ಬೆಂಗಳೂರು: ಇಡ್ಲಿ ಎಲ್ಲರು ಇಷ್ಟಪಟ್ಟು ತಿನ್ನುವ ಉಪಹಾರವಾಗಿದೆ. ನೀವು ಸಾಮಾನ್ಯವಾಗಿ ಇಡ್ಲಿ, ತಟ್ಟೆಇಡ್ಲಿ, ನೋಡಿದ್ದಿರಿ, ಆದರೆ ಸ್ಟಿಕ್ ಇಡ್ಲಿ ನೋಡಿದ್ದಿರಾ ಅಥವಾ ಕೇಳಿದ್ದೀರಾ..? ಈ ಸ್ಟಿಕ್ ಇಡ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ .....ಏನು ಇದರ ವಿಶೇಷತೆ ಇಲ್ಲಿದೆ ನೋಡಿ.
ಇದನ್ನೂ ಓದಿ : “ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ”
ನಾವು ಪ್ರತಿದಿನ ಗಮನಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಹೊಸ ವಿಚಾರವನ್ನ ತಿಳಿದುಕೊಳ್ಳುತ್ತೇವೆ.ಅಲ್ಲದೇ ಆ ವಿಚಾರಗಳು ಸಾಕಷ್ಟು ವೈರಲ್ ಅಗುವುದರ ಜೊತೆಗೆ ಟ್ರೆಂಡ್ ಕೂಡ ಆಗುತ್ತವೆ. ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸ್ಟಿಕ್ ಇಡ್ಲಿ ಪೋಸ್ಟ್ ಸಕತ್ ವೈರಲ್ ಆಗಿದ್ದು, ಜನ ಇದನ್ನ ಕಡ್ಡಿ ಇಡ್ಲಿ ಅಂತ ಕೂಡ ಕರೆಯುತ್ತಾರೆ. ಇದನ್ನ ನೀವು ಆರಾಮದಾಯಕವಾಗಿ ಸ್ಟಿಕ್ ನಲ್ಲಿ ಹಿಡಿದು ಸವಿಯಬಹುದು. ಈ ಸ್ಟಿಕ್ ಇಡ್ಲಿ ಮೊದಲ ಬಾರಿಗೆ 2021 ರಲ್ಲಿ ಯ್ಯುಟೂಬ್ ನಲ್ಲಿ ವೈರಲ್ ಆಗಿತ್ತು.
Innovative food technology of how the Idli got attached to the Ice cream stick.
Bengaluru and it's food innovations are always synonymous!@vishalk82 pic.twitter.com/IpWXXu84XV— Mahi (@BrotherToGod) September 30, 2021
ಇದನ್ನೂ ಓದಿ : ರಾಯಚೂರು ಜಿಲ್ಲೆಯಲ್ಲಿ ಕಾಂತಾರ ಹೆಸರಿನಲ್ಲಿ ರೆಸ್ಟೋರೆಂಟ್..!
ಆದರೆ ಇದೀಗ ಟ್ವೀಟರ್‌ನಲ್ಲು ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು 90,000ಕ್ಕಿಂತ ಹೆಚ್ಚು ವೀಕ್ಷಣೆಯನ್ನ ಪಡೆದಿದೆ. ಅಲ್ಲದೇ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ಪೋಸ್ಟ್ ನ ಇನ್ನೋಂದು ವಿಶೇಷತೆ ಅಂದರೆ ಕೇಂದ್ರದ ವಾಣಿಜ್ಯೋದ್ಯಮ, ಕೌಶಲ್ಯಾಭಿವೃದ್ದಿ,ಎಲೆಕ್ರ್ಟಾನಿಕ್ಸ್ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಕೂಡ ಈ ಪೋಸ್ಟ್ ಗೆ ಪ್ರತಿಕ್ರಿಯಿದ್ದಾರೆ. ಪೋಸ್ಟಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೀಕ್ಷಕರು ಮಕ್ಕಳಿಗೆ ತಿನ್ನಲು ಸುಲಭವಾಗುತ್ತದೆ ಎಂದೆಲ್ಲಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವೊಂದಿಷ್ಟು ಜನ ಹಳೆಯಕಾಲದಿಂದಲೂ ರೂಢಿಸಿಕೊಂಡು ಬಂದ ಉಪಹಾರದ ಮೇಲೆ ಯಾವುದೇ ಆವಿಷ್ಕಾರ ಬೇಡ, ಇಡ್ಲಿಯ ಮೇಲೆ ಸಾಕಷ್ಟು ಬಾಲ್ಯದ ಕಥೆಗಳಿವೆ ಎಂದು ಕಾಮೆಂಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.