ಶತಮಾನದ ಸಂಭ್ರಮದಲ್ಲಿ ಧಾರವಾಡದ 'ಕರ್ನಾಟಕ' ಕಾಲೇಜ್

 ಈ ಶತಮಾನಗಳ ಸಂಭ್ರಮವನ್ನು ಆಚರಿಸುತ್ತಿರುವ ಕರ್ನಾಟಕ ಕಾಲೇಜ, ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಕಳೆದ ನೂರುವರ್ಷಗಳಿಂದಲೂ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ.ಮತ್ತು ಇಂದಿಗೂ ಕೂಡಾ ಅದೇ ಹೆಗ್ಗಳಿಕೆಯ ಸಂಪ್ರದಾಯವನ್ನು ಮುಂದಿವರೆಸಿಕೊಂಡು ಹೋಗುತ್ತಿದೆ ಎಂದರೆ ಅದು ತಪ್ಪಾಗಲಾರದು.

Last Updated : Nov 28, 2017, 02:47 PM IST
ಶತಮಾನದ ಸಂಭ್ರಮದಲ್ಲಿ ಧಾರವಾಡದ 'ಕರ್ನಾಟಕ' ಕಾಲೇಜ್ title=

ಧಾರವಾಡಕ್ಕೆ ವಿದ್ಯಾಕಾಶಿ,ಸಾಂಸ್ಕೃತಿಕ  ರಾಜಧಾನಿ ಎನ್ನುವ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಈ ಎಲ್ಲ ಹಿರಿಮೆಗಳು ಅದು ಪ್ರಮುಖವಾಗಿ ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ರಾಜಕಾರಣ, ಇನ್ನಿತರ ವಿಭಾಗಗಳಲ್ಲಿ ಅದು ತನ್ನ ಛಾಪನ್ನು ರಾಜ್ಯ ಮಾತ್ರವಲ್ಲದೆ ದೇಶದ ಎಲ್ಲ ಕಡೆ ಪಸರಿಸಲು ಸಾಧ್ಯವಾಗಿದೆ.ಆದರೆ ಈ ಹಿರಿಮೆಗಳಿಗೆಲ್ಲ ಜ್ಞಾನದ ನೀರೆರೆದು ಪೋಷಿಸಿದ್ದು ಇಂದಿನ ಧಾರವಾಡದ 'ಕರ್ನಾಟಕ' ಕಾಲೇಜ್.

ಹೌದು, ಈಗ ಇಂತಹ ಕಾಲೇಜಿಗೆ ಶತಮಾನದ ಸಂಭ್ರಮ.

ಈ ಹಿಂದೆ ಬಾಂಬೆ ಪ್ರಾಂತ್ಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಹುತೇಕ ಈ ಭಾಗದ ವಿದ್ಯಾರ್ಥಿಗಳು ದೂರದ ಪುಣೆಯ ಫಾರ್ಗುಸನ್ ಕಾಲೇಜ್ ಅಥವಾ ಬಾಂಬೆಯಲ್ಲಿನ ಸೆಂಟ್ ಕ್ಸೇವಿಯರ್ ಕಾಲೇಜಿಗೆ ಹೋಗುತ್ತಿದ್ದರು ಆದ್ದರಿಂದ ಈ ಪ್ರದೇಶದಲ್ಲಿ ಉನ್ನತ ಶಿಕ್ಷಣದ ಮಹತ್ವವನ್ನು ಅರಿತು ಅಂದಿನ ಬಾಂಬೆ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ  ಸರ್ ಸಿದ್ದಪ್ಪ ಕಂಬಳಿಯವರು ತಮ್ಮ ಸ್ವಂತ ಊರಿನ ಅಭಿಮಾನದಿಂದಾಗಿ ಧಾರವಾಡಕ್ಕೆ ಕಾಲೇಜನ್ನು ಮಂಜೂರು ಮಾಡಿದರು. ಅದರ ಪ್ರತಿಫಲವಾಗಿ 1917 ರಲ್ಲಿ ಜನ್ಮ ತಾಳಿದ ಕರ್ನಾಟಕ  ಕಾಲೇಜ್  ಇಂದು ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ.
 
