ಸಿದ್ದು-ಡಿಕೆಶಿ ಸಮಕ್ಷಮದಲ್ಲಿ ನಡೆಯುವ ಪಂದ್ಯದಲ್ಲಿ ಕೈ ಮುರಿದು ಗೆದ್ದವರಿಗೆ ಟಿಕೆಟ್: ಬಿಜೆಪಿ

#CongVsSidduVsDKS ಹ್ಯಾಶ್‍ಟ್ಯಾಗ್‍ ಬಳಸಿ ಗುರುವಾರ ಟ್ವೀಟ್ ಮಾಡಿರುವ BJP ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

Written by - Puttaraj K Alur | Last Updated : Mar 16, 2023, 07:13 PM IST
  • ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಬಲು ಸುಲಭವಾಗಿದೆ
  • ಮೊದಲು 2 ಲಕ್ಷ ರೂ. ಎಂಟ್ರಿ ಫೀ, ನಂತರ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿಯ ಜೊತೆಗೇ ಮುಷ್ಠಿ ಕಾಳಗ
  • ಖರ್ಗೆ ಅನುಪಸ್ಥಿತಿಯಲ್ಲಿ ಸಿದ್ದು-ಡಿಕೆಶಿ ಸಮಕ್ಷಮದಲ್ಲಿ ನಡೆಯುವ ಪಂದ್ಯದಲ್ಲಿ ಕೈ ಮುರಿದು ಗೆದ್ದವರಿಗೆ ಟಿಕೆಟ್
ಸಿದ್ದು-ಡಿಕೆಶಿ ಸಮಕ್ಷಮದಲ್ಲಿ ನಡೆಯುವ ಪಂದ್ಯದಲ್ಲಿ ಕೈ ಮುರಿದು ಗೆದ್ದವರಿಗೆ ಟಿಕೆಟ್: ಬಿಜೆಪಿ title=
CongVsSidduVsDKS

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ ಹಂಚಿಕೆ ಬಲು ಸುಲಭ. ಮೊದಲು 2 ಲಕ್ಷ ರೂ. ಎಂಟ್ರಿ ಫೀ, ಆನಂತರ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿಯ ಜೊತೆಗೇ ಮುಷ್ಠಿ ಕಾಳಗ. ಎಐಸಿಸಿ ಅಧ‍್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅನುಪಸ್ಥಿತಿಯಲ್ಲಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ‍್ಯಕ್ಷ ಡಿ.ಕೆ.ಶಿವಕುಮಾರ್ ಸಮಕ್ಷಮದಲ್ಲಿ ನಡೆಯುವ ಪಂದ್ಯದಲ್ಲಿ ಕೈ ಮುರಿದು ಗೆದ್ದವರಿಗೆ ಟಿಕೆಟ್’ ಎಂದು ಬಿಜೆಪಿ ಟೀಕಿಸಿದೆ.

#CongVsSidduVsDKS ಹ್ಯಾಶ್‍ಟ್ಯಾಗ್‍ ಬಳಸಿ ಗುರುವಾರ ಟ್ವೀಟ್ ಮಾಡಿರುವ ಬಿಜೆಪಿ, ಟಿಕೆಟ್ ಹಂಚಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ‘ನಾಯಿ-ಬೆಕ್ಕು, ಹಾವು-ಮುಂಗುಸಿ, ಚಿರತೆ-ನಾಯಿಗಳಾದರೂ ತರಬೇತಿ ನೀಡಿದ್ದರೆ ಒಂದಕ್ಕೊಂದು ಹೊಂದಿಕೊಂಡು ಹೋಗುತ್ತವೆ. ಆದರೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರದ್ದು ಸದಾ ಕಾಲ ಬಣ ಬಡಿದಾಟ. ರಾಜ್ಯದಲ್ಲಿ ಕಾಂಗ್ರೆಸ್ ಅಮೋಘ ಪ್ರದರ್ಶನ. ಬೈದಾಟ, ಕಿರುಚಾಟ, ಕಚ್ಚಾಟಗಳ ಮೇಲ್ಪಂಕ್ತಿ, ಇದೀಗ ಬೆಳಗಾವಿಯಲ್ಲಿ’ ಎಂದು ಟೀಕಿಸಿದೆ.

ಇದನ್ನೂ ಓದಿ: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!

‘ನಿನ್ನೆಯಷ್ಟೇ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಮೇಲೆ ರೌಡಿ ಪ್ರವೃತ್ತಿ ತೋರಿದ್ದರು. ಈಗ ಅವರ ಹಾದಿಯಲ್ಲೇ ಜಮಖಂಡಿ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಪೊಲೀಸರ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯ ರೌಡಿಗಳ ಅಡ್ಡವಾಗಲಿದೆ’ ಎಂದು ಬಿಜೆಪಿ ಕುಟುಕಿದೆ.

‘ಕಾಂಗ್ರೆಸ್ ಕರಾಳ ಫ್ಲಾಶ್ ಬ್ಯಾಕ್! ಸಿದ್ದರಾಮಯ್ಯನವರು ಅಂದು ಮುಖ್ಯಮಂತ್ರಿಯಾಗಿದ್ದಾಗ ರೈತರನ್ನು ಹತ್ತಿಕ್ಕಿ, ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದ್ದರು. ಮಹಾದಾಯಿಗಾಗಿ ಆಗ್ರಹಿಸಿದ ರೈತರ ಮೇಲೆ ಲಾಠಿ ಚಾರ್ಜ್‌ ಮಾಡಿಸಿದರು. ಅಂದು ಕಾಂಗ್ರೆಸ್ ಅನ್ನದಾತನ ದಮನಕ್ಕಿಳಿದಿದ್ದು ದುರಂತ ! ಆ ದಿನಗಳು ಮರುಕಳಿಸದಿರಲಿ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಇದನ್ನೂ ಓದಿ: ‘ಹರ್ ಘರ್ ಗಂಗಾ’ ಯೋಜನೆಗೆ ಬಜೆಟ್’ನಲ್ಲಿ 12 ಸಾವಿರ ಕೋಟಿ ರೂ.ಮೀಸಲಿಟ್ಟಿದ್ದೇವೆ: ಸಿಎಂ ಬೊಮ್ಮಾಯಿ

ಪ್ರಜಾದ್ರೋಹ ಯಾತ್ರೆಯ ಮೂಲಕ ಕಾಂಗ್ರೆಸ್ ಆಂತರಿಕ ಯುದ್ಧವನ್ನು ಉತ್ತುಂಗಕ್ಕೇರಿಸಿದೆ. ಒಂದಾದ ಮೇಲೊಂದು ಕ್ಷೇತ್ರದಲ್ಲಿ ಭಿನ್ನಮತದಿಂದ ಯಾತ್ರೆ ರದ್ದಾಗುತ್ತಿದೆ. ಕುಂದಗೋಳ ಇನ್ನೊಂದು ಸೇರ್ಪಡೆಯಷ್ಟೇ. ಆಂತರಿಕ ಪ್ರಜಾಪ್ರಭುತ್ವ ಇಲ್ಲದ ಪಕ್ಷದಲ್ಲಿ ಬೇಡಿಕೆ ಈಡೇರಿಕೆಗೆ ಬಡಿದಾಟವೊಂದೇ ಅಸ್ತ್ರ!!’ವೆಂದು ಬಿಜೆಪಿ ಟೀಕಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News