DA Hike: ಕೇಂದ್ರ ಉದ್ಯೋಗಿಗಳಿಗೆ 2023ರ ವರ್ಷ ಅತ್ಯಂತ ಶುಭ ಸುದ್ದಿ ತಂದಿದೆ. ಒಂದರ ಹಿಂದೆ ಒಂದರಂತೆ ಒಳ್ಳೆಯ ಸುದ್ದಿಗಳು ಅವರ ಮುಂದೆ ಬರಲಿವೆ. ತುಟ್ಟಿಭತ್ಯೆಯಲ್ಲಿ ಭಾರಿ ಹೆಚ್ಚಳದೊಂದಿಗೆ ವರ್ಷವು ಆರಂಭಗೊಂಡಿದೆ. ಮಾರ್ಚ್‌ನಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ. ಕೇಂದ್ರ ನೌಕರರಿಗೆ ತುಟ್ಟಿಭತ್ಯೆ (ಡಿಎ ಹೆಚ್ಚಳ) ಪ್ರತಿ ವರ್ಷ ಎರಡು ಬಾರಿ ಹೆಚ್ಚಾಗುತ್ತದೆ. ಆದರೆ, ಈ ಹೆಚ್ಚಳ ಎಷ್ಟು ಎಂಬುದು ಹಣದುಬ್ಬರ ಅವಲಂಬಿಸಿರುತ್ತದೆ. ಹಣದುಬ್ಬರಕ್ಕೆ ಅನುಗುಣವಾಗಿ ಕೇಂದ್ರ ನೌಕರರು ಪಡೆಯುವ ಭತ್ಯೆಗಳಲ್ಲಿ ಹೆಚ್ಚಳವಾಗಲಿದೆ. ಉದ್ಯೋಗಿಗಳಿಗೆ ತುಟ್ಟಿಭತ್ಯೆ ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿ ತರಲಿದೆ. ಅವರ ತುಟ್ಟಿಭತ್ಯೆ ಶೇ 50ಕ್ಕೆ ತಲುಪಲಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,
ಮತ್ತೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಾಗಲಿದೆ
ಇತ್ತೀಚೆಗೆ ಕೇಂದ್ರ ನೌಕರರ ತುಟ್ಟಿ ಭತ್ಯೆ (ಡಿಎ ಹೆಚ್ಚಳ) ಶೇ 4ರಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಜನವರಿ 2023 ರಿಂದ ಜಾರಿಗೆ ಬಂದಿದೆ. ಇದೀಗ ಮುಂದಿನ ತುಟ್ಟಿಭತ್ಯೆಯನ್ನು ಜುಲೈ 2023 ರಿಂದ ಘೋಷಿಸಲಾಗುವುದು ಎನ್ನಲಾಗಿದೆ. ಮುಂದಿನ ಏರಿಕೆಯೂ ಶೇ.4 ಆಗುವ ನಿರೀಕ್ಷೆ ಇದೆ. ತಜ್ಞರ ಪ್ರಕಾರ ಹಣದುಬ್ಬರ ಮತ್ತು ಎರಡು ತಿಂಗಳ ಸಿಪಿಐ-ಐಡಬ್ಲ್ಯೂ ಅಂಕಿಅಂಶಗಳು ಬಂದಿವೆ, ಮುಂಬರುವ ದಿನಗಳಲ್ಲಿ ತುಟ್ಟಿಭತ್ಯೆ ಮತ್ತೆ ಶೇಕಡಾ 4 ರಷ್ಟು ಹೆಚ್ಚಾಗಲಿದೆ ಎಂಬುದು ಸ್ಪಷ್ಟವಾಗಿದೆ. ಅಂದರೆ 42 ತಲುಪಿರುವ ತುಟ್ಟಿಭತ್ಯೆ ಜುಲೈನಲ್ಲಿ 46% ಆಗಲಿದೆ.
