PPF vs EPF ಎರಡರಲ್ಲಿ ಯಾವುದು ಉತ್ತಮ ನಿವೃತ್ತಿ ಯೋಜನೆ

Best Retirement Plan: ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ. ಜೀವನದಲ್ಲಿ ಆರ್ಥಿಕ ಭದ್ರತೆ ಬಹಳ ಮುಖ್ಯ. ದುಡಿಯುವ ವಯಸ್ಸಿನಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಿದರೆ, ನಿವೃತ್ತಿ ಜೀವನವೂ ಆನಂದಮಯವಾಗಿರುತ್ತದೆ. ಇದಕ್ಕಾಗಿ ಸರ್ಕಾರಿಂದ ಹಲವು ಯೋಜನೆಗಳನ್ನು ಕೂಡ ಆರಂಭಿಸಲಾಗಿದೆ. 

Written by - Yashaswini V | Last Updated : Apr 13, 2023, 12:47 PM IST
  • ಇತ್ತೀಚಿನ ದಿನಗಳಲ್ಲಿ ಉಳಿತಾಯಕ್ಕಾಗಿ ಹಲವು ಸರ್ಕಾರಿ ಮತ್ತು ಖಾಸಗಿ ಯೋಜನೆಗಳು ಲಭ್ಯವಿವೆ.
  • ಆದರೆ, ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣಕ್ಕೆ ಖಾತರಿ ಇರುವುದರಿಂದ ಹೆಚ್ಚಿನ ಮಂದಿ ಸರ್ಕಾರಿ ಯೋಜನೆಗಳಲ್ಲೇ ಹೂಡಿಕೆ ಮಾಡಲು ಇಚ್ಚಿಸುತ್ತಾರೆ.
  • ಇಂತಹ ಸರ್ಕಾರಿ ಪ್ರಾಯೋಜಿತ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಮತ್ತು ಉದ್ಯೋಗಿ ಭವಿಷ್ಯ ನಿಧಿ (ಇಪಿ‌ಎಫ್) ಎರಡೂ ಕೂಡ ಜನಪ್ರಿಯ ಯೋಜನೆಗಳಾಗಿವೆ.
PPF vs EPF ಎರಡರಲ್ಲಿ ಯಾವುದು ಉತ್ತಮ ನಿವೃತ್ತಿ ಯೋಜನೆ  title=
PPF vs EPF

PPF vs EPF: ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತೃ ತುಂಬಾ ಅರ್ಥಗರ್ಭಿತವಾಗಿದ್ದು ಜೀವನದಲ್ಲಿ ಹಣ ಎಷ್ಟು ಮುಖ್ಯ ಎಂಬುದನ್ನೂ ಇದು ಅರ್ಥೈಸುತ್ತದೆ. ಕೆಲವರಿಗೆ ದುಡಿಯುವ ವಯಸ್ಸಿನಲ್ಲಿ ಹಣದ ಮಹತ್ವ ಅಷ್ಟು ಅರ್ಥವಾಗುವುದಿಲ್ಲ, ಆದರೆ, ವಯಸ್ಸಾದಂತೆ ಜೀವನದಲ್ಲಿ ಒಂದು ರೀತಿಯ ಆರ್ಥಿಕ ಅಭದ್ರತೆ ಕಾಡತೊಡಗುತ್ತದೆ. ಇದನ್ನು ತಪ್ಪಿಸಲು, ದುಡಿಯುವಾಗಲೇ, ಮುಂದಿನ ಭವಿಷ್ಯಕ್ಕಾಗಿ, ನಿವೃತ್ತಿ ಬದುಕಿಗಾಗಿ ಒಂದಿಷ್ಟು ಹಣವನ್ನು ಉಳಿತಾಯ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಹಲವು ಯೋಜನೆಗಳಿವೆ. 

ಇತ್ತೀಚಿನ ದಿನಗಳಲ್ಲಿ ಉಳಿತಾಯಕ್ಕಾಗಿ ಹಲವು ಸರ್ಕಾರಿ ಮತ್ತು ಖಾಸಗಿ ಯೋಜನೆಗಳು ಲಭ್ಯವಿವೆ. ಆದರೆ, ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ನಮ್ಮ ಹಣಕ್ಕೆ ಖಾತರಿ ಇರುವುದರಿಂದ ಹೆಚ್ಚಿನ ಮಂದಿ ಸರ್ಕಾರಿ ಯೋಜನೆಗಳಲ್ಲೇ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ಇಂತಹ ಸರ್ಕಾರಿ ಪ್ರಾಯೋಜಿತ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) ಮತ್ತು ಉದ್ಯೋಗಿ ಭವಿಷ್ಯ ನಿಧಿ (ಇಪಿ‌ಎಫ್) ಎರಡೂ ಕೂಡ ಜನಪ್ರಿಯ ಯೋಜನೆಗಳಾಗಿವೆ. ನೀವು ಸಹ ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಬಗ್ಗೆ ಚಿಂತಿಸುತ್ತಿದ್ದರೆ ನಿವೃತ್ತಿ ಜೀವನವನ್ನು ಆನಂದಿಸಲು ಇವೆರಡರಲ್ಲಿ ಯಾವುದು ಉತ್ತಮ ಯೋಜನೆ ಎಂದು ತಿಳಿಯಿರಿ. 

ಇದನ್ನೂ ಓದಿ- ಕೇವಲ ಡಿಎ ಮಾತ್ರವಲ್ಲ ಈ ಭತ್ಯೆಗಳಲ್ಲಿಯೂ ಹೆಚ್ಚಳ ! ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ

PPF ಎಂದರೇನು?
ಪಿ‌ಪಿ‌ಎಫ್- ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಹೆಸರೇ ಸೂಚಿಸುವಂತೆ ಇದು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಾಗಿದ್ದು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. 

