Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ

Mother-Son Emotional Video: ಕಣ್ಣು ತೆರೆಯುವ ಮುನ್ನವೇ ತಾಯಿಯನ್ನು ಕಳೆದುಕೊಂಡ ಅದೆಷ್ಟೋ ಜೀವಗಳು ನಮ್ಮೆಲ್ಲರ ನಡುವೆಯೇ ಬದುಕುತ್ತಿರುತ್ತಾರೆ. ಅವರೆಲ್ಲವರೂ ಅಮ್ಮನ ಮಮತೆಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ತಾಯಿಯ ಮಮತೆಗೆ ಬೆಲೆಕೊಡದೆ, ಅವರನ್ನು ಆಶ್ರಮಗಳಲ್ಲಿಯೋ, ಬೀದಿ ಬದಿಯಲ್ಲಿಯೇ ಬಿಟ್ಟು ಕರುಣೆ ಇಲ್ಲದ ಕಟುಕರಂತೆ ಬಿಟ್ಟುಹೋಗುತ್ತಾರೆ.

Written by - Bhavishya Shetty | Last Updated : Mar 24, 2023, 07:34 PM IST
    • ತಾಯಿಗಿಂತ ಮೀರಿದ ಬಂಧುವಿಲ್ಲ ಅನ್ನೋದು ಸೂರ್ಯ ಚಂದ್ರ ಇರುವಷ್ಟು ಸತ್ಯ.
    • ತನ್ನ ಕಂದನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಕರುಣಾಮಯಿ ಆಕೆ.
    • ಇಂದು ನಾವು ತಾಯಿ ಮಗ ಸಂಬಂಧದ ಒಂದು ವಿಡಿಯೋ ನಿಮಗೆ ತೋರಿಸಲಿದ್ದೇವೆ.
Emotional Video: ಮರೆಯಾದ ಮಮತೆಗೆ ಹಂಬಲ! ಅಮ್ಮನ ಸಮಾಧಿ ಮುಂದೆ ಕಂದನ ಸ್ವಗತ; ಕಟುಕನ ಮನವೂ ಕರಗುವ ವಿಡಿಯೋ title=
Mother Son Video

Mother-Son Emotional Video: ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಒಂದಿಷ್ಟು ಹೊಟ್ಟೆ ಹುಣ್ಣಾಗುವಂತೆ ನಗು ತರಿಸಿದರೆ, ಮತ್ತೊಂದಿಷ್ಟು ವಾಸ್ತವತೆಗೆ ಪ್ರತಿಬಿಂಬದಂತಿರುವ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲದಕ್ಕೂ ಮೀರಿ ಮನಸ್ಸನ್ನು ಕಾಡುವ ದೃಶ್ಯಗಳು ಕೂಡ ವೈರಲ್ ಆಗುತ್ತವೆ. ಇಂದು ನಾವು ಹೇಳ ಹೊರಟಿರೋದು ಅಂತಹ ಒಂದು ವಿಡಿಯೋ ಬಗ್ಗೆ.

ಇದನ್ನೂ ಓದಿ: ಕಾಂಗ್ರೆಸ್‌ ನಾಯಕ ʼರಾಹುಲ್ ಗಾಂಧಿ ಬಿಜೆಪಿಯ ಬ್ರಾಂಡ್ ಅಂಬಾಸಿಡರ್ʼ..! 

ತಾಯಿಗಿಂತ ಮೀರಿದ ಬಂಧುವಿಲ್ಲ ಅನ್ನೋದು ಸೂರ್ಯ ಚಂದ್ರ ಇರುವಷ್ಟು ಸತ್ಯ. ತನ್ನ ಕಂದನಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಕರುಣಾಮಯಿ ಆಕೆ. ಇಂದು ನಾವು ತಾಯಿ ಮಗ ಸಂಬಂಧದ ಒಂದು ವಿಡಿಯೋ ನಿಮಗೆ ತೋರಿಸಲಿದ್ದೇವೆ.

