Prabhutva: ಪ್ರಭುತ್ವ ಸಿನಿಮಾದ ಹಿಂದಿ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?

Prabhutva movie: ಎಲೆಕ್ಷನ್ ಇನ್ನೇನು ಬಂದೇ ಬಿಡ್ತು.. ಹಂಗಾದ್ರೆ ವೋಟ್ ಯಾಕೆ ಮಾಡಬೇಕು ಅನ್ನೋದನ್ನ ತಿಳ್ಕೊಳೋಕೆ ನೋಡಿ "ಪ್ರಭುತ್ವ" ಸಿನಿಮಾ. ಯೆಸ್ ಇದೀಗ ಪ್ರಭುತ್ವ ಸಿನಿಮಾದ ಹಿಂದಿ ರೈಟ್ಸ್ ಬಹುದೊಡ್ಡ ಮಟ್ಟದಲ್ಲಿ ಸೇಲ್ ಆಗಿರೋ ಬಗ್ಗೆ ಚಿತ್ರತಂಡ ಖುಷಿ ವಿಚಾರ ಹಂಚಿಕೊಂಡಿದೆ.  

Written by - YASHODHA POOJARI | Last Updated : Apr 15, 2023, 11:20 AM IST
  • ಎಲೆಕ್ಷನ್ ಮಹತ್ವ ಸಾರುವ ಪ್ರಭುತ್ವ ಸಿನಿಮಾ
  • ಹಿಂದಿ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ?
  • ಪ್ರಭುತ್ವ ಟ್ರೇಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ
Prabhutva: ಪ್ರಭುತ್ವ ಸಿನಿಮಾದ ಹಿಂದಿ ರೈಟ್ಸ್ ಸೇಲ್ ಆಗಿದ್ದು ಎಷ್ಟು ಕೋಟಿಗೆ ಗೊತ್ತಾ? title=
Prabhutva movie

Prabhutva movie: ರಾಜಕೀಯ,ಮತದಾನ.. ಒಂದು ರೀತಿಯಲ್ಲಿ ಫುಲ್ ಬಿಸಿನೆಸ್ ಆಗಿಬಿಟ್ಟಿದೆ. ಮತದಾನ  ಎಷ್ಟು ಮಹತ್ವ ಅನ್ನೋದನ್ನ ನಾವೆಲ್ಲರೂ ಮರೆತಿದ್ದೇವೆ. ಆ ಮಹತ್ವವನ್ನ ಸಾರೋದಕ್ಕೆ ಇದೀಗ ಪ್ರಭುತ್ವ ಅನ್ನೋ ಅದ್ಭುತ ಸಂದೇಶ ಇರೋ ಸಿನಿಮಾ ನಿಮ್ಮ ಮುಂದೆ ಬರಲು ಸಿದ್ಧವಾಗಿದೆ. ಮತವನ್ನ ಹಣಕ್ಕೆ ಮಾರಿಕೊಳ್ಳಬೇಡಿ. ಮನೆ ಮಗಳನ್ನ ಮಾರಿಕೊಂಡ  ಹಾಗೇ ಅನ್ನೋ ಮೇಸೆಜ್ ಕೊಡೋ ಪ್ರಯತ್ನ ಮಾಡಿದೆ ಚಿತ್ರತಂಡ.ಮತದಾನದ ಮಹತ್ವ ಸಾರುವ 'ಪ್ರಭುತ್ವ' ಟ್ರೇಲರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆಯ ಮಹಾಪೂರವೇ ಸಿಕ್ಕಿದೆ. ಚಿತ್ರದ ಮೇಕಿಂಗ್ ವಿಡಿಯೋ ನೋಡಿದ್ರೆ ನಿಜಕ್ಕೂ ನಮ್ಮ ಕನ್ನಡ ಇಂಡಸ್ಟ್ರಿ ಎಷ್ಟು ಬೆಳೆದಿದೆ ಅನ್ನ್ನೋದು ಇತ್ತೀಚಿಗೆ ದೊಡ್ಡ ಮಟ್ಟದಲ್ಲಿ ಪ್ರೂವ್ ಆಗುತ್ತಿದೆ.

