Maha Venkatesh on KGF 2 : ತೆಲುಗು ನಿರ್ದೇಶಕ ಮಹಾ ವೆಂಕಟೇಶ್ ಕೆಜಿಎಫ್ ಕುರಿತು ಹೇಳಿಕೆಗೆ ಕನ್ನಡ, ತೆಲಗು, ತಮಿಳು ಸೇರಿದಂತೆ ಯಶ್ ಪ್ಯಾನ್ಸ್ ಗರಂ ಆಗಿದ್ದಾರೆ. ಅಲ್ಲದೆ, ಮಹಾಗೆ ಕ್ಷಮೇ ಕೇಳುವಂತೆ ಒತ್ತಾಯ ಎರುತ್ತಿದ್ದಾರೆ. ಕ್ಷಮೆ ಕೇಳಿದ್ರೂ ಅಹಂಕಾರ ಬಿಟ್ಟಿಲ್ಲ. ಅಲ್ಲದೆ, ಇದೀಗ ಅಂದಿನ ಕಾರ್ಯಕ್ರಮದಲ್ಲಿ ವೆಂಕಟೇಶ್ ಮಾತಿಗೆ ಕೇಕೆ ಹಾಕಿ ನಕ್ಕಿದ್ದ ನಿರ್ದೇಶಕರೆಲ್ಲರು ಸಾಲು ಸಾಲಾಗಿ ಯಶ್ ಪ್ಯಾನ್ಸ್ ಹಾಗೂ ಕೆಜಿಎಫ್ ಸಿನಿಮಾ ಮೆಚ್ಚಿದ ಸಿನಿರಸಿಕರಿಗೆ ಕ್ಷಮೆ ಕೇಳುತ್ತಿದ್ದಾರೆ.
ಯಶ್ ಪ್ಯಾನ್ ಸೇರಿದಂತೆ ನೆಟ್ಟಿಗರಿಂದ ವ್ಯಾಪಕ ಟೀಕೆ ಕೇಳಿಬಂದ ಹಿನ್ನೆಲೆ ವಿಡಿಯೋ ಮಾಡಿ ವೆಂಕೆಟೇಶ್ ಕ್ಷಮೆ ಕೇಳಿದರು. ಆದ್ರೆ, ಅದರಲ್ಲಿ ಅವರು ತಮ್ಮ ಅಸಭ್ಯ ಮಾತುಗಳಿಗೆ ಮಾತ್ರ ಕ್ಷಮೆ ಕೇಳಿದ್ದರು. ಅಲ್ಲದೆ, ನಾನು ನನ್ನ ಮಾತನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಆದ್ರೆ ನಾನು ಬಳಸಿದ ಪದಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ರಾಕಿ ಭಾಯ್ ʼನೀಚ್__ ಕುತ್ತೆʼ. ಎಂದ ತೆಲುಗು ಡೈರೆಕ್ಟರ್..! ನೊಂದಿಲ್ಲ, ಕ್ಷಮೆನೂ ಕೇಳಿಲ್ಲ
ಇನ್ನು ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ನಿರ್ದೇಶಕರು ಸಹ ಈಗ ಒಬ್ಬೊಬ್ಬರಾಗಿ ಕ್ಷಮೆ ಕೇಳುತ್ತಿದ್ದಾರೆ. ಮೊದಲಿಗೆ ನಂದಿನಿ ರೆಡ್ಡಿ ಕ್ಷಮೆ ಕೇಳಿದ್ದರು, ಇದೀಗ ವಿವೇಕ್ ಆತ್ರೇಯ ಹಾಗೂ ಮೋಹನಕೃಷ್ಣ ಇಂದ್ರಗಂಟಿ ಕೂಡ ಕ್ಷಮೆ ಯಾಚಿಸಿದ್ದಾರೆ. ವಿವೇಕಾತ್ರೇಯ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ನಿನ್ನೆ ನೀವು ನೋಡಿದ ಸಂದರ್ಶನದಲ್ಲಿ ನಿರ್ದೇಶಕ ವೆಂಕಟೇಶ ಮಹಾ ಹೇಳಿದ್ದಕ್ಕೆ ನಾನು ಪ್ರತಿಕ್ರಿಯಿಸಿದ್ದೇನೆ ಅಷ್ಟೇ. ಯಾರ ಕೆಲಸವನ್ನು ಕಡಿಮೆ ಮಾಡುವುದು ನನ್ನ ಉದ್ದೇಶವಲ್ಲ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಪ್ರತಿ ಸಿನಿಮಾದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಮತ್ತು ಪ್ರತಿ ಸಿನಿಮಾದ ಬಗ್ಗೆಯೂ ಪ್ರತಿಯೊಬ್ಬರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ವೆಂಕಟೇಶ ಮಹಾ ಮಾತನಾಡುವ ರೀತಿಯಿಂದ ನಮಗೆ ನಗು ಬಂತು, ಯಾರನ್ನೂ ನಿಂದಿಸುತ್ತಿಲ್ಲ ಎಂದರು. ನಮ್ಮ ಪ್ರತಿಕ್ರಿಯೆಯಿಂದ ಕೆಜಿಎಫ್ 2 ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಯಾರನ್ನೂ ನೋಯಿಸುವುದು ನಮ್ಮ ಉದ್ದೇಶವಲ್ಲ, ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಎಂದು ಅವರು ಬರೆದುಕೊಂಡಿದ್ದಾರೆ. ಆದ್ರೆ ವೆಂಕಟೇಶ್ ಮಹಾ ಮಾತ್ರ ತಮ್ಮ ನಿಲುವು ಬಿಟ್ಟುಕೊಟ್ಟಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.