ಜಗತ್ತಿನಲ್ಲಿ ಯಾರಿರಲಿ, ಇಲ್ಲದಿರಲಿ. ತಾಯಿಯೇ ಕಂದನ ಮೊದಲ ಗುರು… ಆಕೆಯ ಪ್ರೀತಿ, ಆಶೀರ್ವಾದ, ಪ್ರೋತ್ಸಾಹವೇ ಕಂದನಿಗೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ತುಂಬಿಸೋದು. ಅನೇಕರಿಗೆ ಆ ಪ್ರೀತಿಯೂ ಸಿಗುವುದಿಲ್ಲ. ಕಣ್ಣು ತೆರೆಯುವ ಮುನ್ನವೇ ತಾಯಿಯನ್ನು ಕಳೆದುಕೊಂಡ ಅದೆಷ್ಟೋ ಜೀವಗಳು ನಮ್ಮೆಲ್ಲರ ನಡುವೆಯೇ ಬದುಕುತ್ತಿರುತ್ತಾರೆ. ಅವರೆಲ್ಲವರೂ ಅಮ್ಮನ ಮಮತೆಗಾಗಿ ಹಾತೊರೆಯುತ್ತಿರುತ್ತಾರೆ. ಆದರೆ ಇನ್ನೂ ಕೆಲವರು ತಾಯಿಯ ಮಮತೆಗೆ ಬೆಲೆಕೊಡದೆ, ಅವರನ್ನು ಆಶ್ರಮಗಳಲ್ಲಿಯೋ, ಬೀದಿ ಬದಿಯಲ್ಲಿಯೇ ಬಿಟ್ಟು ಕರುಣೆ ಇಲ್ಲದ ಕಟುಕರಂತೆ ಬಿಟ್ಟುಹೋಗುತ್ತಾರೆ.

ಇಂದು ನಾವು ಹೇಳಹೊರಟಿರುವ ವಿಡಿಯೋ ವಿಶ್ಲೇಷಣೆ ಎಂಥವರ ಮನವನ್ನೂ ಕಲುಕದಿರದು. ಒಂದು ಬಾರಿ ಆ ವಿಡಿಯೋ ನೋಡಿ.

https://www.facebook.com/reel/577863087145952

ಇದನ್ನೂ ಓದಿ: ರಾಹುಲ್ ಗಾಂಧಿಗೆ ಎಂ.ಕೆ ಸ್ಟಾಲಿನ್, ಉದ್ಧವ್ ಠಾಕ್ರೆ ಬೆಂಬಲ

ಇಲ್ಲಿ ಬಾಲಕನೊಬ್ಬ ತನ್ನ ತಾಯಿಯ ಸಮಾಧಿ ಬಳಿ ಬಂದು ಶಾಲೆಯಲ್ಲಿ ನಡೆದಿರುವ ಎಲ್ಲಾ ವಿಚಾರಗಳನ್ನು ಅಮ್ಮನ ಬಳಿ ಹೇಳುತ್ತಿರುವಂತೆ ಕಾಣುತ್ತದೆ. ಸಮಾಧಿ ಮುಂದೆ ಕುಳಿತುಕೊಂಡು ಒಂದಿಷ್ಟು ಹೊತ್ತು ಮಾತನಾಡಿ, ಬಳಿಕ ಆತನ ಬ್ಯಾಗ್’ನಿಂದ ಪುಸ್ತಕ ತೆಗೆದು ಆಕೆಗೆ ತೋರಿಸುತ್ತಿದ್ದಾನೆ, ಅಲ್ಲೇ ಕಣ್ಣೀರು ಒರೆಸುತ್ತಾ ಆ ಸಮಾಧಿಯ ಬಳಿಯೇ ಬಾಲಕ ಮಲಗುತ್ತಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ್ರೆ ಎಂಥಾ ಕಟುಕನ ಮನವೂ ಕರಗಿ ನೀರಾಗುವುದು ಖಂಡಿತ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News