ಮುಷ್ರಫ್, ನವಾಜ್ ಬೇಡ; ಇಮ್ರಾನ್ ಖಾನ್ ಬೇಡ್ವೇ ಬೇಡ…ಮೋದಿ-ಭಾರತ ಸಾಕು: ಪಾಕ್ ಪ್ರಜೆ ಹೇಳಿಕೆ ವೈರಲ್

Pakistani man praise for Indian Prime Minister Narendra Modi: ಸನಾ ಅಮ್ಜದ್ ಎಂಬವರ ಯೂಟ್ಯೂಬ್ ಚಾನೆಲ್‌’ನಲ್ಲಿ ಪಾಕಿಸ್ತಾನಿ ಪ್ರಜೆಯ ಮಾತುಗಳ ಸಖತ್ ವೈರಲ್ ಆಗಿದ್ದು, “ತಮ್ಮ ದೇಶವನ್ನು ಕಾಪಾಡಲು ಮೋದಿಯಂತಹ ನಾಯಕ ಬೇಕು ಎಂದು ಪ್ರಾರ್ಥಿಸುತ್ತೇನೆ. ಅಷ್ಟೇ ಅಲ್ಲದೆ, ಭಾರತದ ಪ್ರಧಾನಿಯೊಂದಿಗಿನ ಸ್ನೇಹವು ನಮ್ಮ ದೇಶದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಭಾರತ ಮತ್ತು ಪಾಕಿಸ್ತಾನದಲ್ಲಿ ವೈರಲ್ ಆಗಿದೆ.

Written by - Bhavishya Shetty | Last Updated : Feb 25, 2023, 11:32 PM IST
    • ದೇಶವನ್ನು ಕಾಪಾಡಲು ಮೋದಿಯಂತಹ ನಾಯಕ ಬೇಕು ಎಂದು ಪ್ರಾರ್ಥಿಸುತ್ತೇನೆ
    • ಭಾರತದ ಪ್ರಧಾನಿಯೊಂದಿಗಿನ ಸ್ನೇಹವು ನಮ್ಮ ದೇಶದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ
    • ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪ್ರಶಂಸಿಸಿರುವುದು ವೈರಲ್ ಆಗಿದೆ
ಮುಷ್ರಫ್, ನವಾಜ್ ಬೇಡ; ಇಮ್ರಾನ್ ಖಾನ್ ಬೇಡ್ವೇ ಬೇಡ…ಮೋದಿ-ಭಾರತ ಸಾಕು: ಪಾಕ್ ಪ್ರಜೆ ಹೇಳಿಕೆ ವೈರಲ್ title=
Pakistan Economic Crisis

ಜನಪ್ರಿಯ ಯೂಟ್ಯೂಬರ್‌’ನೊಂದಿಗಿನ ಸಂವಾದದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪ್ರಶಂಸಿಸಿರುವುದು ಗಡಿಯ ಎರಡೂ ಬದಿಗಳಲ್ಲಿ ವೈರಲ್ ಆಗಿದೆ.

ಸನಾ ಅಮ್ಜದ್ ಎಂಬವರ ಯೂಟ್ಯೂಬ್ ಚಾನೆಲ್‌’ನಲ್ಲಿ ಪಾಕಿಸ್ತಾನಿ ಪ್ರಜೆಯ ಮಾತುಗಳ ಸಖತ್ ವೈರಲ್ ಆಗಿದ್ದು, “ತಮ್ಮ ದೇಶವನ್ನು ಕಾಪಾಡಲು ಮೋದಿಯಂತಹ ನಾಯಕ ಬೇಕು ಎಂದು ಪ್ರಾರ್ಥಿಸುತ್ತೇನೆ. ಅಷ್ಟೇ ಅಲ್ಲದೆ, ಭಾರತದ ಪ್ರಧಾನಿಯೊಂದಿಗಿನ ಸ್ನೇಹವು ನಮ್ಮ ದೇಶದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಭಾರತ ಮತ್ತು ಪಾಕಿಸ್ತಾನದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಇಲ್ಲಿ ಎಸಿ, ಫ್ರಿಡ್ಜ್ ಸೇರಿ ಗೃಹೋಪಯೋಗಿ ವಸ್ತುಗಳೆಲ್ಲಾ Free: ಮಿಸ್ ಮಾಡದೆ ಇಂದೇ ಭೇಟಿ ನೀಡಿ

“ಮೊದಲ ಸಂದರ್ಶನದ ನಂತರ ಕೆಲವರು ನನಗೆ ಪಾಕಿಸ್ತಾನಿಯಾಗಿ ಇಂತಹ ಹೇಳಿಕೆಗಳನ್ನು ಮಾಡಬಾರದಿತ್ತು ಎಂದು ಹೇಳಿದ್ದರು. ಆದರೆ ಮೋದಿಯನ್ನು ಹೊಗಳುವುದರಲ್ಲಿ ತಾನು ಪ್ರಾಮಾಣಿಕನಿದ್ದೇನೆ. ಏಕೆಂದರೆ ಮೋದಿ ಅವರು ತಮ್ಮ ದೇಶವನ್ನು ಸರಿಪಡಿಸಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ” ಎಂದು ಹೇಳಿರುವ ಮಾತುಗಳು ಎಲ್ಲೆಡೆ ವೈರಲ್ ಆಗಿದೆ.

 

“ಭಾರತ ಮತ್ತು ಪಾಕಿಸ್ತಾನವನ್ನು ಮೊದಲು ಹೋಲಿಸಲಾಗುತ್ತಿತ್ತು. ಆದರೆ ಈಗ ಹೋಲಿಕೆ ಇಲ್ಲ. ವಿದೇಶದಲ್ಲಿಯೂ ಭಾರತೀಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ” ಎಂದು ಅವರು ಹೇಳಿದರು.

ಈ ಹೇಳಿಕೆಯ ಜೊತೆಗೆ "ಹಮೆನ್ ಮೋದಿ ಮಿಲ್ ಜಾಯೆ ಬಸ್, ನಾ ನವಾಜ್ ಷರೀಫ್ ಚಾಹಿಯೇ, ನಾ ಇಮ್ರಾನ್, ನಾ ಬೆನಜೀರ್ ಚಾಹಿಯೇ, ಜನರಲ್ ಮುಷರಫ್ ಭೀ ನಹಿ ಚಾಹಿಯೇ" ಎಂದು ಹೇಳಿದ್ದಾರೆ. ಅಂದರೆ, ನಮಗೆ ಮೋದಿ ಮಾತ್ರ ಸಾಕು. ನವಾಜ್ ಷರೀಫ್ ಬೇಡ, ಬೆನಜೀರ್, ಜನರಲ್ ಮುಷರಫ್ ಕೂಡ ಬೇಡ ಎಂದಿದ್ದಾರೆ.

ಇದನ್ನೂ ಓದಿ: IND vs AUS: ರೋಹಿತ್-ದ್ರಾವಿಡ್ ಕೈಯಲ್ಲಿದೆ ಈ ಇಬ್ಬರು ಆಟಗಾರರ ಭವಿಷ್ಯ

ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಆರ್ಥಿಕ ಬಿಕ್ಕಟ್ಟಿನಿಂದ ಆಹಾರಕ್ಕಾಗೂ ಸಹ ಜನರು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News