Simran Sister : ಒಂದು ಕಾಲದಲ್ಲಿ ಸಿಮ್ರಾನ್ ತಮಿಳಿನ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಮಿಂಚಿದ್ದರು. ತಮ್ಮ ವಿವಾಹದ ನಂತರ ಸಿನಿರಂಗದಿಂದ ದೂರ ಉಳಿದಿದ್ದರು. ತದನಂತರ ಅವರು ಪೋಷಕ ಪಾತ್ರಗಳ ಮೂಲಕ ತೆಲುಗು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ನಟಿ ತಮ್ಮ ಸಹೋದರಿಯ ನೆನಪಿನಲ್ಲಿ ಭಾವುಕರಾಗಿದ್ದಾರೆ. ನಟಿಯ ಸಹೋದರಿ ಮೋನಲ್ ಆತ್ಮಹತ್ಯೆ ಮಾಡಿಕೊಂಡು ನಿಧನರಾಗಿದ್ದರು ಎಂದು ವರದಿಗಳು ತಿಳಿಸಿದ್ದವು.
ನಟಿಯು ತಮ್ಮ ಸಹೋದರಿ ಮೋನಲ್ ಅವರ ಸವಿನೆನಪಿನಲ್ಲಿ ಭಾವುಕರಾಗಿ ಅವರ ಜೊತೆಗಿರುವ ಪೋಟೋ ಒಂದನ್ನು ಟ್ವೀಟ್ ಮಾಡಿದ್ದಾರೆ. ಅದರಲ್ಲಿ " ಪ್ರೀತಿಯ ಸಹೋದರಿಯ ನೆನಪಿಗಾಗಿ, ನಿನ್ನನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ. ನಟಿ ಮಾಡಿರುವ ಟ್ವೀಟ್ನಲ್ಲಿ ಸಹೋದರಿಯರಿಬ್ಬರ ಬಾಲ್ಯದ ಪೋಟೋ ಜೊತೆಗೆ ಇತ್ತೀಚೆನ ಭಾವಚಿತ್ರವನ್ನು ಜೋಡಿಸಿ ಹಾಕಿದ್ದಾರೆ. ಅದನ್ನು ನೋಡಿದ ನೆಟ್ಟಿಗರು ಕರುಳು ಕಿತ್ತು ಬರುವಂತಿದೆ, ಸಮಾಧಾನ ತೆಗೆದುಕೊಳ್ಳಿ, ಎಂದು ಸಮಾಧಾನಕರ ನುಡಿಗಳಿಂದ ಕಾಮೆಂಟ್ ಮಾಡಿದ್ದಾರೆ.
In loving memory of my beautiful sister Monal. You’ll be never forgotten 😘 pic.twitter.com/4E78Ol6PZz
— Simran (@SimranbaggaOffc) April 14, 2023
ಇದನ್ನೂ ಓದಿ-"ಹಂಟರ್" ಆದ ನಿರಂಜನ್ ಸುಧೀಂದ್ರ
ನಟಿ ಸಿಮ್ರಾನ್ ಸಹೋದರಿ ಕೂಡ ನಟಿಯಾಗಿದ್ದರು. ಶಿವಣ್ಣ ನಟನೆಯ ಇಂದ್ರ ಧನುಷ್ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು. ಸ್ಟಾರ್ ನಟಿಯ ಸಹೋದರಿ ಎಂದು ಇವರು ಬಹು ಬೇಗ ಜನಪ್ರಿಯವಾದರು. ಇದಲ್ಲದೇ ಇವರು ತೆಲುಗು ತಮಿಳು ಹಿಂದಿ ಭಾಷೆಯ ಕೆಲವು ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ-Yash 19 : ಯಶ್ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಡೈರೆಕ್ಷನ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.