ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್: ಡಿಎ ಹೆಚ್ಚಳದೊಂದಿಗೆ ಈ ದರದಲ್ಲೂ ಏರಿಕೆ

7th Pay commission : ಇತ್ತೀಚೆಗೆ ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ. ಈ ಏರಿಕೆಯೊಂದಿಗೆ ಡಿಎ 42 ಪ್ರತಿಶತಕ್ಕೆ ಏರಿದೆ. ಇದರ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಕೂಡಾ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ.

Written by - Ranjitha R K | Last Updated : Apr 18, 2023, 12:22 PM IST
  • ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಳ
  • ಸರ್ಕಾರಿ ನೌಕರರಿಗೆ ಎರಡು ಸಿಹಿ ಸುದ್ದಿ
  • 1.36 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ
ಸರ್ಕಾರಿ ನೌಕರರಿಗೆ ಡಬಲ್ ಗುಡ್ ನ್ಯೂಸ್: ಡಿಎ ಹೆಚ್ಚಳದೊಂದಿಗೆ  ಈ ದರದಲ್ಲೂ ಏರಿಕೆ  title=

7th Pay commission : ಇತ್ತೀಚೆಗೆ ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿದೆ. ಈ ಏರಿಕೆಯೊಂದಿಗೆ ಡಿಎ 42 ಪ್ರತಿಶತಕ್ಕೆ ಏರಿದೆ. ಇದರ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ಕೂಡಾ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸಿವೆ.

 ಸರ್ಕಾರಿ ನೌಕರರಿಗೆ ಎರಡು ಸಿಹಿ ಸುದ್ದಿ : 
ಹಿಮಾಚಲ ಪ್ರದೇಶ ಸರ್ಕಾರ ಈಗಿರುವ ಉದ್ಯೋಗಿಗಳಿಗೆ ಡಬಲ್ ಗುಡ್ ನ್ಯೂಸ್ ನೀಡಿದೆ. ರಾಜ್ಯ ಸರ್ಕಾರಿ ನೌಕರರ ಗ್ರಾಚ್ಯುಟಿ ದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಇದರೊಂದಿಗೆ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಮರು ಜಾರಿಗೂ ಅಧಿಸೂಚನೆ ಹೊರಡಿಸಲಾಗಿದೆ. 2.15 ಲಕ್ಷ ನೌಕರರು ಮತ್ತು 1.90 ಲಕ್ಷ ಪಿಂಚಣಿದಾರರಿಗೆ ಸರ್ಕಾರದ ಈ ಘೋಷಣೆಯಿಂದ ಪ್ರಯೋಜನವಾಗಲಿದೆ.  ಹಿಮಾಚಲ ಪ್ರದೇಶದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಕಡಾ 3 ರಷ್ಟು ಡಿಎಯನ್ನು ಹೆಚ್ಚಿಸಲಾಗಿದೆ. ಈ ಹೆಚ್ಚ್ಳಳದೊಂದಿಗೆ ಶೇ.31ರಷ್ಟಿದ್ದ ತುಟ್ಟಿಭತ್ಯೆ ಇದೀಗ ಶೇ.34ಕ್ಕೆ ಏರಿಕೆಯಾಗಿದೆ. 

ಇದನ್ನೂ ಓದಿ : Arecanut price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮತ್ತೆ ಏರಿಕೆ!

ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ಸರ್ಕಾರವು ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತಿದೆ ಎನ್ನುವುದು ಇಲ್ಲಿ ಗಮನಾರ್ಹ ಸಂಗತಿ. ಡಿಎ ಸರ್ಕಾರಿ ನೌಕರರಿಗೆ ಮತ್ತು  ಡಿಆರ್ ಪಿಂಚಣಿದಾರರಿಗೆ ನೀಡಲಾಗುತ್ತದೆ.

1.36 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನ : 
ಹಿಮಾಚಲ ಪ್ರದೇಶ ಸರ್ಕಾರವು ಏಪ್ರಿಲ್ 1, 2023 ರಿಂದ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಲು ಅಧಿಸೂಚನೆಯನ್ನು ಹೊರಡಿಸಿದೆ. ರಾಜ್ಯ ಸರ್ಕಾರದ 1.36 ಲಕ್ಷ ನೌಕರರು ಇದರ ಪ್ರಯೋಜನ ಪಡೆಯಲಿದ್ದಾರೆ. ಹಳೆ ಪಿಂಚಣಿ ಯೋಜನೆ ಜಾರಿ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. 2022 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ, ಹಳೆಯ ಪಿಂಚಣಿಯನ್ನು ಮತ್ತೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. 

ಗ್ರಾಚ್ಯುಟಿ ದರ ಹೆಚ್ಚಳ : 
ಕೇಂದ್ರ ಸರ್ಕಾರ ಇತ್ತೀಚೆಗೆ ನೌಕರರ ಗ್ರಾಚ್ಯುಟಿ ದರವನ್ನು ಹೆಚ್ಚಿಸಿದೆ. ಭತ್ಯೆ ಹೆಚ್ಚಳದ ನಡುವೆಯೇ ಲಕ್ಷಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಮತ್ತೊಂದು ಉಡುಗೊರೆ ನೀಡಿದೆ. ಈಗ ಮತ್ತೆ ನೌಕರರ  ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಲಿದೆ. ಕಳೆದ 2 ಬಾರಿಯೂ ಸರ್ಕಾರ ಶೇ.4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಜುಲೈನಲ್ಲಿ ಸರ್ಕಾರ ಮತ್ತೆ ಶೇ.4ರಷ್ಟು ಅನುದಾನ ಹೆಚ್ಚಿಸಬಹುದು ಎಂದು ನಿರೀಕ್ಷಿಸಲಾಗಿದೆ.  

ಇದನ್ನೂ ಓದಿ : Income Tax Return ಫೈಲ್ ಮಾಡುವ ಭರದಲ್ಲಿ ಹ್ಯಾಕರ್‌ಗಳಿಗೆ ಬಲಿಯಾಗದಿರಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News