ನವದೆಹಲಿ: ಲೋಕಪಾಲ್ ನೇಮಕಕ್ಕಾಗಿ ಅನಿರ್ಧಿಷ್ಟ ಉಪಸತ್ಯಾಗ್ರಹ ಕೈಗೊಂಡಿರುವ ಅಣ್ಣಾ ಹಜಾರೆ ಹೋರಾಟ ಮುಂದುವರೆದಿದೆ.
ಏಳನೇ ದಿನಕ್ಕೆ ಕಾಲಿಟ್ಟಿರುವ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ,ಈಗ ಕೇಂದ್ರ ಸರ್ಕಾರದ ಹಾಗೂ ರಾಜ್ಯದ ನಾಯಕರು ಅಣ್ಣಾ ಮನವೊಲಿಕೆಗೆ ಮುಂದಾಗಿದ್ದಾರೆ.ಮಂಗಳವಾರದಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೇಂದ್ರ ಸರ್ಕಾರದ ಪರವಾಗಿ ರಾಧಾ ಮೋಹನ್ ಸಿಂಗ್ ಮತ್ತು ಸುಭಾಶ್ ಭಾಮ್ರೆ ಭೇಟಿಯಾಗಿ ಮಾತುಕತೆ ನಡೆಸಿದರು.ಜನವರಿ 30 ರಿಂದ ರಾಜ್ಯದಲ್ಲಿ ಲೋಕಾಯುಕ್ತ ಹಾಗೂ ಕೇಂದ್ರದಲ್ಲಿ ಲೋಕಪಾಲ್ ನೇಮಕಕ್ಕಾಗಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅಣ್ಣಾ ಹಜಾರೆ 2014 ರ ಚುನಾವಣೆಯಲ್ಲಿ ಮತ ಹಾಕಿದ ಜನರಿಗೆ ಬಿಜೆಪಿ ದ್ರೋಹ ಬಗೆದಿದೆ ಎಂದು ತಿಳಿಸಿದರು.
Maharashtra CM Devendra Fadnavis, Union Agriculture Minister Radha Mohan Singh and MOS Defence Subhash Bhamre meet Anna Hazare at Ralegan Siddhi. Anna Hazare has been on an indefinite hunger strike from January 30. pic.twitter.com/t7WgFj0xcb
— ANI (@ANI) February 5, 2019
ಸೋಮವಾರದಂದು ಅಣ್ಣಾ ಹಜಾರೆ ಸರ್ಕಾರ ಲೋಕಪಾಲ್ ಮತ್ತು ಲೋಕಾಯುಕ್ತ ನೇಮಕದ ವಿಚಾರವಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹೊರತು ತಮ್ಮ ಉಪವಾಸ ಸತ್ಯಾಗ್ರಹವನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಣ್ಣಾ ಹಜಾರೆ ಕಳೆದ ಆರು ದಿನಗಳಲ್ಲಿ 4.25 ಕೆಜಿಯನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಶಿವಸೇನಾ ಕೂಡ ಅಣ್ಣಾ ಹೋರಾಟಕ್ಕೆ ಬೆಂಬಲ ನೀಡಿದ್ದು, ಜಯಪ್ರಕಾಶ್ ನಾರಾಯಣ್ ಕರೆ ನೀಡಿದ ಹೋರಾಟದಂತೆ ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಅಣ್ಣಾ ಹಜಾರೆ ಮುನ್ನಡೆಸಲು ತಿಳಿಸಿದೆ.