Shubman Gillಗೆ ಟಾರ್ಚರ್ ಕೊಡ್ತಿದ್ದಾನೆ ಈ ಆಟಗಾರ: Rohit Sharma ಜೊತೆಗಿನ ಸಂದರ್ಶನದಲ್ಲಿ ಬಹಿರಂಗ!

Rohit Sharma, Subhman Gill, Ishan Kishan Funny Interview: ಈ ಸಂದರ್ಶನದ ಸಮಯದಲ್ಲಿ ರೋಹಿತ್ ಶರ್ಮಾ ಇಶಾನ್ ಕಿಶನ್ ಅವರಿಗೆ "200 ರನ್ ಗಳಿಸಿದ್ದರೂ ನೀವು 3 ಪಂದ್ಯಗಳಿಂದ ಏಕೆ ಹೊರಗುಳಿದಿದ್ದೀರಿ" ಎಂದು ಪ್ರಶ್ನೆ ಕೇಳಿದ್ದಾರೆ. ಅಷ್ಟರಲ್ಲಿ ಮೂವರು ಸಹ ಜೋರಾಗಿ ನಗುತ್ತಾರೆ. ಶ್ರೀಲಂಕಾ ವಿರುದ್ಧದ ODIಗಳಿಂದ ಎಡಗೈ ಆಟಗಾರ ಕಿಶನ್ ಅವರನ್ನು ಹೊರಗಿಡಲಾಗಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ODIನಲ್ಲಿ ತಂಡದಲ್ಲಿರು. ಇನ್ನು ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಶನ್‌ "ಭಯ್ಯಾ ಯೇ ತೋ ಆಪ್ ಬತಾವೋಗೆ, ಕ್ಯಾಪ್ಟನ್ ಆಪ್ ತೆ ನಾ(ಇದನ್ನು ನೀವೆ ಹೇಳಿ ಅಣ್ಣಾ, ಕ್ಯಾಪ್ಟನ್ ನೀವಲ್ಲವೇ)" ಎಂದು ತ್ವರಿತ ಉತ್ತರ ನೀಡಿದರು.

Written by - Bhavishya Shetty | Last Updated : Jan 19, 2023, 12:54 PM IST
    • ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಇಶಾನ್ ಕಿಶನ್ ತಮಾಷೆಯ ಸಂದರ್ಶನ ವಿಡಿಯೋ
    • ತಮಾಷೆಯ ಸಂದರ್ಶನ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ
    • ಮೂವರು ಸಹ ಒಬ್ಬರಿಗೊಬ್ಬರು ಪ್ರಶ್ನೆಗಳನ್ನು ಕೇಳುತ್ತಾ ತಮಾಷೆ ಮಾಡಿಕೊಳ್ಳುತ್ತಾ ಬಿದ್ದು ಬಿದ್ದು ನಗುತ್ತಿದ್ದಾರೆ.
Shubman Gillಗೆ ಟಾರ್ಚರ್ ಕೊಡ್ತಿದ್ದಾನೆ ಈ ಆಟಗಾರ: Rohit Sharma ಜೊತೆಗಿನ ಸಂದರ್ಶನದಲ್ಲಿ ಬಹಿರಂಗ! title=
BCCI Interview

Rohit Sharma, Subhman Gill, Ishan Kishan Funny Interview: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಇಶಾನ್ ಕಿಶನ್ ತಮಾಷೆಯ ಸಂದರ್ಶನ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಮೂವರು ಸಹ ಒಬ್ಬರಿಗೊಬ್ಬರು ಪ್ರಶ್ನೆಗಳನ್ನು ಕೇಳುತ್ತಾ ತಮಾಷೆ ಮಾಡಿಕೊಳ್ಳುತ್ತಾ ಬಿದ್ದು ಬಿದ್ದು ನಗುತ್ತಿದ್ದಾರೆ. ಈ ವಿಡಿಯೋವನ್ನು ನೀವು ನೋಡಬಹುದು.

