ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ ಮಾರುತಿ ಕಂಪನಿಯ ಈ ಜನಪ್ರಿಯ ಕಾರು, ವೈಶಿಷ್ಟ್ಯ-ಬೆಲೆ ವಿವರ ಇಲ್ಲಿದೆ!

Maruti Swift 2023: ಮಾರುತಿ ಸುಜುಕಿ ಕಂಪನಿಯ ಸ್ವಿಫ್ಟ್ ಖರೀದಿಸಲು ಬಯಸುವವರಿಗೆ ಮಾರುಕಟ್ಟೆಯಲ್ಲಿ ಹೊಸ ಆಯ್ಕೆ ಬಂದಿದೆ. ದಕ್ಷಿಣ ಕೊರಿಯಾದ ವಾಹನ ತಯಾರಕ ಸುಜುಕಿ ಬ್ಯಾಂಕಾಕ್ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ (BIMS) ಸ್ವಿಫ್ಟ್ ನ ಮೊಕ್ಕಾ ಕ್ಯಾಫೆ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಇದೊಂದು ಲಿಮಿಟೆಡ್ ಎಡಿಷನ್ ಮಾದರಿಯಾಗಿದೆ.  

Written by - Nitin Tabib | Last Updated : Mar 26, 2023, 03:57 PM IST
  • ಸುಜುಕಿ ಬ್ಯಾಂಕಾಕ್ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ (BIMS) ಸ್ವಿಫ್ಟ್ ಕಾರಿನ ಮೊಕ್ಕಾ ಕ್ಯಾಫೆ ಎಡಿಷನ್ ಬಿಡುಗಡೆ ಮಾಡಿದೆ.
  • ಇದು ಸೀಮಿತ ಆವೃತ್ತಿಯ ಮಾದರಿಯಾಗಿದ್ದು,
  • ಇದು ಥೈಲ್ಯಾಂಡ್‌ನಲ್ಲಿ ಮಾತ್ರ ಲಭ್ಯವಿರುತ್ತದೆ.
ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ ಮಾರುತಿ ಕಂಪನಿಯ ಈ ಜನಪ್ರಿಯ ಕಾರು, ವೈಶಿಷ್ಟ್ಯ-ಬೆಲೆ ವಿವರ ಇಲ್ಲಿದೆ! title=
ಮಾರುತಿ ಸ್ವಿಫ್ಟ್ ಮೊಕ್ಕಾ ಕ್ಯಾಫೆ ಎಡಿಷನ್!

Suzuki Swift Mocca Cafe Edition: ಮಾರುತಿ ಸುಜುಕಿ ಸ್ವಿಫ್ಟ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಹ್ಯಾಚ್‌ಬ್ಯಾಕ್ ಕಾರಾಗಿರೋ ವಿಷಯ ನಿಮ್ಮೆಲ್ಲರಿಗೂ ತಿಳಿದೇ ಇದೆ. ಇದರ ಹೊಸ ಅವತಾರಕ್ಕಾಗಿ ಜನರು ಕಳೆದ ದೀರ್ಘ ಕಾಲದಿಂದ ನಿರೀಕ್ಷೆಯಲ್ಲಿದ್ದಾರೆ. ದಕ್ಷಿಣ ಕೊರಿಯಾದ ವಾಹನ ತಯಾರಕ ಸುಜುಕಿ ಬ್ಯಾಂಕಾಕ್ ಇಂಟರ್ನ್ಯಾಷನಲ್ ಮೋಟಾರ್ ಶೋನಲ್ಲಿ (BIMS) ಸ್ವಿಫ್ಟ್ ಕಾರಿನ ಮೊಕ್ಕಾ ಕ್ಯಾಫೆ ಎಡಿಷನ್ ಬಿಡುಗಡೆ ಮಾಡಿದೆ. ಇದು ಸೀಮಿತ ಆವೃತ್ತಿಯ ಮಾದರಿಯಾಗಿದ್ದು, ಇದು ಥೈಲ್ಯಾಂಡ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಸ್ವಿಫ್ಟ್ ಮೊಕ್ಕಾ ಕೆಫೆ ಆವೃತ್ತಿಯ ಬೆಲೆ 637,000 ಬಹ್ಟ್ ಆಗಿದೆ, ಭಾರತದಲ್ಲಿ ಇದು ರೂ 15.36 ಲಕ್ಷಕ್ಕೆ ಸಮಾನವಾಗಿದೆ. ಇದು ಸಾಮಾನ್ಯ ಸ್ವಿಫ್ಟ್‌ಗಿಂತ ದುಬಾರಿಯಾಗಿದೆ, ಆದರೆ ವೈಶಿಷ್ಟ್ಯಗಳ ವಿಷಯದಲ್ಲಿ ಇದರ ಮುಂದೆ ದೊಡ್ಡ ದೊಡ್ಡ ಕಾರುಗಳೆ ಫೇಲಾಗುತ್ತವೆ. ಮಾರುತಿ ಸುಜುಕಿ ಸ್ವಿಫ್ಟ್ 2005 ರಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ಹಲವಾರು ಬಾರಿ ನವೀಕರಿಸಲಾಗಿದೆ. ಪ್ರಸ್ತುತ, ಕಾರಿನ ಬೆಲೆ 6-9 ಲಕ್ಷ ರೂ (ಎಕ್ಸ್ ಶೋ ರೂಂ) ಆಗಿದೆ.

