250 ಕೋಟಿ ರೂ ಬಾಕ್ಸ್ ಆಫೀಸ್ ಗಳಿಕೆಯತ್ತ ದಾಪುಗಾಲಿಟ್ಟ ಕೆಜಿಎಫ್

ಕನ್ನಡದ ಸಿನಿಮಾವೊಂದು ಇದೇ ಮೊದಲ ಬಾರಿಗೆ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರವು ಈಗ 250 ಕೋಟಿ ರೂ ದಾಖಲೆಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ.

Last Updated : Feb 11, 2019, 03:47 PM IST
250 ಕೋಟಿ ರೂ ಬಾಕ್ಸ್ ಆಫೀಸ್ ಗಳಿಕೆಯತ್ತ ದಾಪುಗಾಲಿಟ್ಟ ಕೆಜಿಎಫ್ title=

ಬೆಂಗಳೂರು: ಕನ್ನಡದ ಸಿನಿಮಾವೊಂದು ಇದೇ ಮೊದಲ ಬಾರಿಗೆ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಚಿತ್ರವು ಈಗ 250 ಕೋಟಿ ರೂ ದಾಖಲೆಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ.

ದಕ್ಷಿಣ ಭಾರತದ ಜೊತೆಗೆ ಹಿಂದಿ ಮಾರ್ಕೆಟ್ ನಲ್ಲಿಯೂ ಸಾಕಷ್ಟು ಸದ್ದು ಮಾಡಿದ ಕೆಜೆಫ್ ಚಿತ್ರ.ಕನ್ನಡ ಚಿತ್ರರಂಗಕ್ಕೆ ಹೊಸ ಮಾರ್ಕೆಟ್ ನ್ನು ತೆರೆದಿಟ್ಟ ಚಿತ್ರವೆಂದೇ ಹೇಳಬಹುದು.ಈಗಾಗಲೇ 243.ಕೋಟಿ ರೂಗಳನ್ನು ಗಳಿಸಿರುವ ಕೆಜಿಎಫ್ ಚಿತ್ರವೂ ಸಧ್ಯದಲ್ಲಿ 250 ಕೋಟಿ ಗುರಿಯನ್ನು ಮುಟ್ಟಲಿದೆ ಎನ್ನಲಾಗುತ್ತಿದೆ

ಈ ಚಿತ್ರ ಶಾರುಖ್ ಖಾನ್ ಅವರ ಜೀರೋ ಚಿತ್ರಕ್ಕೆ ಪೈಪೋಟಿ ನೀಡಿ ಬಾಕ್ಸ್ ಆಫೀಸ್ ನಲ್ಲಿ ತನ್ನ ಪ್ರಭಾವವನ್ನು ಮುಂದುವರೆಸಿತ್ತು.ಅದರ ಭಾಗವಾಗಿ ಈಗ ಈ ಚಿತ್ರ ತನ್ನ ದಾಖಲೆಯ ಪ್ರಭಾವವನ್ನು ಮುಂದುವರೆಸಿದೆ.

ಈ ಚಿತ್ರದ ಮೂಲಕ ಯಶ್ ಅವರಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಖ್ಯಾತಿಯನ್ನು ತಂದುಕೊಟ್ಟಿತು.ಈಗಾಗಲೇ ಈ ಚಿತ್ರದ ಮೊದಲ ಭಾಗ ಹಿಟ್ ಆಗಿರುವುದರಿಂದ ಎರಡನೇ ಭಾಗ ಕೂಡ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Trending News