ಜನವರಿ 1ರಂದು ಜನಿಸುವ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ಠೇವಣಿ

ಪಿಂಕ್ ಬೇಬಿ ಹೆಸರಿನಲ್ಲಿ ಕಳೆದ ವರ್ಷ ಈ ಯೋಜನೆ ಜಾರಿ ಮಾಡಲಾಗಿತ್ತು.

Last Updated : Dec 27, 2018, 11:10 AM IST
ಜನವರಿ 1ರಂದು ಜನಿಸುವ ಹೆಣ್ಣು ಮಗುವಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ಠೇವಣಿ  title=
File Image

ಬೆಂಗಳೂರು: ಜನವರಿ 1ರಂದು ಬಿಬಿಎಂಪಿ ಆಸ್ಪತ್ರೆಯಲ್ಲಿ ಸಹಜ ಹೇರಿಗೆಯಾಗುವ ಹೆಣ್ಣು ಮಗುವಿಗೆ ಬಿಬಿಎಂಪಿ ಭರ್ಜರಿ ಉಡುಗೊರೆ ನೀಡಲಿದೆ. ಹೌದು, ಜನವರಿ 1ರಂದು ಪಾಲಿಕೆಯ 24 ಆಸ್ಪತ್ರೆಗಳಲ್ಲಿ ಜನಿಸುವ ಹೆಣ್ಣು ಮಗುವಿನ ಹೆಸರಿನಲ್ಲಿ ಬಿಬಿಎಂಪಿ ವತಿಯಿಂದ 5 ಲಕ್ಷ ರೂ. ಠೇವಣಿ ಇರಿಸಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕ ಹೇಳಿದ್ದಾರೆ.

ಪಿಂಕ್ ಬೇಬಿ ಹೆಸರಿನಲ್ಲಿ ಕಳೆದ ವರ್ಷ ಈ ಯೋಜನೆ ಜಾರಿ ಮಾಡಲಾಗಿತ್ತು. ಆದರೆ, ಆಗ ವೇಳೆಯ ನಿರ್ಬಂಧವಿತ್ತು. ಈ ಬಾರಿ ಅದನ್ನು ಸಡಿಲಿಸಲಾಗಿದ್ದು, ಜ. 1ರಂದು ಯಾವುದೇ ವೇಳೆಯಲ್ಲಿ ಸಹಜ ಹೆರಿಗೆಯ ಮೂಲಕ ಜನಿಸುವ ಮಗುವಿನ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ ಇರಿಸಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.
 

Trending News