ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ ! 2,300 ರೂ.ಗಳಷ್ಟು ಅಗ್ಗವಾದ ಚಿನ್ನ !

Gold Price Today : ಇಂದು ಚಿನ್ನವನ್ನು ಖರೀದಿಸುವುದಾದರೆ  2,300 ರೂಪಾಯಿ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ.  ಇಂದು ಮಾರುಕಟ್ಟೆಯಲ್ಲಿ  ಚಿನ್ನದ ಬೆಲೆ ಎಷ್ಟಿದೆ ನೋಡೋಣ.   

Written by - Ranjitha R K | Last Updated : Mar 13, 2023, 12:42 PM IST
  • ಚಿನ್ನ ಖರೀದಿಗೆ ಸೂಕ್ತ ಸಮಯ
  • 2,300 ರೂಪಾಯಿ ಅಗ್ಗದ ಬೆಲೆಗೆ ಚಿನ್ನ ಖರೀದಿ
  • ಇಂದು ಎಷ್ಟಿದೆ ಚಿನ್ನದ ಬೆಲೆ
ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ ! 2,300 ರೂ.ಗಳಷ್ಟು ಅಗ್ಗವಾದ ಚಿನ್ನ !  title=

ಬೆಂಗಳೂರು : ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದು ಚಿನ್ನವನ್ನು ಖರೀದಿಸುವುದಾದರೆ  2,300 ರೂಪಾಯಿ ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ. 

ಚಿನ್ನದ ಬೆಲೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಏರಿಕೆ ಕಂಡು ಬಂದಿದೆ. ಇಂದಿನ ಏರಿಕೆಯ ನಂತರ,  0.65 ರಷ್ಟು  ಹೆಚ್ಚಳದೊಂದಿಗೆ ಪ್ರತಿ 10.ಗ್ರಾಂ ಚಿನ್ನಕ್ಕೆ 56,515 ರೂ. ನಲ್ಲಿ ವಹಿವಾಟು ನಡೆಸುತ್ತಿದೆ. 

ಇದನ್ನೂ ಓದಿ : ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ..?

2300 ರೂ.ಗಿಂತ ಅಗ್ಗದ ಬೆಲೆಯಲ್ಲಿ ಸಿಗುತ್ತಿದೆ  ಬಂಗಾರ :  
IBJA ವೆಬ್‌ಸೈಟ್‌ನ ಪ್ರಕಾರ, 2023ರ ಫೆಬ್ರವರಿ 2ಕ್ಕೆ ಹೋಲಿಸಿದರೆ  ಚಿನ್ನದ ಬೆಲೆ 2300 ರೂ.ಗಿಂತ ಅಗ್ಗವಾಗಿದೆ. ಈ ದಿನ ಚಿನ್ನದ ಬೆಲೆ 10 ಗ್ರಾಂಗೆ 58,882 ರೂ. ಆಗಿತ್ತು. ಆದರೆ, ಇದೀಗ ಚಿನ್ನದ ಬೆಲೆ 10 ಗ್ರಾಂ.ಗೆ 56,515 ರೂ. ಆಗಿದೆ. ಅಂದರೆ ಫೆಬ್ರವರಿ ತಿಂಗಳಕ್ಕೆ ಹೋಲಿಸಿದರೆ ಚಿನ್ನದ ಬೆಲೆ 2,367 ರೂ.ಗಳಷ್ಟು ಅಗ್ಗವಾದಂತಾಗಿದೆ.  

ಬೆಳ್ಳಿ ಬೆಲೆ ಕೂಡಾ ಏರಿಕೆ : 
ಇದಲ್ಲದೇ ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಇಂದು ಬೆಳ್ಳಿ ಬೆಲೆಯಲ್ಲಿ ಶೇ.1.03ರಷ್ಟು ಏರಿಕೆಯಾಗಿದೆ. ಈ ಏರಿಕೆಯ ನಂತರ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 63535 ರೂ.ಗೆ ತಲುಪಿದೆ.  

ಇದನ್ನೂ ಓದಿ : 7th Pay Commission : ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ! 

ನಿಮ್ಮ ನಗರದ ಬೆಲೆಯನ್ನು ಪರಿಶೀಲಿಸಿ :
ಮನೆಯಲ್ಲಿಯೇ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News