ಅಬ್ಬರಿಸಲು ಸಜ್ಜಾದ "ಕಬ್ಜ"....

ಸಪ್ತಸಾಗರದಾಚೆ ರಿಲೀಸ್ ಗೂ ಮುನ್ನ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರೋ ಸಿನಿಮಾ ಅಂದ್ರೆ 'ಕಬ್ಜ'. ಅಷ್ಟೇ ಅಲ್ಲ ಟ್ರೆಂಡಿಂಗಲ್ಲಿರೋ ಮ್ಯಾಟರ್ ಕೂಡ 'ಕಬ್ಜ' ಸಿನಿಮಾದ್ದಾಗಿದೆ. ಕಬ್ಜ ಆರ್ ಚಂದ್ರು ನಿರ್ದೇಶನದ ಸಿನಿಮಾ.

Written by - YASHODHA POOJARI | Last Updated : Feb 13, 2023, 12:50 PM IST
  • ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಈ ಸಿನಿಮಾದಲ್ಲಿ ಉಪ್ಪಿ ತುಂಬಾ ಡಿಫರೆಂಟ್ ರೋಲ್ ಮಾಡಿದ್ದಾರೆ.
  • ಕಿಚ್ಚ ಸುದೀಪ್ ಎಂಟ್ರಿ ಕೂಡ ಸಿನಿಮಾದಲ್ಲಿರುತ್ತೆ.
  • ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.
ಅಬ್ಬರಿಸಲು ಸಜ್ಜಾದ "ಕಬ್ಜ"....  title=

ಸಪ್ತಸಾಗರದಾಚೆ ರಿಲೀಸ್ ಗೂ ಮುನ್ನ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿರೋ ಸಿನಿಮಾ ಅಂದ್ರೆ 'ಕಬ್ಜ'. ಅಷ್ಟೇ ಅಲ್ಲ ಟ್ರೆಂಡಿಂಗಲ್ಲಿರೋ ಮ್ಯಾಟರ್ ಕೂಡ 'ಕಬ್ಜ' ಸಿನಿಮಾದ್ದಾಗಿದೆ. ಕಬ್ಜ ಆರ್ ಚಂದ್ರು ನಿರ್ದೇಶನದ ಸಿನಿಮಾ. ರಿಯಲ್ ಸ್ಟಾರ್ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿರೋ ಈ ಸಿನಿಮಾದಲ್ಲಿ ಉಪ್ಪಿ ತುಂಬಾ ಡಿಫರೆಂಟ್ ರೋಲ್ ಮಾಡಿದ್ದಾರೆ.ಕಿಚ್ಚ ಸುದೀಪ್ ಎಂಟ್ರಿ ಕೂಡ ಸಿನಿಮಾದಲ್ಲಿರುತ್ತೆ. ಇದರ ಜೊತೆಗೆ ಶಿವಣ್ಣನೂ ಕೂಡ ಈ ಸಿನಿಮಾದಲ್ಲಿ ಇರುತ್ತಾರೆ ಅನ್ನೋ ನ್ಯೂಸ್ ದೊಡ್ಡ ಮಟ್ಟದಲ್ಲೇ ಗಾಂಧಿನಗರದಲ್ಲಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ಕಬ್ಜ ಸಿನಿಮಾ ಬಗ್ಗೆ ಭಯ ಬಿದ್ದಿದೆ ಅನ್ನೋ ಮ್ಯಾಟರ್ ಹೀಟರ್ ತರ ಕೊತಕೊತ ಅಂತ ಕುದಿಯಲು ಶುರುವಾಗಿದೆ ಅಂದ್ರೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತೆ ಅಂತ. ಹಾಗಾದ್ರೆ ಬಾಲಿವುಡ್ ಮಂದಿಗೆ ಕಬ್ಜ ಸಿನಿಮಾ ಬಗ್ಗೆ ಯಾಕೆ ಭಯ ಅಂದ್ರೆ ಹಲವು ಅದ್ಭುತ ವಿಚಾರಗಳು ಈ ಸಿನಿಮಾದಲ್ಲಿ ಬಾಲಿವುಡ್ ಸಿನಿಮಾಗಳನ್ನ ಮೀರಿಸೋ ಲೆವೆಲ್ಲಿಗೆ ಇದೆ. ಇಷ್ಟೇ ಅಲ್ಲ ಡೈರೆಕ್ಟರ್ ಆರ್ ಚಂದ್ರು ಹೇಳೋ ಪ್ರಕಾರ ಸೂಪರ್ ಸ್ಟಾರ್ ರಜಿನಿಕಾಂತ್ ಕೂಡ ಬಿಗ್ ಸ್ಕ್ರೀನ್ ಮೇಲೆ ಕಬ್ಜ ಸಿನಿಮಾ ನೋಡಲು ಕಾಯುತ್ತಿದ್ದಾರೆ ಅನ್ನೋ ವಿಚಾರವನ್ನ ಇತ್ತೀಚಿಗೆ ಸಾಕಷ್ಟು ಬಾರೀ ಹೇಳಿಕೊಂಡಿದ್ದಾರೆ. ಈ ಸಂಗತಿ ನಮ್ಮೆಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಇದನ್ನೂ ಓದಿ-"ಲಂಕಾಸುರ" ಚಿತ್ರದ "ಮಾಡರ್ನ್ ಮಹಾಲಕ್ಷ್ಮಿ" ಸಾಂಗ್ ರಿಲೀಸ್ ಮಾಡಿದ ಮಾಲಾಶ್ರಿ

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ

ಇದನ್ನೂ ಓದಿ-Valentine's Day: ಸ್ಯಾಂಡಲ್‍ವುಡ್‍ನಲ್ಲಿ ಪ್ರೀತಿಸಿ ಮದುವೆಯಾದ ಸ್ಟಾರ್ ಜೋಡಿಗಳು  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News