Surya Guru Yuti: ಸೂರ್ಯ-ಗುರು ಯುತಿ ಪರಿಣಾಮ- ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ

Surya Guru Yuti: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದೇ ರಾಶಿಯಲ್ಲಿ ಎರಡು ಗ್ರಹಗಳು ಭೇಟಿಯಾದಾಗ ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಕಂಡು ಬರುತ್ತದೆ. ಎಪ್ರಿಲ್ ತಿಂಗಳಲ್ಲಿ ಗ್ರಹಗಳ ರಾಜನಾದ ಸೂರ್ಯ ಮತ್ತು ದೇವ-ದೇವತೆಗಳು ಗುರು ಎಂದು ಪರಿಗಣಿಸಲ್ಪಟ್ಟಿರುವ ಬೃಹಸ್ಪತಿಯು ಮೇಷ ರಾಶಿಯಲ್ಲಿ ಭೇಟಿಯಾಗಲಿದ್ದಾರೆ. ಈ ಸಮಯವು ಐದು ರಾಶಿಯವರಿಗೆ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Jan 31, 2023, 08:15 AM IST
  • 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಯುತಿ
  • ಸೂರ್ಯ-ಗುರು ಯುತಿಯಿಂದಾಗಿ ದ್ವಾದಶ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತವೆ.
  • ಆದಾಗ್ಯೂ, ಈ ಸಮಯದಲ್ಲಿ ಐದು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿವೆ ಎಂದು ಹೇಳಲಾಗುತ್ತಿದೆ.
Surya Guru Yuti: ಸೂರ್ಯ-ಗುರು ಯುತಿ ಪರಿಣಾಮ- ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ  title=
Surya Guru Yuti

Surya Guru Yuti: ಗ್ರಹಗಳ ಅಧಿಪತಿ ಸೂರ್ಯ ಮತ್ತು ಜ್ಞಾನಕಾರಕನಾದ ಗುರು ಎರಡೂ ಗ್ರಹಗಳು ಎಪ್ರಿಲ್ ತಿಂಗಳಿನಲ್ಲಿ ಒಂದೇ ರಾಶಿಯಲ್ಲಿ ಸಂಯೋಗ ಹೊಂದಲಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 14ರಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರ ನಂತರ, ಏಪ್ರಿಲ್ 22ರಂದು ಬೃಹಸ್ಪತಿ ಕೂಡ ಇದೇ ರಾಶಿಗೆ ಪ್ರವೇಶಿಸಲಿದ್ದಾನೆ. 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಯುತಿಯಿಂದಾಗಿ ದ್ವಾದಶ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳು ಕಂಡು ಬರುತ್ತವೆ. ಆದಾಗ್ಯೂ, ಈ ಸಮಯದಲ್ಲಿ ಐದು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆಯಲಿವೆ ಎಂದು ಹೇಳಲಾಗುತ್ತಿದೆ.

ಸೂರ್ಯ-ಗುರು ಯುತಿ ಪರಿಣಾಮ- ಹೊಳೆಯಲಿದೆ ಈ 5 ರಾಶಿಯವರ ಅದೃಷ್ಟ:-
ಮೇಷ ರಾಶಿ: 

ಸುಮಾರು 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸೂರ್ಯ-ಗುರು ಯುತಿಯ ಪರಿಣಾಮದಿಂದಾಗಿ ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ಇದರಿಂದಾಗಿ ಪ್ರಯೋಶನ್ ಸಾಧ್ಯತೆಯೂ ಇದೆ.

ಮಿಥುನ ರಾಶಿ:
ಸೂರ್ಯ-ಗುರು ಯುತಿ ಪರಿಣಾಮವಾಗಿ ಈ ರಾಶಿಯವರಿಗೆ ಹಣದ ಸುರಿಮಳೆಯೇ ಆಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು ನಿಮ್ಮ ಬಹುದಿನದ ಆಸೆಗಳು ಈಡೇರಲಿವೆ. ಉದ್ಯೋಗ ಬದಲಾವಣೆ ಬಗ್ಗೆ ಯೋಚಿಸುತ್ತಿರುವವರಿಗೆ ಇದು ಸೂಕ್ತ ಸಮಯ.

ಇದನ್ನೂ ಓದಿ- ಅಶ್ವಿನಿ ನಕ್ಷತ್ರದಲ್ಲಿ ರಾಹು ಪ್ರವೇಶ, ಈ ಮೂರು ರಾಶಿಗಳ ಜನರಿಗೆ ಅಪಾರ ಧನ, ಸ್ಥಾನಮಾನ ಪ್ರಾಪ್ತಿ!

ಕರ್ಕಾಟಕ ರಾಶಿ:
ಮೇಷ ರಾಶಿಯಲ್ಲಿ ಸೂರ್ಯ-ಗುರು ಸಂಯೋಜನೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವಾಗಲಿದೆ. ಮಾತ್ರವಲ್ಲ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಈ ಸಮಯದಲ್ಲಿ ನಿಮ್ಮ ನೆಚ್ಚಿನ ಉದ್ಯೋಗ ಪ್ರಾಪ್ತಿಯಾಗಲಿದೆ.

ಸಿಂಹ ರಾಶಿ:
ಸೂರ್ಯ-ಗುರು ಯುತಿ ಪರಿಣಾಮದಿಂದಾಗಿ ನಿಮ್ಮ ವಿದೇಶಕ್ಕೆ ಹೋಗುವ ಕನಸು ನನಸಾಗಲಿದೆ. ಈ ಸಮಯದಲ್ಲಿ, ಸಿಂಹ ರಾಶಿಯ ಅಧಿಪತಿಯಾಗಿರುವ ಸೂರ್ಯನು ಅದೃಷ್ಟದ ಸಂಪೂರ್ಣ ಬೆಂಬಲ ನೀಡಲಿದ್ದು  ಕೈ ಹಾಕಿದ ಕೆಲಸಗಳಲ್ಲೆಲ್ಲಾ ಉತ್ತಮ ಫಲಿತಾಂಶವನ್ನು ನೀಡಲಿದ್ದಾನೆ. ನಿಮ್ಮ ಇಷ್ಟು ದಿನಗಳ ಕಷ್ಟಗಳು ಕೊನೆಗೊಳ್ಳಲಿವೆ.

ಇದನ್ನೂ ಓದಿ- Shukra Gochara: ವ್ಯಾಲೆಂಟೈನ್ಸ್ ಡೇ ಬಳಿಕ ಬದಲಾಗಲಿದೆ ಈ ರಾಶಿಯವರ ಅದೃಷ್ಟ

ಮೀನ ರಾಶಿ:
ಸೂರ್ಯ-ಗುರು ಸಂಯೋಜನೆಯು ಮೀನ ರಾಶಿಯವರಿಗೆ ಬಂಪರ್ ವಿತ್ತೀಯ ಲಾಭವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಮಾತಿನ ಮೂಲಕವೇ ನೀವು ನಿಮ್ಮ ಬಹಳಷ್ಟು ಕೆಲಸಗಳನ್ನು ಸಾಧಿಸುವಿರಿ. ನಿಮ್ಮೆಲ್ಲಾ ಕೆಲಸಗಳಲ್ಲೂ ಅದೃಷ್ಟ ಜೊತೆಯಾಗಲಿದ್ದು ಯಶಸ್ಸು ಪ್ರಾಪ್ತಿಯಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News