Black Fruits Health Benefits : ಎಲ್ಲಾ ಹಣ್ಣುಗಳು ಪೋಷಕಾಂಶಗಳಿಂದ ತುಂಬಿರುತ್ತವೆ. ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಕೆಲವೊಂದು ಕಾಯಿಲೆಗಳಲ್ಲಿ ಕೆಲವೊಂದು ಹಣ್ಣುಗಳನ್ನು ಸೇವಿಸುವುದು ಸಹಕಾರಿಯಾಗಿರುತ್ತದೆ. ಆದರೆ ಮತ್ತೊಂದೆಡೆ ಕೆಲವೊಂದು ಕಾಯಿಲೆಗಳಲ್ಲಿ ಕೆಲವು ಹಣ್ಣುಗಳ ಸೇವನೆ ಹಾನಿಕಾರಕವಾಗಿ ಕೂಡಾ ಪರಿಣಮಿಸುತ್ತದೆ. ಈ ಪೈಕಿ ಕಪ್ಪು ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿರುವ ಪೋಷಕಾಂಶಗಳು ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತವೆ.
ಕಪ್ಪು ದ್ರಾಕ್ಷಿಗಳು :
ದ್ರಾಕ್ಷಿಗಳು ರುಚಿಯಲ್ಲಿ ಹುಳಿಯಾಗಿರಬಹುದು. ಆದರೆ ಅವು ಆರೋಗ್ಯಕ್ಕೆ ತುಂಬಾ ಸಿಹಿಯಾಗಿರುತ್ತವೆ. ದ್ರಾಕ್ಷಿಯಲ್ಲಿ ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಇವುಗಳ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಮತ್ತು ಕೂದಲಿಗೆ ಕೂಡಾ ಪ್ರಯೋಜನಕಾರಿ.
ಇದನ್ನೂ ಓದಿ : ಅಡುಗೆ ಮಾಡುವಾಗ ಈ ಮಸಾಲೆಯನ್ನು ಬಳಸಿದರೆ ಹೊಟ್ಟೆಯ ಸಮಸ್ಯೆ ಎದುರಾಗುವುದಿಲ್ಲ !
ಕಪ್ಪು ಅಂಜೂರದ ಹಣ್ಣುಗಳು :
ಕಪ್ಪು ಅಂಜೂರದ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳಲ್ಲಿರುವ ಪ್ರೋಬಯಾಟಿಕ್ ಗುಣಲಕ್ಷಣಗಳು ಜೀರ್ಣಕ್ರಿಯೆಗೆ ಬಹಳ ಪ್ರಯೋಜನಕಾರಿ. ಅಂಜೂರದಲ್ಲಿ ಫೈಬರ್ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತವೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬ್ಲಾಕ್ಬೆರಿ :
ಬ್ಲ್ಯಾಕ್ ಬೆರ್ರಿಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ವಿಟಮಿನ್ ಸಿ, ಫೈಬರ್ ಮತ್ತು ಮ್ಯಾಂಗನೀಸ್ ನಂತಹ ಪೋಷಕಾಂಶಗಳು ಇವುಗಳಲ್ಲಿ ಸಾಕಷ್ಟು ಕಂಡುಬರುತ್ತವೆ. ಅವರು ಮೆದುಳನ್ನು ಆರೋಗ್ಯಕರವಾಗಿಡುವ ಕೆಲಸ ಮಾಡುತ್ತದೆ. ಬ್ಲ್ಯಾಕ್ ಬೆರ್ರಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ಇದನ್ನೂ ಓದಿ : Health Tips: ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ಈ ಹಿಟ್ಟಿನ ದೋಸೆ ಸೇವಿಸಿ: ಒಂದು ವಾರದಲ್ಲಿ ಮಧುಮೇಹ ಮಾಯ!
ಕಪ್ಪು ಚೆರ್ರಿ ಹಣ್ಣು :
ಸಾಮಾನ್ಯವಾಗಿ ಜನರಿಗೆ ಕೆಂಪು ಬಣ್ಣದ ಚೆರ್ರಿ ಹಣ್ಣಿನ ಬಗ್ಗೆ ತಿಳುವಳಿಕೆ ಇರುತ್ತದೆ. ಕಪ್ಪು ಚೆರ್ರಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಸಂಧಿವಾತ ಮತ್ತು ಜೀರ್ಣಕ್ರಿಯೆಯಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಇದು ಪ್ರಯೋಜನಕಾರಿಯಾಗಿದೆ.
ಕಪ್ಪು ಒಣದ್ರಾಕ್ಷಿ :
ಕಪ್ಪು ಒಣದ್ರಾಕ್ಷಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಕಬ್ಬಿಣಾಂಶ ಹೇರಳವಾಗಿದೆ. ಕಪ್ಪು ಒಣದ್ರಾಕ್ಷಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ತಿಂದರೆ ಮೂಳೆಗಳೂ ಗಟ್ಟಿಯಾಗುತ್ತವೆ. ಕಪ್ಪು ಒಣದ್ರಾಕ್ಷಿ ರಕ್ತಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.