ಪ್ರಮುಖವಾಗಿ ಈಗಿನ ಕೆಂಪು ಬಣ್ಣದ ಈ ಗೋಥಿಕ್ ಶೈಲಿಯ ಕಟ್ಟಡವು ದಕ್ಷಿಣ ಮರಾಠ ಕೇಂದ್ರ ರೈಲ್ವೆಯ ಕಚೇರಿಯಾಗಿದ್ದ  ಕಟ್ಟಡವು ಕೆಲವೇ ದಿನಗಳಲ್ಲಿ ಮದ್ರಾಸ್ ಗೆ ವರ್ಗಾಯಿಸುವ ಸಂಭವವಿತ್ತು ಆದರೆ ಅದಕ್ಕೆ ಆಗ ಲಕ್ಷಾಂತರ ರೂಪಾಯಿಗಳ ಹಣವನ್ನು ಕೊಟ್ಟು ಇದನ್ನು ಕಾಲೇಜಿನ ಕಟ್ಟಡವಾಗಿ ಪರಿವರ್ತಿಸಲಾಯಿತು.ಅಂದಿನಿಂದ ಇಂದಿನವರೆಗೂ ಈ ಕಾಲೇಜಿನಲ್ಲಿ ಕಲಿತವರು ವಿಜ್ಞಾನಿಗಳು,ಕವಿಗಳು,ರಾಜಕಾರಣಿಗಳು ,ಶಿಕ್ಷಣ ತಜ್ಞರಾಗಿ ಹೊರಹೊಮಿದ್ದಾರೆ.ಇದರಲ್ಲಿ ಕಲಿತ ಮಹನಿಯರೆಂದರೆ ಗುದ್ಲೆಪ್ಪ ಹಳ್ಳಿಕೇರಿ,ಗಿರೀಶ್  ಕಾರ್ನಾಡ್,ಜಿ.ಎಸ್.ಅಮೂರ್, ಮತ್ತು, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಧೀಶರಾಗಿದ್ದ ಪಿ.ಬಿ.ಗಜೇಂದ್ರಗಡಕರ್, ಚನ್ನವೀರ ಕಣವಿ, ನಂದನ್ ನೀಲಕೇಣಿ,  ಗೋವಾದ ಮಾಜಿ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್, ಪಾಟೀಲ ಪುಟ್ಟಪ್ಪ, ಕೀರ್ತಿನಾಥ ಕುರ್ತುಕೋಟಿ. ಇನ್ನು ಮುಂತಾದವರು ಇಲ್ಲಿ ಕಲಿತು ಕಾಲೇಜಿನ ಕೀರ್ತಿಯನ್ನು ಬೆಳಗಿಸಿದ್ದಾರೆ.

ಇನ್ನೊಂದು ಸಂಗತಿಯೆಂದರೆ ಈ ಕಾಲೇಜಿನಲ್ಲಿದ್ದ ಪ್ರಾಧ್ಯಾಪಕ ವೃಂದವು ಕೂಡಾ ಅಂತಹದ್ದೇ ಎಂದು ಹೇಳಬಹುದು ವಿ.ಕೃ.ಗೋಕಾಕ್ ,ಜಿ ಎಸ್.ಪರಮಶಿವಯ್ಯ ,ಪಂಡಿತ್ ರಾಜೀವ್ ತಾರಾನಾಥ್, ಗಿರಡ್ಡಿ ಗೋವಿಂದರಾಜ್,ಸಿದ್ದಲಿಂಗ ಪಟ್ಟಣಶೆಟ್ಟಿ, ಶ್ರೀರಂಗ ಮತ್ತು ಕೆ.ಜಿ.ಕುಂದಣಗಾರ ರಂತಹ ಮಹನಿಯ ಪ್ರಾಧ್ಯಾಪಕರು ಈ ಕರ್ನಾಟಕ ಕಾಲೇಜಿನಲ್ಲಿ ಭೋದಿಸಿದ್ದಾರೆ.ಈಗ ಈ ಶತಮಾನಗಳ ಸಂಭ್ರಮವನ್ನು ಆಚರಿಸುತ್ತಿರುವ ಕರ್ನಾಟಕ ಕಾಲೇಜ, ಆಧುನಿಕ ಕರ್ನಾಟಕ ನಿರ್ಮಾಣದಲ್ಲಿ ಕಳೆದ ನೂರುವರ್ಷಗಳಿಂದಲೂ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿದೆ.ಮತ್ತು ಇಂದಿಗೂ ಕೂಡಾ ಅದೇ ಹೆಗ್ಗಳಿಕೆಯ ಸಂಪ್ರದಾಯವನ್ನು ಮುಂದಿವರೆಸಿಕೊಂಡು ಹೋಗುತ್ತಿದೆ ಎಂದರೆ ಅದು ತಪ್ಪಾಗಲಾರದು. 

Trending News