ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ; ಓರ್ವ ಯೋಧ ಸಾವು

ಮೃತ ಯೋಧನನ್ನು ಲಾನ್ಸ್ ನಾಯಕ್ ಸಪನ್ ಮೆಹ್ರಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

Last Updated : Jan 3, 2019, 05:18 PM IST
ಜಮ್ಮು-ಕಾಶ್ಮೀರದಲ್ಲಿ ಭಾರೀ ಹಿಮಪಾತ; ಓರ್ವ ಯೋಧ ಸಾವು title=
File photo

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ(ಎಲ್ಒಸಿ) ಭಾರೀ ಹಿಮಪಾತ ಸಂಭವಿಸಿದ ಪರಿಣಾಮ ಓರ್ವ ಯೋಧ ಮೃತಪಟ್ಟ ಘಟನೆ ಗುರುವಾರ ನಡೆದಿದೆ. 

ಸಾವ್ಜೈನ್ ಪ್ರದೇಶದಲ್ಲಿರುವ ಸೇನಾ ಪೋಸ್ಟ್ ಬಳಿ ಗುರುವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು, ಹಿಮದಡಿ ಸಿಲುಕಿದ್ದ ಇಬ್ಬರು ಯೋಧರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಓರ್ವ ಯೋಧ ಸಾವನ್ನಪ್ಪಿದ್ದಾರೆ. 

ಮೃತ ಯೋಧನನ್ನು ಲಾನ್ಸ್ ನಾಯಕ್ ಸಪನ್ ಮೆಹ್ರಾ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
 

Trending News