Gold Price Today: ಚಿನ್ನ ಖರೀದಿಸ ಬಯಸುವವರಿಗೆ ಸಿಕ್ತು ಬಂಪರ್ ಲಾಟರಿ, ಬೆಲೆಯಲ್ಲಿ ಭಾರಿ ಇಳಿಕೆ

Gold Price Update: ಇಂದಿನ ದಿನದಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇದರ ಜೊತೆಗೆ ಬೆಳ್ಳಿ ಬೆಲೆಯೂ ಕೂಡ ಕೆ.ಜಿಗೆ ಸುಮಾರು 2000 ರೂ.ಗಳಷ್ಟು ಅಗ್ಗವಾಗಿದೆ. ಹೀಗಿರುವಾಗ ನೀವೂ ಕೂಡ ಚಿನ್ನ ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ ಈ ಸುದ್ದಿ ವಿಶೇಷ ನಿಮಗಾಗಿ.  

Written by - Nitin Tabib | Last Updated : Feb 3, 2023, 06:39 PM IST
  • ಈ ಕುರಿತು ಮಾತನಾಡಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ,
  • ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಬಡ್ಡಿದರಗಳ ಕುರಿತು ಮಾಡಿರುವ ಆಕ್ರಮಣಕಾರಿ ಟಿಪ್ಪಣಿಗಳ ಬಳಿಕ
  • ಚಿನ್ನದ ಬೆಲೆ ಒಂಬತ್ತು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತ್ತು ಎಂದು ಹೇಳಿದ್ದಾರೆ.
Gold Price Today: ಚಿನ್ನ ಖರೀದಿಸ ಬಯಸುವವರಿಗೆ ಸಿಕ್ತು ಬಂಪರ್ ಲಾಟರಿ, ಬೆಲೆಯಲ್ಲಿ ಭಾರಿ ಇಳಿಕೆ title=
ಚಿನ್ನ-ಬೆಳ್ಳಿ ಬೆಲೆ ಲೇಟೆಸ್ಟ್ ಅಪ್ಡೇಟ್

Gold-Silver Latest Price: ಇಂದು ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿಯ ಬೆಲೆ ರೂ.2000ಕ್ಕೂ ಹೆಚ್ಚು ಕುಸಿದಿದೆ. ನೀವು ಕೂಡ ಇಂದು ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ನಿಮಗೆ ಒಳ್ಳೆಯ ಸುದ್ದಿಯಾಗಿದೆ. ನಿರಂತರ ಬೆಲೆ ಏರಿಕೆಯ ನಡುವೆ, ಇಂದು ನಿಮಗೆ ಅಗ್ಗದ ಚಿನ್ನವನ್ನು ಖರೀದಿಸುವ ಅವಕಾಶವಿದೆ. ಇಂದು ಚಿನ್ನದ ಬೆಲೆ ಸುಮಾರು 58,000 ರೂ. ಹತ್ತಿರಕ್ಕೆ ತನ್ನ ವಹಿವಾಟನ್ನು ನಿಲ್ಲಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ.

ಅಗ್ಗವಾದ ಚಿನ್ನ ಮತ್ತು ಬೆಳ್ಳಿ
ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ 681 ರಷ್ಟು ಕುಸಿದು 10 ಗ್ರಾಂಗೆ ರೂ 57,929 ಕ್ಕೆ ತಲುಪಿದೆ. ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 58,610 ರೂ.ಗಳಿಗೆ ಅಂತ್ಯವಾಗಿತ್ತು. ಇನ್ನೊಂದೆಡೆ ಇಂದು ಬೆಳ್ಳಿಯ ಬೆಲೆಯೂ 2,045 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 70,335 ರೂಪಾಯಿಗಳಿಗೆ ತಲುಪಿದೆ.

ಇದನ್ನೂ ಓದಿ-DA Hike Update: ಸರ್ಕಾರಿ ನೌಕರಿಗೊಂದು ಮಹತ್ವದ ಅಪ್ಡೇಟ್, ಜನವರಿ 1 ರಿಂದ ಎಷ್ಟು ಡಿಎ ಸಿಗಲಿದೆ ಗೊತ್ತಾ?

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದ ಚಿನ್ನದ ಬೆಲೆ
ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,913 ಡಾಲರ್‌ಗೆ ಇಳಿಕೆಯಾಗಿದ್ದು, ಬೆಳ್ಳಿ ಪ್ರತಿ ಔನ್ಸ್‌ಗೆ 23.38 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.

ಇದನ್ನೂ ಓದಿ-ಈ ಕೆಲಸ ಇಂದೇ ಮಾಡಿ, ಇಲ್ದಿದ್ರೆ ನಿಮ್ಮ ಒಂದು ಮಹತ್ವದ ದಾಖಲೆ ಕಸದ ತೊಟ್ಟಿ ಸೇರುತ್ತೆ!

ತಜ್ಞರ ಅಭಿಪ್ರಾಯವೇನು?
ಈ ಕುರಿತು ಮಾತನಾಡಿರುವ ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ,  ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಬಡ್ಡಿದರಗಳ ಕುರಿತು ಮಾಡಿರುವ ಆಕ್ರಮಣಕಾರಿ ಟಿಪ್ಪಣಿಗಳ ಬಳಿಕ  ಚಿನ್ನದ ಬೆಲೆ ಒಂಬತ್ತು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತ್ತು ಎಂದು ಹೇಳಿದ್ದಾರೆ. ಇದರ ನಂತರ, ಹೂಡಿಕೆದಾರರಿಂದ ಪ್ರಾಫಿಟ್ ಬುಕಿಂಗ್ ನಡೆದ ಕಾರಣ, ಕಾಮೆಕ್ಸ್‌ನಲ್ಲಿ ಚಿನ್ನದ ಬೆಲೆಗಳು ತಮ್ಮ ಅತ್ಯುನ್ನತ ಮಟ್ಟದಿಂದ ಇಳಿಕೆಯಾಗಿವೆ ಮತ್ತು ಗುರುವಾರ ಶೇ. 1.94 ರಷ್ಟು ಕುಸಿತದೊಂದಿಗೆ ವಹಿವಾಟನ್ನು ನಿಲ್ಲಿಸಿವೆ.

ಇದನ್ನೂ ಓದಿ-PM Kisan: ದೇಶದ ಕೋಟ್ಯಾಂತರ ರೈತರಿಗೆ ಬಿಗ್ ಶಾಕ್ !

ಚಿನ್ನದ ಬೆಲೆ ಇಳಿಕೆಗೆ ಪ್ರತಿಕ್ರಿಯಿಸಿರುವ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಸರಕು ಸಂಶೋಧನಾ ವಿಭಾಗದ ಹಿರಿಯ ಉಪಾಧ್ಯಕ್ಷ ನವನೀತ್ ದಮಾನಿ, ಹೂಡಿಕೆದಾರರು ಪ್ರಸ್ತುತ ಅಮೇರಿಕಾ ಕೃಷಿಯೇತರ ಉದ್ಯೋಗ, ನಿರುದ್ಯೋಗ ದರದ ಅಂಕಿ-ಅಂಶಗಳ ಮೇಲೆ ತನ್ನ ಕೇಂದ್ರೀಕರಿಸುವುದರಿಂದ ಇಂದು ನಾವು ಮಾರುಕಟ್ಟೆಯಲ್ಲಿ ಹೆಚ್ಚು ಚಂಚಲತೆಯನ್ನು ಗಮನಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News