Budget 2023 Updates: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ವರ್ಷ 2023-24ನೇ ಸಾಲಿನ ಬಜೆಟ್ ಮಂಡನೆಯನ್ನು ಆರಂಭಿಸಿದ್ದಾರೆ. ಇದರೊಂದಿಗೆ ದೇಶಕ್ಕಾಗಿ ಮುಂದಿನ ಒಂದು ವರ್ಷದ ಅವಧಿಯವರೆಗೆ ಮೋದಿ ಸರ್ಕಾರದ ಲೆಕ್ಕಾಚಾರ ಪ್ರಕಟಗೊಳ್ಳಲು ಆರಂಭಗೊಂಡಿದೆ.
ಹಿಂದುಳಿದವರಿಗೆ ಸರ್ಕಾರದ ಆದ್ಯತೆ
ಬಜೆಟ್ ಮಂಡನೆಯ ವೇಳೆ ಮಾತನಾಡಿರುವ ವಿತ್ತ ಸಚಿವೆ, ಈ ಬರಿಯ ಬಜೆಟ್ ನಲ್ಲಿ 7 ಆದ್ಯತೆಗಳಿವೆ ಎಂದು ಹೇಳಿದ್ದಾರೆ. ಕೃಷಿ ವೇಗವರ್ಧಕ ನಿಧಿಗಳ ಮೂಲಕ ಅಗ್ರಿ ಸ್ಟಾರ್ಟ್ ಅಪ್ ಗಳು ಬೆಳೆಯಲಿವೆ ಮತ್ತು ರೈತರಿಗೆ ಸಹಾಯ ಒದಗಿಸಲಿವೆ. ಇದರಿಂದ ಅವರು ಇನ್ನೂ ಉತ್ತಮ ರೀತಿಯಲ್ಲಿ ಸವಾಲುಗಳನ್ನು ಎದುರಿಸಲು ಸಾಧ್ಯವಾಗಲಿದೆ ಮತ್ತು ರೈತರ ಉತ್ಪಾದನೆಯನ್ನು ಹೆಚ್ಚಿಸಲಿದೆ ಎಂದಿದ್ದಾರೆ. ಬಜೆಟ್ ನಲ್ಲಿ ಸರ್ಕಾರ ಒಟ್ಟು 7 ಆದ್ಯತೆಗಳನ್ನು ಹೊಂದಿದ್ದು, ಹಿಂದುಳಿದವರಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ,
ಸೀತಾರಾಮನ್ ಮೊದಲ 5 ಪ್ರಮುಖ ಘೋಷಣೆಗಳು
ತಮ್ಮ ಆರಂಭಿಕ ಭಾಷಣದಲ್ಲಿ ಕೇಂದ್ರ ವಿತ್ತ ಸಚಿವೆ ಕೆಲ ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಶೀಘ್ರದಲ್ಲಿಯೇ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲೆಟ್ಸ್ ಅನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ. India@100 ಮೂಲಕ ದೇಶವನ್ನು ವಿಶ್ವಾದ್ಯಂತ ಬಲಪಡಿಸಲಾಗುವುದು. ಗ್ರಾಮೀಣ ಮಹಿಳೆಯರಿಗೆ ಮತ್ತು 81 ಲಕ್ಷ ಸ್ವಸಹಾಯ ಗುಂಪುಗಳಿಗೆ ಸಹಾಯ ಸಿಕ್ಕಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಲಾಗುವುದು. ಪ್ರಧಾನಮಂತ್ರಿ ವಿಶ್ವ ಕರ್ಮ ಕೌಶಲ್ ಸಮ್ಮಾನ್, ಕರಕುಶಲ ಮತ್ತು ವ್ಯಾಪಾರದಲ್ಲಿ ಕೆಲಸ ಮಾಡುವ ಜನರು ಕಲೆ ಮತ್ತು ಕರಕುಶಲತೆಗೆ ಕೊಡುಗೆ ನೀಡಿದ್ದಾರೆ. ಸ್ವಾವಲಂಬಿ ಭಾರತಕ್ಕೆ ಇದು ಮಹತ್ವದ ಹೆಜ್ಜೆಯಾಗಿದ್ದು. ಈ ಮೂಲಕ ಆರ್ಥಿಕ ನೆರವು ನೀಡುವುದು ಮಾತ್ರವಲ್ಲದೆ ಅವರ ತಾಂತ್ರಿಕ ಕೌಶಲ್ಯಗಳನ್ನು ಸುಧಾರಿಸಲು ಒತ್ತು ನೀಡಲಾಗುವುದು ಮತ್ತು ಅವರಿಗೆ ಸಾಮಾಜಿಕ ಭದ್ರತೆಯನ್ನು ಕಲ್ಪಿಸಲಾಗುವುದು.
