲ್ಲಿ ಆಡುವುದು ಖಚಿತ:

ಭಾರತ ತಂಡ 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮತ್ತು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದೆ. 2023ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ತಯಾರಿ ನಡೆಸುತ್ತಿದೆ. ಮೊಹಮ್ಮದ್ ಸಿರಾಜ್ ಮತ್ತು ಶುಭಮನ್ ಗಿಲ್ ಅತ್ಯುತ್ತಮ ಫಾರ್ಮ್‌ನಲ್ಲಿ ಓಡುತ್ತಿದ್ದಾರೆ. ಇಬ್ಬರೂ ಆಟಗಾರರು ಏಕದಿನ ವಿಶ್ವಕಪ್ ಆಡಲು ದೊಡ್ಡ ಸ್ಪರ್ಧಿಗಳು. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರರು ಭಾರತಕ್ಕೆ ಏಕದಿನ ವಿಶ್ವಕಪ್ ನೀಡಬಲ್ಲರು ಎಂದು ಹೇಳಲಾಗುತ್ತಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News