ದೇಶದ ನಾಗರೀಕರಾಗಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಲೇಬೇಕು. ಆದರೂ ಕೂಡ ಪ್ರತಿ ಬಾರಿ ಚುನಾವಣೆ ಬಂದಾಗಲೂ ಕೂಡ ಒಂದಷ್ಟು ಮತದಾನ ಮಾಡದೇ ತಮಗಿರುವ ಹಕ್ಕನ್ನು ಚಲಾಯಿಸಲು ಮರೆತುಬಿಡುತ್ತಾರೆ.ಯಾಕೆ ಮತದಾನ ಮಾಡಬೇಕು ರಾಜಕಾರಣಿಗಳು ಹೇಗೆ ಇರಬೇಕು ಅನ್ನೋದು ಈ ಸಿನಿಮಾದಿಂದ ತಿಳಿಯುತ್ತೆ.

ಇದನ್ನೂ ಓದಿ : Malavika Avinash:‌ ನಟಿ ಮಾಳವಿಕಾ ಅವಿನಾಶ್ ಆಸ್ಪತ್ರೆಗೆ ದಾಖಲು! ಹೀಗಿದೆ ಆರೋಗ್ಯ ಸ್ಥಿತಿ..

ಈ ಹಾಡನ್ನು ನಿರ್ದೇಶಕ ಹರಿ ಸಂತೋಷ್ ಅವರು ಬರೆದಿದ್ದು, ಕಾರ್ತಿಕ್ ಮತ್ತು ಸುಪ್ರಿಯಾ ರಾಮ್ ಹಾಡಿದ್ದಾರೆ. ಈ ಹಾಡಿನ ಸಂಗೀತ ಸಂಯೋಜನೆ ಎಮಿಲ್ ಅವರದ್ದು. ಈ ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ. ಛಾಯಾಗ್ರಾಹಕರಾಗಿ ಕೆ. ಎಸ್. ಚಂದ್ರಶೇಖರ್ ಕೆಲಸ ಮಾಡಿದ್ದಾರೆ. ಮೇಘಡಹಳ್ಳಿ ಡಾ. ಶಿವಕುಮಾರ್ ಅರ್ಪಿಸುವ 'ಪ್ರಭುತ್ವ' ಸಿನಿಮಾವನ್ನು ರವಿರಾಜ್ ಎಸ್ ಕುಮಾರ್ ನಿರ್ಮಿಸಿದ್ದಾರೆ.

ಪ್ರೇಮಿಸಂ, ರಾಜಧಾನಿ, ಜಾತ್ರೆ, ಪ್ಲಸ್‌ ಮುಂತಾದ ಸಿನಿಮಾಗಳ ಮೂಲಕ ಗಮನಸೆಳೆದ ನಟ ಚೇತನ್‌ ಚಂದ್ರ ಅವರು ಈಗ 'ಪ್ರಭುತ್ವ' ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದವಾಗಿದ್ದಾರೆ . ಈ ಸಿನಿಮಾದಲ್ಲಿ ಅವರಿಗೆ ನಾಯಕಿಯಾಗಿ ಪಾವನಾ ಗೌಡ ಕಾಣಿಸಿಕೊಂಡಿದ್ದು, ಏಪ್ರಿಲ್ 21ಕ್ಕೆ ಈ ಸಿನಿಮಾ ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ..

ಇದನ್ನೂ ಓದಿ : Sa ri ga ma pa19: ಯಾರ ಪಾಲಾಗಲಿದೆ ಜೀ ಕನ್ನಡ ವಾಹಿನಿಯ ಸರಿಗಮಪ' ಸೀಸನ್ 19ರ ಗೆಲುವಿನ ಕೀರಿಟ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News