ನವದೆಹಲಿ: 80 ಸಾವಿರ ಪೊಲೀಸರಿದ್ದರೂ ಅಮೃತಪಾಲ್ ಸಿಂಗ್ ಪರಾರಿಯಾಗಲು ಹೇಗೆ ಸಾಧ್ಯವಾಯಿತು ಎಂದು ಪಂಜಾಬ್ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಮೃತಪಾಲ್ ಸಿಂಗ್ ಹೊರತುಪಡಿಸಿ ಎಲ್ಲರನ್ನೂ ಹೇಗೆ ಬಂಧಿಸಲಾಯಿತು ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಂಗಳವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಆತ ತಪ್ಪಿಸಿಕೊಂಡಿದ್ದರೆ ಅದು ಗುಪ್ತಚರ ವೈಫಲ್ಯವೆಂದು ಕೋರ್ಟ್ ಹೇಳಿದೆ. ವಾರಿಸ್ ಪಂಜಾಬ್ನ ಕಾನೂನು ಸಲಹೆಗಾರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದುವರಿಸಿದೆ. ಇದರಲ್ಲಿ ಪರಾರಿಯಾಗಿರುವ ಸ್ವಯಂ-ಘೋಷಿತ ಸಿಖ್ ಬೋಧಕನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆರೋಪಿಗಳಿಗೆ ನಿರ್ದೇಶಿಸುವಂತೆ ನ್ಯಾಯಾಲಯಕ್ಕೆ ಕೋರಲಾಯಿತು.
ಅಮೃತಪಾಲ್ ಸಿಂಗ್ ಹೇಗೆ ತಪ್ಪಿಸಿಕೊಂಡ ಎಂದು ಅಡ್ವೊಕೇಟ್ ಜನರಲ್ ವಿನೋದ್ ಘಾಯ್ಗೆ ನ್ಯಾಯಮೂರ್ತಿ ಎನ್.ಎಸ್.ಶೇಖಾವತ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದರು. ಅಮೃತಪಾಲ್ ಸಿಂಗ್ ಹೊರತುಪಡಿಸಿ ಎಲ್ಲರನ್ನೂ ಹೇಗೆ ಬಂಧಿಸಲಾಗಿದೆ ಎಂದು ಪೀಠ ಪ್ರಶ್ನಿಸಿದೆ. ನಿಮ್ಮ ಬಳಿ 80 ಸಾವಿರ ಪೊಲೀಸರಿದ್ದಾರೆ ಎಂದು ಪೀಠ ಹೇಳಿದೆ. ಅವರನ್ನು ಹೇಗೆ ಬಂಧಿಸಲಿಲ್ಲ? ಅವರು ಬದುಕುಳಿದರೆ, ಅದು ಗುಪ್ತಚರ ವೈಫಲ್ಯವೆಂದು ಹೇಳಿದರು.
ಇದನ್ನೂ ಓದಿ: Indian Railways: ರೋಜಗಾರ್ ಮೇಳದಲ್ಲಿ 50 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ
ಈ ಪ್ರಕರಣದಲ್ಲಿ ವಕೀಲ ತನು ಬೇಡಿ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿದ ಹೈಕೋರ್ಟ್, ವಿಚಾರಣೆಯನ್ನು 4 ದಿನಗಳ ಕಾಲ ಮುಂದೂಡಿದೆ. ನ್ಯಾಯಾಲಯ ಸರ್ಕಾರದಿಂದ ವರದಿಯನ್ನೂ ಕೇಳಿದೆ. ಅಮೃತಪಾಲ್ ಸಿಂಗ್ ವಿರುದ್ಧ ಎನ್ಎಸ್ಎ ಅರ್ಜಿ ಸಲ್ಲಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಅಮೃತಪಾಲ್ ಸಿಂಗ್ ನಿರಂತರವಾಗಿ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಂಗಳವಾರ ಇದರ ತನಿಖೆಯನ್ನು ವಹಿಸಿಕೊಳ್ಳಬಹುದೆಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಎನ್ಐಎ ತಂಡವು ಪಂಜಾಬ್ ತಲುಪಿದ್ದು, ಪಂಜಾಬ್ ಪೊಲೀಸ್ನ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ.
ಈ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಪ್ರಕರಣಕ್ಕೆ ಸಂಬಂಧಿಸಿದ ವಿವರಗಳು ಮತ್ತು ದಾಖಲೆಗಳನ್ನು ಎನ್ಐಎ ಹುಡುಕುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಹಲವಾರು ಏಜೆನ್ಸಿಗಳು ಈ ವಿಷಯವನ್ನು ಪರಿಶೀಲಿಸುತ್ತಿವೆ. ಪಾಕಿಸ್ತಾನದ ಐಎಸ್ಐ ಜೊತೆಗಿನ ಭಯೋತ್ಪಾದಕ ನಂಟಿರುವ ಕಾರಣ ಪ್ರಕರಣ ವರ್ಗಾಯಿಸಲು ಗೃಹ ಸಚಿವಾಲಯ ನಿರ್ಧರಿಸಬಹುದು. ಸದ್ಯ ಅಮೃತಪಾಲ್ ತಲೆಮರೆಸಿಕೊಂಡಿದ್ದು, ವಿದೇಶಕ್ಕೆ ಪರಾರಿಯಾಗಿರಬಹುದು ಎಂದು ಹೇಳಲಾಗುತ್ತಿದೆ. 4ನೇ ದಿನವಾದರೂ ಆತನ ಬಗ್ಗೆ ಯಾವುದೇ ಕುರುಹು ದೊರೆತಿಲ್ಲ.
ಇದನ್ನೂ ಓದಿ: ದೆಹಲಿ ತಲುಪಿದ ಲಕ್ಷಾಂತರ ರೈತರು! ರಾಮಲೀಲಾ ಮೈದಾನದಲ್ಲಿ ಇಂದು 'ಮಹಾಪಂಚಾಯತ್'
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.