ವಿನ್ಯಾಸ ಬದಲಾವಣೆಗಳಿಗೆ ಬರುವುದಾದರೆ, ಸ್ವಿಫ್ಟ್ ಮೊಕ್ಕಾ ಕೆಫೆ ಆವೃತ್ತಿಯು ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ. ಇದರಲ್ಲಿ ಹೆಚ್ಚು ಡ್ಯಾಷಿಂಗ್ ಮತ್ತು ಸ್ಪೋರ್ಟಿ ಲುಕ್ ಇದಕ್ಕೆ ನೀಡಲಾಗಿದೆ. ಇವುಗಳಲ್ಲಿ ಡ್ಯಾಷಿಂಗ್  ಫ್ರಂಟ್ ಲಿಪ್ ಸ್ಪಾಯ್ಲರ್, ಫಾಗ್ ಲೈಟ್‌ಗಳ ಮೇಲಿರುವ LED DRL ಗಳು ಮತ್ತು ಮುಂಭಾಗದ ಸ್ಪಾಯ್ಲರ್‌ನಿಂದ ಅದರ ವೀಲ್ ಆರ್ಚ್‌ಗಳು ಮತ್ತು ಹಿಂಭಾಗದ ಬಂಪರ್‌ಗೆ ವಿಸ್ತರಿಸುವ ಬಾಡಿ ಕ್ಲಾಡಿಂಗ್ ಶಾಮೀಲಾಗಿವೆ. ಹಿಂಭಾಗದಲ್ಲಿ ಟ್ವಿನ್ ಫಾಕ್ಸ್ ಎಕ್ಸಾಸ್ಟ್ ಟಿಪ್ಸ್ ಇವೆ. ಕಾರು 17-ಇಂಚಿನ ಆಪ್ಟರ್ ಮಾರ್ಕೆಟ್ ಆಲಾಯ್ ವ್ಹೀಲ್ ಗಳನ್ನು ಹೊಂದಿದೆ. 

ಇದನ್ನೂ ಓದಿ-Record Selling Scooter: ಮಾರಾಟದ ವಿಷಯದಲ್ಲಿ ದಾಖಲೆಗಳನ್ನು ಪುಡಿಪುಡಿ ಮಾಡಿದೆ ಈ ಕಂಪನಿಯ ಸ್ಕೂಟರ್!

ಸ್ವಿಫ್ಟ್ ಮೊಕ್ಕಾ ಕೆಫೆ ಆವೃತ್ತಿಯು ಹೊಸ ಡ್ಯುಯಲ್-ಟೋನ್ ಬಣ್ಣದ ಸಯೋಜನೆಯಿಂದಿಗೆ ಶೋಗೆ ಎಂಟ್ರಿ ನೀಡಿದೆ. ಕಾರಿನ ಕೆಳಗಿನ ಭಾಗವು ವಾರ್ಮ್ ಪೆಸ್ಟಲ್ ಬ್ರೌನ್ ಕಲರ್ ಮತ್ತು ಅದರ ಛಾವಣಿ ಮತ್ತು ORVM ಗಳಲ್ಲಿ ಬಲವಾದ ಬೀಜ್ ಬಣ್ಣವನ್ನು ಪಡೆದುಕೊಂಡಿದೆ. ಒಳಾಂಗಣವು ಡ್ಯಾಶ್‌ಬೋರ್ಡ್ ಮತ್ತು ಡೋರ್ ಎಲಿಮೆಂಟ್‌ಗಳಲ್ಲಿ ಪೆಸ್ಟಲ್ ಬ್ರೌನ್ ಮತ್ತು ಬೀಜ್ ಮತ್ತು ಬ್ರೌನ್ ನಪ್ಪಾ ಲೆದರ್ ಸೀಟ್ ಅಪ್ಹೋಲ್‌ಸ್ಟರಿಯನ್ನು ಪಡೆಯುತ್ತದೆ. ಇದು 10-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದ್ದು ಅದು ಆಂಡ್ರಾಯ್ಡ್ ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಒಳಾಂಗಣಕ್ಕೆ ಹೊಂದಿಕೆಯಾಗುತ್ತದೆ.

ಇದನ್ನೂ ಓದಿ-ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!

ಥೈಲ್ಯಾಂಡ್‌ನಲ್ಲಿ ಪರಿಚಯಿಸಲಾದ ಮಾದರಿಯು 1.2L ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ, ಇದು 83 PS ಪವರ್ ಮತ್ತು 108 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ E20 ಇಂಧನದಿಂದ ಚಲಿಸುತ್ತದೆ (ಎಥೆನಾಲ್ 20% ಮಿಶ್ರಣ). ಇದು ಸ್ವಿಫ್ಟ್ ಶ್ರೇಣಿಯಲ್ಲಿ ಹೆಚ್ಚು ಪರಿಸರ ಸ್ನೇಹಿ ಆಯ್ಕೆಗಳಲ್ಲಿ ಒಂದಾಗಿದೆ, ಈ ಕಾರನ್ನು  ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಇಂಧನ ದಕ್ಷತೆಯನ್ನು ಸುಧಾರಿಸಲು ಅಭಿವೃದ್ಧಿಪಡಿಸಲಾಗಿದೆ. ವಿಶ್ವಾಸಾರ್ಹ ಮತ್ತು ಸ್ಪೋರ್ಟಿ ಆಯ್ಕೆಯನ್ನು ಹುಡುಕುತ್ತಿರುವ ಖರೀದಿದಾರರನ್ನು ಗುರಿಯಾಗಿಸಿ ಈ ಕಾರನ್ನು ಸಿದ್ಧಪಡಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News