Amul vs Nandini: ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ- ಕಾಂಗ್ರೆಸ್

Nandini vs Amul row: ಬೇರೆ ಬ್ರಾಂಡ್ ಹಾಲುಗಳಿಗೆ ಇಲ್ಲದ ವಿರೋಧ ಅಮೂಲ್‌ಗೆ ಏಕೆ ಎಂದು ಮೂಢ ಬಿಜೆಪಿಗರು ಜಾಣಕುರುಡರಂತೆ ಪ್ರಶ್ನಿಸುತ್ತಿದ್ದಾರೆ. ಬೇರೆ ಬ್ರಾಂಡ್‌ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Written by - Puttaraj K Alur | Last Updated : Apr 10, 2023, 05:56 PM IST
  • ಬೇರೆ ಬ್ರಾಂಡ್ ಹಾಲುಗಳಿಗಿಲ್ಲದ ವಿರೋಧ ಅಮೂಲ್‌ಗೆ ಏಕೆಂದು ಮೂಢ ಬಿಜೆಪಿಗರು ಪ್ರಶ್ನಿಸುತ್ತಿದ್ದಾರೆ
  • ನಂದಿನಿ ವಿಲೀನಗೊಳಿಸುತ್ತೇವೆ ಎಂದಿದ್ದು ಅಮೂಲ್ ಜೊತೆಗೆ ಹೊರತು ಬೇರೆ ಬ್ರಾಂಡ್‌ಗಳೊಂದಿಗೆ ಅಲ್ಲ
  • ಬೇರೆ ಬ್ರಾಂಡ್‌ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ಎಂದು ಪ್ರಶ್ನಿಸಿದ ಕಾಂಗ್ರೆಸ್
Amul vs Nandini: ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ- ಕಾಂಗ್ರೆಸ್  title=
Nandini vs Amul row

ಬೆಂಗಳೂರು: ರಾಜ್ಯದ ಹಾಲು ಮಾರುಕಟ್ಟೆಯನ್ನು ಗುಜರಾತ್​​ನ ಅಮುಲ್ ಅತಿಕ್ರಮಿಸಿಕೊಳ್ಳಲು ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಇದೇ ಬೆನ್ನಲ್ಲೇ ನಮಗೆ ನಂದಿನಿಗೆ ಬೇಕು, ಅಮೂಲ್ ಬೇಡವೇ ಬೇಡ ಅಂತಾ ಬೆಂಗಳೂರಿನಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ

ಇದೇ ವಿಚಾರವಾಗಿ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ಬೇರೆ ಬ್ರಾಂಡ್ ಹಾಲುಗಳಿಗೆ ಇಲ್ಲದ ವಿರೋಧ ಅಮೂಲ್‌ಗೆ ಏಕೆ ಎಂದು ಮೂಢ ಬಿಜೆಪಿಗರು ಜಾಣಕುರುಡರಂತೆ ಪ್ರಶ್ನಿಸುತ್ತಿದ್ದಾರೆ. ಬೇರೆ ಬ್ರಾಂಡ್‌ಗಳಿಗೆ ಅಮಿತ್ ಶಾ ಕೃಪಾಕಟಾಕ್ಷ ಇದೆಯೇ? ನಂದಿನಿಯನ್ನು ವಿಲೀನಗೊಳಿಸುತ್ತೇವೆ ಎಂದಿದ್ದು ಅಮೂಲ್ ಜೊತೆಗೆ ಹೊರತು ಬೇರೆ ಬ್ರಾಂಡ್‌ಗಳೊಂದಿಗೆ ಅಲ್ಲ. ಅಮೂಲ್ ಪರ ಬಿಜೆಪಿ ನಿಂತಿರುವುದೇ ನಂದಿನಿಗೆ ಅಪಾಯ’ವೆಂದು ಟೀಕಿಸಿದೆ.

ಇದನ್ನೂ ಓದಿ: "ಸರ್ಕಾರದ ಹಣದಲ್ಲಿ ಬಿಜೆಪಿಯ ಜಾತ್ರೆ"- ಕಾಂಗ್ರೆಸ್ ಟೀಕೆ

‘ಕನ್ನಡಿಗರು ಅಮೂಲ್ ವಿರೋಧಿಸಿದರೆ ತಮ್ಮನ್ನೇ ವಿರೋಧಿಸಿದಂತೆ ಬಿಜೆಪಿಗರೇಕೆ ಹುಚ್ಚೆದ್ದು ಕುಣಿಯುತ್ತಿದ್ದಾರೆ? ಬಿಜೆಪಿಗರು ಏಕೆ ಅಮೂಲ್ ಪರ ವಹಿಸಿ ಮಾತಾಡುತ್ತಿದ್ದಾರೆ? ಅಮೂಲ್ ಪರ ವಕಾಲತ್ತು ವಹಿಸಲು ಬಿಜೆಪಿಗರಿಗೆ ಕಮಿಷನ್ ಸಿಗುತ್ತಿದೆಯೇ? ಇವರ ಮಾತುಗಳಲ್ಲೇ ನಂದಿನಿಯನ್ನು ಮುಳುಗಿಸುವ ಹುನ್ನಾರ ಎದ್ದು ಕಾಣುತ್ತಿದೆ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಹೈನುಗಾರರಿಗೆ ದ್ರೋಹ!

‘ಶ್ವೇತ ಕ್ರಾಂತಿಯ ಮೂಲಕ ಕಾಂಗ್ರೆಸ್ ಭಾರತವನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿದೆ. ಆದರೆ ಬಿಜೆಪಿಯ ದುರಾಡಳಿತ ನಮ್ಮ ಹೈನುಗಾರರಿಗೆ ದ್ರೋಹ ಬಗೆದಿದೆ. ಇದರಿಂದ ಹಾಲಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗ ಹಾಲಿನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಉಲ್ಲೇಖಿಸಿ ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ: ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಮುಳುಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ: ಡಿ.ಕೆ.ಸುರೇಶ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News