Nayanthara : Nayanthara : ʼಅವರು ನನ್ನನ್ನೂ ಬಿಟ್ಟಿಲ್ಲ..ʼ ಲೇಡಿಸೂಪರ್‌ ಸ್ಟಾರ್‌ ʼಲೈಂಗಿಕ ಕಿರುಕುಳʼ ಅನುಭವ..!

ಲೇಡಿ ಸೂಪರ್‌ ಸ್ಟಾರ್‌ ನಟಿ, ನಯನತಾರಾ ಅವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ಅಮೋಘ ನಟನೆಯ ಮೂಲಕ ಮಲಯಾಳಂ ಚಿತ್ರರಂಗದಿಂದ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಇಂದು ಟಾಪ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ʼಜವಾನ್ʼ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದಾರೆ.

Written by - Krishna N K | Last Updated : Feb 2, 2023, 03:30 PM IST
  • ಬಹುಭಾಷಾ ನಟಿ ನಯನತಾರಾ ಹೇಳಿಕೆ ಒಂದು ಸಂಚಲನ ಸೃಷ್ಟಿಸುತ್ತಿದೆ.
  • ಕ್ಯಾಸ್ಟಿಂಗ್‌ ಕೌಚ್‌ ಬಗ್ಗೆ ಲೇಡಿ ಸೂಪರ್‌ ಸ್ಟಾರ್‌ ಧ್ವನಿ ಎತ್ತಿದ್ದಾರೆ.
  • ತಮಗೆ ನೀಡಲಾದ ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Nayanthara : Nayanthara : ʼಅವರು ನನ್ನನ್ನೂ ಬಿಟ್ಟಿಲ್ಲ..ʼ ಲೇಡಿಸೂಪರ್‌ ಸ್ಟಾರ್‌ ʼಲೈಂಗಿಕ ಕಿರುಕುಳʼ ಅನುಭವ..! title=

Nayanthara Casting couch : ಲೇಡಿ ಸೂಪರ್‌ ಸ್ಟಾರ್‌ ನಟಿ, ನಯನತಾರಾ ಅವರನ್ನು ವಿಶೇಷವಾಗಿ ಪರಿಚಯಿಸುವ ಅಗತ್ಯವಿಲ್ಲ. ತಮ್ಮ ಅಮೋಘ ನಟನೆಯ ಮೂಲಕ ಮಲಯಾಳಂ ಚಿತ್ರರಂಗದಿಂದ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟು, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಇಂದು ಟಾಪ್ ನಾಯಕಿಯಾಗಿ ಮಿಂಚುತ್ತಿದ್ದಾರೆ. ಸದ್ಯ ʼಜವಾನ್ʼ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಶಕ್ತಿ ಪ್ರದರ್ಶನ ತೋರಲು ಮುಂದಾಗಿದ್ದಾರೆ.

ಕಳೆದ ವರ್ಷ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅಲ್ಲದೆ, ಎರಡು ಅವಳಿ ಮಕ್ಕಳಿಗೂ ಸಹ ಜನ್ಮ ನೀಡಿದ್ದಾರೆ. ಇತ್ತೀಚೆಗೆ, ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಅವರಿಗೆ ದೊಡ್ಡ ಚಲನಚಿತ್ರಕ್ಕೆ ಆಫರ್ ಮಾಡಿ ಮತ್ತು ಪ್ರತಿಯಾಗಿ ದೈಹಿಕವಾಗಿ ಸಹಕರಿಸುವಂತೆ ಕೇಳಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಅವರು, ಆ ಆಫರ್ ಅನ್ನು ತಿರಸ್ಕರಿಸಿದರಂತೆ.

ಇದನ್ನೂ ಓದಿ: Sidharth Kiara wedding : ರಾಜಸ್ಥಾನ ಕೋಟೆಯಲ್ಲಿ ಫೆ.6 ರಂದು ಸಿದ್ಧಾರ್ಥ್‌, ಕಿರಾಯಾ ಮದುವೆ ಫಿಕ್ಸ್‌..!

ಅಲ್ಲದೆ, ತಮ್ಮ ನಟನಾ ಸಾಮರ್ಥ್ಯದ ಬಗ್ಗೆ ತಮಗೆ ವಿಶ್ವಾಸವಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ಹೇಳಿ ಬೇರೆ ರೀತಿ ನನ್ನಿಂದ ಎನನ್ನೂ ನಿರೀಕ್ಷಿಸಬೇಡಿ ಅಂತ ಡೈರೆಕ್ಟಾಗಿ ಹೇಳಿದ್ದೇನೆ ಎಂದಿದ್ದಾರೆ. ನಯನತಾರಾ ಪ್ರಸ್ತುತ ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸೋನಿಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಪ್ರಮುಖ ಪಾತ್ರಗಳನ್ನು ಕಾಣಿಸಿಕೊಳ್ಳಲಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಯನತಾರಾ ನಟನೆಯ ʼಕನೆಕ್ಟ್ʼ ಚಿತ್ರ ಬಿಡುಗಡೆಯಾಗಿತ್ತು. ಈ ಹಾರರ್ ಥ್ರಿಲ್ಲರ್ ಚಿತ್ರ ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಯಿತು. ಕುತೂಹಲಕಾರಿ ಸಂಗತಿಯೆಂದರೆ ನಯನತಾರಾ ಅವರ ಪತಿ ಈ ಚಿತ್ರವನ್ನು ನಿರ್ಮಿಸಿದ್ದರು. ಜವಾನ್ ಚಿತ್ರದ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆ. ನಯನತಾರಾ ನಟನೆಯ ತಮಿಳು ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News