ದಿಢೀರ್ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ ಕೊಳ್ಳುವವರಿಗೆ ಸುವರ್ಣ ಕಾಲ

Gold price today : ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 341 ರೂ. ಇಳಿಕೆ ಕಂಡು 60, 515 ರೂ.ವರೆಗೆ ತಲುಪಿದೆ. ಮತ್ತು ಬೆಳ್ಳಿ ಪ್ರತಿ ಕೆಜಿಗೆ 74,554 ರೂ.ಯಲ್ಲಿ ವಹಿವಾಟು ನಡೆಸಿದೆ.  

Written by - Ranjitha R K | Last Updated : Apr 7, 2023, 12:47 PM IST
  • ಚಿನ್ನದ ಬೆಲೆ ಬುಧವಾರದಂದು ಭಾರೀ ಏರಿಕೆ
  • ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ.
  • ಇಂದು ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ದಿಢೀರ್ ಇಳಿಕೆ ಕಂಡ ಚಿನ್ನದ ಬೆಲೆ ! ಬಂಗಾರ ಕೊಳ್ಳುವವರಿಗೆ ಸುವರ್ಣ ಕಾಲ  title=

Gold price today : ಚಿನ್ನದ ಬೆಲೆ ಬುಧವಾರದಂದು ಭಾರೀ ಏರಿಕೆ ಕಂಡು ದಾಖಲೆಯ ಮಟ್ಟ ತಲುಪಿತ್ತು. ಈ ದಿನ ಚಿನ್ನದ ಬೆಲೆ 10 ಗ್ರಾಂಗೆ 61,000 ರೂಪಾಯಿ ದಾಟಿತ್ತು. ಆದರೆ ನಂತರ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಇಂದು ಕೂಡಾ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ.  ಶುಕ್ರವಾರ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಬಂಗಾರದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. 

ಬುಧವಾರದ ಏರಿಕೆಯ ನಂತರ ಬೆಲೆಯಲ್ಲಿ ಕುಸಿತ : 
ಫೆಬ್ರವರಿಯಲ್ಲಿಯೂ ಚಿನ್ನವು ಹಿಂದಿನ ಎಲ್ಲಾ ದಾಖಲೆಯನ್ನು ಮುರಿದಿತ್ತು. ನಂತರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ.  2023 ರ ದೀಪಾವಳಿ ಹೊತ್ತಿನಲ್ಲಿ ಎರಡೂ ಅಮೂಲ್ಯವಾದ ಲೋಹಗಳು ಹೊಸ ದಾಖಲೆಯನ್ನು ಸೃಷ್ಟಿಸುತ್ತವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಈ ಸಮಯದಲ್ಲಿ ಚಿನ್ನವು  65,000 ರೂಪಾಯಿ ಮತ್ತು ಬೆಳ್ಳಿ 80,000 ರೂಪಾಯಿಗೆ ತಲುಪಬಹುದು ಎನ್ನಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿ 10 ಗ್ರಾಂ ಚಿನ್ನಕ್ಕೆ 341 ರೂ. ಇಳಿಕೆ ಕಂಡು 60, 515 ರೂ.ವರೆಗೆ ತಲುಪಿದೆ. ಮತ್ತು ಬೆಳ್ಳಿ ಪ್ರತಿ ಕೆಜಿಗೆ 74,554 ರೂ.ಯಲ್ಲಿ ವಹಿವಾಟು ನಡೆಸಿದೆ.

ಇದನ್ನೂ ಓದಿ : ಪಡಿತರ ಚೀಟಿದಾರರಿಗೆ ಹೊಸ ಸೌಲಭ್ಯ ಆರಂಭಿಸಿದ ಸರ್ಕಾರ ! 2024 ರವರೆಗೆ ಸಿಗಲಿದೆ ಈ ಪ್ರಯೋಜನ

mcx ನಲ್ಲಿ ಇಂದಿನ ದರ :
ಗುರುವಾರದಂದು, ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ 60,856 ರೂ ಮತ್ತು ಬೆಳ್ಳಿ 10 ಗ್ರಾಂಗೆ 74555 ರೂ. ಆಗಿತ್ತು. ಬುಧವಾರದ ಗರಿಷ್ಠ ದಾಖಲೆಯ ನಂತರ ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಕುಸಿತ ಕಾಣುತ್ತಿದೆ. ವಹಿವಾಟಿನ ಅಂತ್ಯದ ವೇಳೆಗೆ, 24-ಕ್ಯಾರೆಟ್ ಚಿನ್ನ 10 ಗ್ರಾಂಗೆ 60,623 ರೂ.ಗೆ ತಲುಪಿದೆ ಮತ್ತು ಬೆಳ್ಳಿ ಕೆಜಿಗೆ 74,164 ರೂ.ಗೆ ತಲುಪಿದೆ. ಅದೇ ರೀತಿ 23 ಕ್ಯಾರೆಟ್ ಚಿನ್ನ 60,380 ರೂ., 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 55,531 ರೂ.

ದರಗಳನ್ನು ಪರಿಶೀಲಿಸಿ :
ಈಗ ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ  ಇಂದಿನ ದರ ಎಷ್ಟು ಎನ್ನುವ ಸಂದೇಶವು ಬರುತ್ತದೆ.

ಇದನ್ನೂ ಓದಿ : Bike Sales: ಮಾರಾಟದಲ್ಲಿ ದಾಖಲೆ ಬರೆದ ಈ ಬೈಕ್ ಮೇಲೆ ಹೆಚ್ಚಿದ ಕ್ರೇಜ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News