ಹೊಸ ನಿಯಮದಿಂದಾಗಿ ತುಟ್ಟಿಭತ್ಯೆ ಶೇ.50ರಷ್ಟು ಹೆಚ್ಚಾಗಲಿದೆ
ತುಟ್ಟಿಭತ್ಯೆಯ ಹೆಚ್ಚಳಕ್ಕೆ ಒಂದು ನಿಯಮವಿದೆ. 2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಗೊಳಿಸಲಾಗಿತ್ತು. ನಿಯಮಗಳ ಪ್ರಕಾರ, ತುಟ್ಟಿಭತ್ಯೆ ಶೇಕಡಾ 50 ತಲುಪಿದ ತಕ್ಷಣ, ಅದನ್ನು ಶೂನ್ಯಗೊಳಿಸಲಾಗುತ್ತದೆ ಮತ್ತು ಶೇಕಡಾ 50 ರ ಪ್ರಕಾರ, ನೌಕರರು ಭತ್ಯೆಯಾಗಿ ಪಡೆಯುತ್ತಿರುವ ಹಣವನ್ನು ಮೂಲ ವೇತನಕ್ಕೆ ಅಂದರೆ ಕನಿಷ್ಠ ವೇತನಕ್ಕೆ ಸೇರಿಸಲಾಗುತ್ತದೆ. ಉದ್ಯೋಗಿಯ ಮೂಲ ವೇತನವು 18000 ರೂ ಎಂದು ಭಾವಿಸೋಣ, ಆಗ ಅವರು 50% ಡಿಎಯ 9000 ರೂಗಳನ್ನು ಪಡೆಯುತ್ತಾರೆ. ಆದರೆ, ಡಿಎ 50% ಆದ ನಂತರ, ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ ಮತ್ತು ಮತ್ತೆ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಅಂದರೆ ಮೂಲ ವೇತನವನ್ನು 18000+9000 = 27000 ರೂ.ಗೆ ಹೆಚ್ಚಿಸಲಾಗುವುದು.
ತುಟ್ಟಿಭತ್ಯೆಯನ್ನು ಏಕೆ ಶೂನ್ಯಗೊಳಿಸಲಾಗುತ್ತದೆ?
ಹೊಸ ವೇತನ ಶ್ರೇಣಿ ಜಾರಿಯಾದಾಗಲೆಲ್ಲ ನೌಕರರು ಪಡೆಯುವ ಡಿಎಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನಿಯಮದಂತೆ ನೌಕರರು ಪಡೆಯುವ ಶೇ.100 ಡಿಎಯನ್ನು ಮೂಲ ವೇತನಕ್ಕೆ ಸೇರಿಸಬೇಕು ಆದರೆ ಅದು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಣಕಾಸಿನ ಸ್ಥಿತಿಯು ಅಡ್ಡಿಯಾಗುತ್ತದೆ. ಆದಾಗ್ಯೂ, ಇದನ್ನು 2016 ರಲ್ಲಿ ಮಾಡಲಾಯಿತು. ಅದಕ್ಕೂ ಮೊದಲು 2006ರಲ್ಲಿ ಆರನೇ ವೇತನ ಶ್ರೇಣಿ ಬಂದಾಗ ಐದನೇ ವೇತನ ಶ್ರೇಣಿಯಲ್ಲಿ ಡಿಸೆಂಬರ್‌ವರೆಗೆ ಶೇ.187ರಷ್ಟು ಡಿಎ ಸಿಗುತ್ತಿತ್ತು. ಸಂಪೂರ್ಣ ಡಿಎಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಲಾಯಿತು. ಆದ್ದರಿಂದ 6ನೇ ವೇತನ ಶ್ರೇಣಿಯ ಗುಣಾಂಕ 1.87 ಆಗಿತ್ತು. ನಂತರ ಹೊಸ ಪೇ ಬ್ಯಾಂಡ್ ಮತ್ತು ಹೊಸ ದರ್ಜೆಯ ವೇತನವನ್ನು ಸಹ ರಚಿಸಲಾಯಿತು. ಆದರೆ, ಅದನ್ನು ತಲುಪಿಸಲು ಮೂರು ವರ್ಷ ಬೇಕಾಯಿತು.
ಇದನ್ನೂ ಓದಿ-Post Office Scheme: ನಿತ್ಯ ಕೇವಲ 6 ರೂ. ಠೇವಣಿ ಇರಿಸಿ, ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಲಕ್ಷಾಂತರ ಉಳಿತಾಯ ಮಾಡಿ!
ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿದೆ
2006 ರಲ್ಲಿ ಆರನೇ ವೇತನ ಆಯೋಗದ ಸಮಯದಲ್ಲಿ, ಹೊಸ ವೇತನ ಶ್ರೇಣಿಯನ್ನು ಜನವರಿ 1, 2006 ರಿಂದ ಜಾರಿಗೊಳಿಸಲಾಯಿತು, ಆದರೆ ಅದರ ಅಧಿಸೂಚನೆಯನ್ನು ಮಾರ್ಚ್ 24, 2009 ರಂದು ಹೊರಡಿಸಲಾಯಿತು. ಈ ವಿಳಂಬದಿಂದಾಗಿ 2008-09, 2009-10 ಮತ್ತು 2010-11ರ 3 ಹಣಕಾಸು ವರ್ಷಗಳಲ್ಲಿ 39 ರಿಂದ 42 ತಿಂಗಳ ಡಿಎ ಬಾಕಿಯನ್ನು 3 ಕಂತುಗಳಲ್ಲಿ ಸರ್ಕಾರ ಪಾವತಿಸಬೇಕಾಗಿ ಬಂದಿತ್ತು. ಹೊಸ ವೇತನ ಶ್ರೇಣಿಯನ್ನೂ ರಚಿಸಲಾಗಿದೆ. 8000-13500ರ ಐದನೇ ವೇತನ ಶ್ರೇಣಿಯಲ್ಲಿ 8000ಕ್ಕೆ 186 ಪ್ರತಿಶತ ಡಿಎ 14500 ರೂ.ಆಗುತ್ತದೆ. ಹೀಗಾಗಿ ಎರಡನ್ನೂ ಸೇರಿಸಿ ಒಟ್ಟು ಸಂಬಳ 22 ಸಾವಿರದ 880ಕ್ಕೆ ತಲುಪಿತು. ಆರನೇ ವೇತನ ಶ್ರೇಣಿಯಲ್ಲಿ, ಅದರ ಸಮಾನ ವೇತನ ಶ್ರೇಣಿಯನ್ನು 15600 -39100 ಜೊತೆಗೆ 5400 ದರ್ಜೆಯ ವೇತನಕ್ಕೆ ನಿಗದಿಪಡಿಸಲಾಗಿದೆ. ಆರನೇ ವೇತನ ಶ್ರೇಣಿಯಲ್ಲಿ ಈ ವೇತನ 15600-5400 ಸೇರಿ 21000 ಇದ್ದು, 2009ರ ಜನವರಿ 1ರಂದು ಶೇ 16 ಡಿಎ 2226 ಸೇರಿಸಿ ಒಟ್ಟು 23 ಸಾವಿರದ 226 ವೇತನ ನಿಗದಿ ಪಡಿಸಲಾಗಿತ್ತು. ನಾಲ್ಕನೇ ವೇತನ ಆಯೋಗದ ಶಿಫಾರಸುಗಳನ್ನು 1986 ರಲ್ಲಿ, ಐದನೆಯದನ್ನು 1996 ರಲ್ಲಿ ಮತ್ತು ಆರನೆಯದನ್ನು 2006 ರಲ್ಲಿ ಜಾರಿಗೊಳಿಸಲಾಯಿತು. ಏಳನೇ ಆಯೋಗದ ಶಿಫಾರಸುಗಳು ಜನವರಿ 2016 ರಲ್ಲಿ ಜಾರಿಗೆ ಬಂದವು.
ಇದನ್ನೂ ಓದಿ-Petrol-Diesel Price: ವಾಹನ ಸವಾರರಿಗೆ ಭಾರಿ ಸಂತಸದ ಸುದ್ದಿ!
HRA ಕೂಡ 3% ಹೆಚ್ಚಾಗಲಿದೆ
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು 3% ಆಗಿರುತ್ತದೆ. ಎಚ್‌ಆರ್‌ಎ ಈಗಿರುವ ಗರಿಷ್ಠ ಶೇ.27ರಿಂದ ಶೇ.30ಕ್ಕೆ ಏರಿಕೆಯಾಗಲಿದೆ. ಆದರೆ, ತುಟ್ಟಿಭತ್ಯೆ ಪರಿಷ್ಕರಣೆಯು 50% ದಾಟಿದಾಗ ಮಾತ್ರ ಇದು ಸಂಭವಿಸುತ್ತದೆ. ಹಣಕಾಸು ಇಲಾಖೆಯ ಜ್ಞಾಪಕ ಪತ್ರದ ಪ್ರಕಾರ, DA 50% ದಾಟಿದಾಗ HRA 30%, 20% ಮತ್ತು 10% ಆಗಿರುತ್ತದೆ. X, Y ಮತ್ತು Z ವರ್ಗದ ನಗರಗಳ ಪ್ರಕಾರ ಮನೆ ಬಾಡಿಗೆ ಭತ್ಯೆ (HRA) ವರ್ಗವಾಗಿದೆ. ಎಕ್ಸ್ ವರ್ಗಕ್ಕೆ ಸೇರುವ ಕೇಂದ್ರ ನೌಕರರು 27% ಎಚ್‌ಆರ್‌ಎ ಪಡೆಯುತ್ತಿದ್ದಾರೆ, ಇದು ಡಿಎ 50% ಆಗಿದ್ದರೆ ಅದು 30% ಆಗಿರುತ್ತದೆ. ಇದೆ ವೇಳೆ, ವೈ ವರ್ಗದ ಜನರಿಗೆ, ಇದು 18 ಪ್ರತಿಶತದಿಂದ 20 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಝಡ್ ವರ್ಗದವರಿಗೆ ಶೇ.9ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.