Budget 2023 : ಚಲನಚಿತ್ರರಂಗಕ್ಕೆ ಕೇಂದ್ರ ಬಜೆಟ್ 2023 ಶೂನ್ಯ ಕೊಡುಗೆ ನೀಡಿದೆ..!

ಇಂದು ಬಹುನೀಕ್ಷಿತ ಕೇಂದ್ರ ಬಜೆಟ್ 2023 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು. ಮಧ್ಯಮ ವರ್ಗದವರಿಗೆ ಈ ಬಜೆಟ್‌ ಸ್ವಲ್ಪ ಸಮಾಧಾನ ತಂದಿದೆ. ಮೂಲಸೌಕರ್ಯ, ಪ್ರವಾಸೋದ್ಯಮ, ಐಟಿ ಮತ್ತು ತೋಟಗಾರಿಕೆಯಂತಹ ಕ್ಷೇತ್ರಗಳ ಮೇಲೆ ಪರಿಣಾಮ ಬಿದ್ದರೂ ಸಹ, ಮನರಂಜನಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

Written by - Krishna N K | Last Updated : Feb 1, 2023, 07:43 PM IST
  • ಇಂದು ಬಹುನೀಕ್ಷಿತ ಕೇಂದ್ರ ಬಜೆಟ್ 2023 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು.
  • ಮಧ್ಯಮ ವರ್ಗದವರಿಗೆ ಈ ಬಜೆಟ್‌ ಸ್ವಲ್ಪ ಸಮಾಧಾನ ತಂದಿದೆ.
  • ಮನರಂಜನಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಹೇಳಿದ್ದಾರೆ.
Budget 2023 : ಚಲನಚಿತ್ರರಂಗಕ್ಕೆ ಕೇಂದ್ರ ಬಜೆಟ್ 2023 ಶೂನ್ಯ ಕೊಡುಗೆ ನೀಡಿದೆ..! title=

Budget 2023 : ಇಂದು ಬಹುನೀಕ್ಷಿತ ಕೇಂದ್ರ ಬಜೆಟ್ 2023 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದರು. ಮಧ್ಯಮ ವರ್ಗದವರಿಗೆ ಈ ಬಜೆಟ್‌ ಸ್ವಲ್ಪ ಸಮಾಧಾನ ತಂದಿದೆ. ಮೂಲಸೌಕರ್ಯ, ಪ್ರವಾಸೋದ್ಯಮ, ಐಟಿ ಮತ್ತು ತೋಟಗಾರಿಕೆಯಂತಹ ಕ್ಷೇತ್ರಗಳ ಮೇಲೆ ಪರಿಣಾಮ ಬಿದ್ದರೂ ಸಹ, ಮನರಂಜನಾ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಮನರಂಜನಾ ಉದ್ಯಮಕ್ಕೆ ಇದುವರೆಗೆ ಯಾವುದೇ ಸರ್ಕಾರ ಮಹತ್ವ ನೀಡಿಲ್ಲ. ಸಿನಿರಂಗ ಸರ್ಕಾರದ ಮೇಲೆ ಭರವಸೆ ಇಟ್ಟಿತ್ತು ಆದರೆ ಅವರಿಗೆ ಯಾವುದೇ ಪ್ರೋತ್ಸಾಹವಿಲ್ಲ ನೀಡಲಿಲ್ಲ ಎಂದು ಬಜೆಟ್‌ ಕುರಿತು ಈ ಬಗ್ಗೆ ಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅಸಮಾಧಾನ ಹೊರಹಾಕಿದ್ದಾರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Sakuchi trailer : ಭಯಾನಕವಾಗಿದೆ ʼಸಕೂಚಿʼ ವಾಮಾಚಾರದ ಟ್ರೇಲರ್..!

ದಿನದಿಂದ ದಿನಕ್ಕೆ ಮನರಂಜನಾ ಉದ್ಯಮವು ಬಹುದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಅಲ್ಲದೆ, ಈ ಉದ್ಯಮವನ್ನು ಜನರು ಯಾವಾಗಲೂ ಕಡೆಗಣಿಸುತ್ತಿದ್ದಾರೆ. ಜವಳಿ ಅಥವಾ ಆರೋಗ್ಯ ಉದ್ಯಮದ ಬಗ್ಗೆ ಮಾತನಾಡಿದಷ್ಟು ಚಲನಚಿತ್ರ ಇಂಡ್ರಸ್ಟ್ರೀ ಬಗ್ಗೆ ಮಾತನಾಡುವುದಿಲ್ಲ. ಇತರ ಉದ್ಯಮಗಳ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತವೆ. ಆದ್ರೆ ಚಿತ್ರರಂಗದ ಕಡೆ ಒಬ್ಬರೂ ಮಾತನಾಡುವುದಿಲ್ಲ ಎಂದು ಅಶೋಕ್‌ ಅವರು ಬೇಸರ ವ್ಯಕ್ತಪಡಿಸಿದರು.

ಅದು ಬಾಲಿವುಡ್ ಆಗಿರಲಿ ಅಥವಾ ಇನ್ನಾವುದೇ ಇಂಡಸ್ಟ್ರಿಯಾಗಿರಲಿ, ಕೆಲವುವೊಂದಿಷ್ಟು ಸಮಸ್ಯೆಗಳಿವೆ. ಅವುಗಳಲ್ಲಿ ಒಂದು ಟಿಕೆಟ್‌ಗಳ ಬೆಲೆ. ಥಿಯೇಟರ್‌ಗಳಲ್ಲಿ ಚಿತ್ರಗಳ ವೀಕ್ಷಣೆಗೆ ಇದು ಹೇಗೆ ದೊಡ್ಡ ಅಡ್ಡಿಯಾಗಿದೆ ಎಂದು ಜನರು ದೂರುತ್ತಿದ್ದಾರೆ. ಆದ್ರೆ, ಬುಡಕಟ್ಟು ಸಮುದಾಯ ಮತ್ತು ಭಾರತೀಯ ಮಧ್ಯಮ ವರ್ಗಕ್ಕೆ ಬಜೆಟ್ ಉತ್ತಮ ಕೆಲಸಗಳನ್ನು ಮಾಡಿದೆ. ಹಿರಿಯ ನಾಗರಿಕರು ಕೂಡ 2023ರ ಬಜೆಟ್‌ನಿಂದ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಹೊಗಳಿದರು.

 

 

Trending News