ಕೃಷಿ ಕ್ಷೇತ್ರಕ್ಕಾಗಿ ಭಾರಿ ಸಿದ್ಧತೆ
ಗ್ಲೋಬಲ್ ಹಬ್ ಫೋರ್ ಮಿಲೆಟ್ಸ್ ಅಡಿಯಲ್ಲಿ ಭಾರತವು ರಾಗಿ ಉತ್ಪಾದನೆಯಲ್ಲಿ ಸಾಕಷ್ಟು ಮುಂದಿದೆ. ರೈತರಿಗೆ ಪೌಷ್ಟಿಕಾಂಶ, ಆಹಾರ ಭದ್ರತೆ ಮತ್ತು ಯೋಜನೆಗಾಗಿ ರಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶ್ರೀಅನ್ನ ರಾಗಿ, ಶ್ರೀಅನ್ನ ಸಜ್ಜೆ, ಶ್ರೀಅನ್ನ ರಾಮದಾನ, ಕುಂಗ್ನಿ, ಕುತ್ತು ಇವೆಲ್ಲವೂ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿವೆ. ರಾಗಿಯಲ್ಲಿ ರೈತರ ಕೊಡುಗೆ ಸಾಕಷ್ಟಿದ್ದು, ಶ್ರೀ ಅನ್ನವನ್ನು ಹಬ್ ಮಾಡಲು ಶ್ರಮಿಸಲಾಗುತ್ತಿದೆ. ಶ್ರೀಅನ್ನ ನಿರ್ಮಾಣಕ್ಕೆ ಹೈದರಾಬಾದ್ ನ ಸಂಶೋಧನಾ ಸಂಸ್ಥೆಯಿಂದ ಸಾಕಷ್ಟು ನೆರವು ಸಿಗುತ್ತಿದೆ. 2023-24ನೇ ಸಾಲಿಗೆ 20 ಲಕ್ಷ ಕೋಟಿ ಸಾಲದ ಗುರಿಯನ್ನು ನಿಗದಿಪಡಿಸಲಾಗಿದೆ. ಇದಕ್ಕಾಗಿ ಕೃಷಿ ಕ್ಷೇತ್ರದ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ
ಮೂಲಸೌಕರ್ಯ ಮತ್ತು ಹೂಡಿಕೆ ನಮ್ಮ ಮೂರನೇ ಆದ್ಯತೆಯಾಗಿದೆ ಮತ್ತು ಸರ್ಕಾರವು ಬಂಡವಾಳ ವೆಚ್ಚವನ್ನು ಶೇ. 33 ರಷ್ಟು ಹೆಚ್ಚಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ದೇಶದ ಅಭಿವೃದ್ಧಿಯನ್ನು ವೇಗಗೊಳಿಸಲು ಇದನ್ನು ಹೆಚ್ಚಿಸಲಾಗಿದೆ. ಇದರಿಂದ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ಇದೆ ಉದ್ದೇಶದಿಂದ ಬಂಡವಾಳ ವೆಚ್ಚಕ್ಕಾಗಿ ಬಜೆಟ್ನಲ್ಲಿ 10 ಲಕ್ಷ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. ರೈಲು, ರಸ್ತೆ, ರಸ್ತೆ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಗೆ ಒತ್ತು ನೀಡಲಾಗಿದೆ. 157 ಹೊಸ ನರ್ಸಿಂಗ್ ಕಾಲೇಜುಗಳನ್ನು ತೆರೆಯಲಾಗುವುದು ಮತ್ತು 2014 ರ ನಂತರ 157 ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಇದನ್ನೂ ಓದಿ-Budget 2023: ಪಿಂಚಣಿದಾರರಿಗೆ ಸಿಗಲಿದೆ ಬಿಗ್ ಗಿಫ್ಟ್! ಹಿರಿಯ ನಾಗರಿಕರಿಗೆ ಈ ಬಾರಿಯ ಬಜೆಟ್ ನಿಂದ ಏನು ನಿರೀಕ್ಷೆ?
ಭಾರತೀಯ ರೇಲ್ವೆ ಇಲಾಖೆಗೆ ಮಹತ್ವದ ಘೋಷಣೆ
ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವೆ ಭಾರತೀಯ ರೇಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ. ಒದಗಿಸಲಾಗುತ್ತಿದ್ದು, ಇದು ರೇಲ್ವೆ ಇಲಾಖೆಗೆ ಇದುವರೆಗಿನ ಅತಿದೊಡ್ಡ ಹಂಚಿಕೆಯಾಗಿದೆ ಎಂದಿದ್ದಾರೆ, 2014ರಲ್ಲಿ ನೀಸಲಾಗಿರುವ ಬಜೆಟ್ ಅನುದಾನಕ್ಕಿಂತ ಇದು 9 ಪಟ್ಟು ಹೆಚ್ಚಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ಓದಿ-Budget 2023: ಬಜೆಟ್ ಮಂಡನೆಗೂ ಮುನ್ನ ಷೇರು ಮಾರುಕಟ್ಟೆಯಲ್ಲಿ ಭಾರಿ ಹಲ್ ಚಲ್!
ಮಿಶನ್ ಕರ್ಮಯೋಗಿ ಅಡಿ ಘೋಷಣೆ
ಮಿಷನ್ ಕರ್ಮಯೋಗಿ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯಗಳು ಜಂಟಿಯಾಗಿ ಆನ್ಲೈನ್ ತರಬೇತಿ ವೇದಿಕೆಯನ್ನು ಪ್ರಾರಂಭಿಸಲಿವೆ ಎಂದು ವಿತ್ತ ಸಚಿವೆ ಹೇಳಿದ್ದಾರೆ. ಇದಕ್ಕಾಗಿ ಸರ್ಕಾರಿ ನೌಕರರ ಕೌಶಲ ಹೆಚ್ಚಿಸಿ ಕೃತಕ ಬುದ್ಧಿಮತ್ತೆಯ ಮೂರು ಕೇಂದ್ರಗಳನ್ನು ಸ್ಥಾಪಿಸಿ ಅವುಗಳ ಮೂಲಕ ಸಂಶೋಧನೆ ನಡೆಸಲಿದೆ ಎಂದು ಹೇಳಿದ್ದಾರೆ. ಆರೋಗ್ಯ, ಕೃಷಿ ಮುಂತಾದ ಕ್ಷೇತ್ರಗಳಲ್ಲಿನ ಸಮಸ್ಯೆಗಳನ್ನು ಹೋಗಲಾಡಿಸುವ ಕುರಿತು ಚರ್ಚಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.