ಈ ಸಂದರ್ಶನದ ಸಮಯದಲ್ಲಿ ರೋಹಿತ್ ಶರ್ಮಾ ಇಶಾನ್ ಕಿಶನ್ ಅವರಿಗೆ "200 ರನ್ ಗಳಿಸಿದ್ದರೂ ನೀವು 3 ಪಂದ್ಯಗಳಿಂದ ಏಕೆ ಹೊರಗುಳಿದಿದ್ದೀರಿ" ಎಂದು ಪ್ರಶ್ನೆ ಕೇಳಿದ್ದಾರೆ. ಅಷ್ಟರಲ್ಲಿ ಮೂವರು ಸಹ ಜೋರಾಗಿ ನಗುತ್ತಾರೆ. ಶ್ರೀಲಂಕಾ ವಿರುದ್ಧದ ODIಗಳಿಂದ ಎಡಗೈ ಆಟಗಾರ ಕಿಶನ್ ಅವರನ್ನು ಹೊರಗಿಡಲಾಗಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧದ ಮೊದಲನೇ ODIನಲ್ಲಿ ತಂಡದಲ್ಲಿರು. ಇನ್ನು ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಿಶನ್‌ "ಭಯ್ಯಾ ಯೇ ತೋ ಆಪ್ ಬತಾವೋಗೆ, ಕ್ಯಾಪ್ಟನ್ ಆಪ್ ತೆ ನಾ(ಇದನ್ನು ನೀವೆ ಹೇಳಿ ಅಣ್ಣಾ, ಕ್ಯಾಪ್ಟನ್ ನೀವಲ್ಲವೇ)" ಎಂದು ತ್ವರಿತ ಉತ್ತರ ನೀಡಿದರು.

ಇದನ್ನೂ ಓದಿ:  Team India: ಭಾರತ 3ನೇ ಬಾರಿ ವಿಶ್ವಕಪ್ ಗೆಲ್ಲುವುದು ಖಚಿತ! ಆದರೆ ಈ ಪಂದ್ಯ ವಿಜೇತರು ಇದ್ದರೆ ಮಾತ್ರ ಸಾಧ್ಯ

ಈ ಬಳಿಕ ರೋಹಿತ್ ಮಾತನಾಡಿ, " ಇದು ಪರವಾಗಿಲ್ಲ. ಎಲ್ಲವೂ ನಿಮ್ಮನ್ನು ಏನನ್ನಾದರೂ ಕಲಿಯುವಂತೆ ಮಾಡುತ್ತದೆ. ಇನ್ನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೀರಾ” ಎಂದು ಕೇಳಿದ್ದಾರೆ. ಕಿಶನ್ ಅದಕ್ಕೆ, "ಹೌದು, ನಾನು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆ" ಎಂದು ಒತ್ತಿ ಹೇಳಿದ್ದಾರೆ.

ಇವರ ಜೊತೆ ಶುಭಮನ್ ಗಿಲ್ ಕೂಡ ಇದ್ದರು. ಬುಧವಾರದಂದು ODI ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂದು ಗಿಲ್ ಗುರುತಿಸಿಕೊಂಡಿದ್ದಾರೆ. ಭಾರತವು ಮೂರು ಪಂದ್ಯಗಳ ಸರಣಿಯ ರೋಚಕ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು 12 ರನ್‌ಗಳಿಂದ ಸೋಲಿಸಿತು. 23 ವರ್ಷದ ಗಿಲ್ 149 ಎಸೆತಗಳಲ್ಲಿ 208 ರನ್ ಬಾರಿಸಿದ್ದರು. ಅವರ ಮೂರನೇ ODI ಶತಕದ ಮೂಲಕ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ನಂತರ ಈ ಸ್ವರೂಪದಲ್ಲಿ ದ್ವಿಶತಕ ಗಳಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

ದ್ವಿಶತಕ ಗಳಿಸಿದ್ದು ಹೇಗೆ ಅನಿಸಿತು ಎಂದು ರೋಹಿತ್ ಗಿಲ್‌ಗೆ ಕೇಳಿದಾಗ, "ಇದು ತುಂಬಾ ಅದ್ಭುತ ಎನಿಸಿತು. ಶ್ರೀಲಂಕಾ ಸರಣಿಯ 1ನೇ ಮತ್ತು 3ನೇ ODIಗಳಲ್ಲಿ ನನಗೆ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಪಂದ್ಯದಲ್ಲಿ, ನಾನು ಮತ್ತೆ 100 ರನ್ ಗಳಿಸಿದ್ದೆ. ಈ ಸಾಧನೆ ಮಾಡಲು ಅವಕಾಶವಿತ್ತು. ಅದು ಫಲ ನೀಡಿತು” ಎಂದು ಹೇಳಿದ್ದಾರೆ.