EPF ಎಂದರೇನು?
ಇಪಿ‌ಎಫ್- ಎಂಪ್ಲಾಯಿಸ್ ಪ್ರಾವಿಡೆಂಟ್ ಫಂಡ್ ಎಂದರೆ ಉದ್ಯೋಗಿ ಭವಿಷ್ಯ ನಿಧಿಯು ಸಂಬಳ ಪಡೆಯುವ ವರ್ಗಕ್ಕಾಗಿ ರೂಪಿಸಲಾಗಿರುವ ನಿವೃತ್ತಿ ಯೋಜನೆ ಆಗಿದೆ. ಅರ್ಥಾತ್ ಉದ್ಯೋಗಿಯು ತನ್ನ ಗಳಿಕೆಯ ಒಂದು ನಿರ್ದಿಷ್ಟ ಭಾಗವನ್ನು ಇದರಲ್ಲಿ ಹೂಡಿಕೆ ಮಾಡುವ ಮೂಲಕ ತನ್ನ ನಿವೃತ್ತಿ ಜೀವನವನ್ನು ಭದ್ರಪಡಿಸುತ್ತಾನೆ. 

ಇದನ್ನೂ ಓದಿ- ಹಿಂದಿನ ಸರ್ಕಾರದ ನಿರ್ಧಾರದಲ್ಲಿ ಬದಲಾವಣೆ! ಸರ್ಕಾರಿ ನೌಕರರಿಗೆ ಲಾಭ

ಪಿ‌ಪಿ‌ಎಫ್ ಪ್ರಯೋಜನಗಳು:
>> ಪಿ‌ಪಿ‌ಎಫ್- ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ವಾರ್ಷಿಕ ಕನಿಷ್ಠ 500 ರೂಪಾಯಿಯಿಂದ ಗರಿಷ್ಠ 1,50,000 ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. >> ಪ್ರಸ್ತುತ ಪಿ‌ಪಿ‌ಎಫ್ ಹೂಡಿಕೆಯ ಮೇಲೆ ಶೇ. 7.1 ರಷ್ಟು ಬಡ್ಡಿದರವನ್ನು  ನೀಡಲಾಗುತ್ತಿದೆ. 
>> ಇದರಲ್ಲಿ 15 ವರ್ಷಗಳವರೆಗೆ ಲಾಕ್-ಇನ್ ಅವಧಿ ಇರುತ್ತದೆ. 
>> ಪಿ‌ಪಿ‌ಎಫ್ ನಲ್ಲಿ ಹಣ ಹೂಡಿಕೆಯು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. 
>> ನಿಮಗೆ ಬೇಕೆಂದರೆ 5-5 ವರ್ಷಗಳವರೆಗೆ ನೀವು ಇದನ್ನು ವಿಸ್ತರಿಸಬಹುದಾಗಿದೆ. 
>> ಪಿ‌ಪಿ‌ಎಫ್ ಖಾತೆಯಲ್ಲಿ ಮೂರು ವರ್ಷಗಳ ಮೂಡಿಕೆ ನಂತರ ಸಾಲ ಸೌಲಭ್ಯವೂ ಲಭ್ಯವಾಗಲಿದೆ. 
>> ಪಿ‌ಪಿ‌ಎಫ್ ಹೂಡಿಕೆದಾರರು ವೈದ್ಯಕೀಯ ತುರ್ತು ಪರಿಸ್ಥಿತಿ, ಮಕ್ಕಳ ಶಿಕ್ಷಣ ಇತ್ಯಾದಿ ಪರಿಸ್ಥಿತಿಗಳಲ್ಲಿ ಇದರ ಸದುಪಯೋಗ ಪಡೆಯಬಹುದು. 
 
ಇಪಿ‌ಎಫ್ ಪ್ರಯೋಜನಗಳು: 
* ಇಪಿಎಫ್ ಖಾತೆಯಲ್ಲಿ ಉದ್ಯೋಗಿಯ ಮೂಲ ವೇತನದ (ಜೊತೆಗೆ ಡಿಎ) 12 ಪ್ರತಿಶತದ ಕೊಡುಗೆ ಇದೆ. 
* ಇಪಿಎಫ್‌ನಲ್ಲಿ ಹೂಡಿಕೆದಾರರಿಗೆ 8.1 ಪ್ರತಿಶತ ವಾರ್ಷಿಕ ಬಡ್ಡಿ ದರವನ್ನು ನೀಡಲಾಗುತ್ತಿದೆ.
* ಇದರಲ್ಲಿ ಕಂಪನಿ ಮತ್ತು ಉದ್ಯೋಗಿ ಇಬ್ಬರೂ ತಮ್ಮ ಶೇಕಡಾ 12-12 ರಷ್ಟು ಕೊಡುಗೆಯನ್ನು ನೀಡಬೇಕು. 
* ಇಪಿ‌ಎಫ್ ಖಾತೆದಾರರು ಬಯಸಿದರೆ ನಿವೃತ್ತಿ ಬಳಿಕ, ಇಲ್ಲವೇ ತಾವು ಕೆಲಸ ಮಾಡುತ್ತಿರುವ ಕಂಪನಿಯನ್ನು ಬಿಟ್ಟ ಬಳಿಕ ಆ ಹಣವನ್ನು ಹಿಂತೆಗೆದುಕೊಳ್ಳಬಹುದು. 
* ಇದೂ ಕೂಡ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ ಎಂಬುದು ಗಮನಾರ್ಹವಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News