ರೋಹಿತ್ ಗಿಲ್ ಅವರನ್ನು ಅಣಕಿಸುತ್ತಾ, "ನೀವು ದ್ವಿಶತಕ ಗಳಿಸಿದವರು, ಆದರೆ ಇಶಾನ್ ನಿಮ್ಮ ಪಕ್ಕದಲ್ಲಿ ಏಕೆ ನಿಂತಿದ್ದಾರೆ?" ಎಂದು ತಮಾಷೆ ಮಾಡಿದ್ದಾರೆ. ಇದಕ್ಕೆ ಮೂವರು ಜೋರಾಗಿ ನಕ್ಕಿದ್ದಾರೆ.

ಸಂಪೂರ್ಣ ವಿಡಿಯೋವನ್ನ ಇಲ್ಲಿ ವೀಕ್ಷಿಸಿ:

https://www.bcci.tv/videos/5558905/rohit-sharma-and-ishan-kishan-welcome-hyderabad-hero-shubman-gill-to-the-200-club?tagNames=2023 

ಇದೇ ಸಂದರ್ಭದಲ್ಲಿ ಕಿಶನ್, ಗಿಲ್ ಅವರ ಪೂರ್ವ-ಪಂದ್ಯದ ದಿನಚರಿಯ ಬಗ್ಗೆ ಕೇಳಿದ್ದಾರೆ. ಆಗ ರೋಹಿತ್ ಮಧ್ಯ ಪ್ರವೇಶಿಸಿ, "ಈ ಪ್ರಶ್ನೆಗೆ ನೀನು ಸಹ ಉತ್ತರ ನೀಡಬಹುದು. ಏಕೆಂದರೆ ನೀವು ಇಬ್ಬರು ಯಾವಾಗಲೂ ಕೋಣೆಯಲ್ಲಿ ಒಟ್ಟಿಗೆ ಇರುತ್ತೀರಿ" ಎಂದು ಹೇಳಿದ್ದಾರೆ. 

ಇದನ್ನೂ ಓದಿ: FACT CHECK : ಸಚಿನ್ ಪುತ್ರಿ ಸಾರಾ ಜೊತೆ ಶುಭಮನ್ ಗಿಲ್ ಎಂಗೇಜ್ಮೆಂಟ್‌.!

ಆ ನಂತರ ಮಾತನಾಡಿದ ಗಿಲ್… "ಅವನು ನನ್ನ ಪೂರ್ವ-ಪಂದ್ಯದ ದಿನಚರಿಯನ್ನು ಹಾಳುಮಾಡುತ್ತಾನೆ. ಅವನು ನನ್ನನ್ನು ಮಲಗಲು ಬಿಡುವುದಿಲ್ಲ. ಫುಲ್ ಸೌಂಡ್ ಇಟ್ಟು ಸಿನಿಮಾ ವೀಕ್ಷಿಸುತ್ತಾನೆ. ಏರ್‌ಪಾಡ್‌ಗಳನ್ನು ಸಹ ಬಳಸುವುದಿಲ್ಲ. ನಾವು ಪ್ರತಿದಿನ ಜಗಳವಾಡುತ್ತೇವೆ. ಇದು ನನ್ನ ಕೋಣೆ. ಎಲ್ಲವೂ ನಾನು ಬಯಸಿದಂತೆಯೇ ಇರುತ್ತದೆ ಎಂದು ಅವನು (ಇಶಾನ್)  ಹೇಳುತ್ತಾನೆ. ಇದುವೇ ನನ್ನ ಪೂರ್ವ-ಪಂದ್ಯದ ದಿನಚರಿಯಾಗಿದೆ” ಎಂದು ಗಿಲ್ ತಮಾಷೆ ಮಾಡಿದ್ದಾರೆ

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News