Vastu Tips: ಮನಿ ಪ್ಲಾಂಟ್ ಜೊತೆಗೆ ಈ ಚಿಕ್ಕ ಗಿಡ ನೆಡಿ, ಅದೃಷ್ಟ 4 ಪಟ್ಟು ಹೆಚ್ಚಾಗುತ್ತದೆ!

Vastu Shastra Remedies: ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಟ್ಟರೆ ಮನೆಯಲ್ಲಿ ಶುಭ ಮತ್ತು ಸಕಾರಾತ್ಮಕತೆ ಉಳಿಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಫೆಂಗ್‌ಶುಯಿಯಲ್ಲಿ ಸ್ಪೈಡರ್ ಪ್ಲಾಂಟ್ ನೆಡುವುದರಿಂದ ಮನೆಗೆ ಅದೃಷ್ಟ ತರುತ್ತದೆಂದು ಹೇಳಲಾಗುತ್ತದೆ.

Written by - Puttaraj K Alur | Last Updated : Apr 23, 2023, 08:59 PM IST
  • ಉತ್ತರ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಡಬೇಕು
  • ಉದ್ಯೋಗ & ವ್ಯವಹಾರದ ಪ್ರಗತಿಗಾಗಿ ಕೆಲಸದ ಸ್ಥಳದಲ್ಲಿ ಮನಿ ಪ್ಲಾಂಟ್‌ನೊಂದಿಗೆ ಸ್ಪೈಡರ್ ಪ್ಲಾಂಟ್ ಇಡಬೇಕು
  • ಮನೆಯ ಕೋಣೆ, ಅಡುಗೆಮನೆ, ಬಾಲ್ಕನಿ ಅಥವಾ ಅಧ್ಯಯನ ಕೊಠಡಿಯಲ್ಲಿ ಕೂಡ ನೆಡಬಹುದು
Vastu Tips: ಮನಿ ಪ್ಲಾಂಟ್ ಜೊತೆಗೆ ಈ ಚಿಕ್ಕ ಗಿಡ ನೆಡಿ, ಅದೃಷ್ಟ 4 ಪಟ್ಟು ಹೆಚ್ಚಾಗುತ್ತದೆ! title=
ಸ್ಪೈಡರ್ ಪ್ಲಾಂಟ್ ನೆಡುವುದರ ಪ್ರಯೋಜನ

ನವದೆಹಲಿ: ಜನರು ಸಂತೋಷ ಮತ್ತು ಸಮೃದ್ಧಿ ಬಯಸಿ ಮನೆಯಲ್ಲಿ ಮನಿ ಪ್ಲಾಂಟ್ ನೆಡುತ್ತಾರೆ. ಆದರೆ ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್‌ನೊಂದಿಗೆ ಸ್ಪೈಡರ್ ಪ್ಲಾಂಟ್ ನೆಡುವ ಮಹತ್ವದ ಬಗ್ಗೆ ಹೇಳಲಾಗಿದೆ. ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಟ್ಟರೆ ಮನೆಯಲ್ಲಿ ಶುಭ ಮತ್ತು ಸಕಾರಾತ್ಮಕತೆ ಉಳಿಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಫೆಂಗ್‌ಶುಯಿಯಲ್ಲಿ ಸ್ಪೈಡರ್ ಪ್ಲಾಂಟ್ ನೆಡುವುದರಿಂದ ಮನೆಗೆ ಅದೃಷ್ಟ ತರುತ್ತದೆಂದು ಹೇಳಲಾಗುತ್ತದೆ. ಮನೆಯಲ್ಲಿ ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ಅನ್ನು ಹೇಗೆ ಇಡಬೇಕು ಮತ್ತು ಅದರ ಪ್ರಯೋಜನಗಳೇನು ಎಂದು ತಿಳಿಯಿರಿ.

ಸ್ಪೈಡರ್ ಪ್ಲಾಂಟ್ ನೆಡುವುದರ ಪ್ರಯೋಜನಗಳು

- ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ, ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಜೊತೆಗೆ ಸ್ಪೈಡರ್ ಪ್ಲಾಂಟ್ ನೆಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕತೆ ಮತ್ತು ವಾಸ್ತು ದೋಷಗಳು ದೂರವಾಗುತ್ತವೆ. ಈ ಸಸ್ಯವನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ನೆಡಬಾರದು, ಅದು ಒಣದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ನೀವು ಕೆಟ್ಟ ಫಲಿತಾಂಶ ಪಡೆಯುತ್ತೀರಿ.

ಇದನ್ನೂ ಓದಿ: Vastu Tips: ಊಟ ಮಾಡುವಾಗ ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ಮರೆಯಬೇಡಿ!

 - ನೀವು ಈ ಸಸ್ಯವನ್ನು ಮನೆಯೊಳಗೆ ನೆಡಬಯಸಿದ್ರೆ, ಅದನ್ನು ಮನೆಯ ಕೋಣೆ, ಅಡುಗೆಮನೆ, ಬಾಲ್ಕನಿ ಅಥವಾ ಅಧ್ಯಯನ ಕೊಠಡಿಯಲ್ಲಿ ನೆಡಬಹುದು. ಹೀಗೆ ಮಾಡುವುದರಿಂದ ಮನೆಯ ದುಷ್ಪರಿಣಾಮಗಳು ದೂರವಾಗುತ್ತವೆ.

- ಸ್ಪೈಡರ್ ಪ್ಲಾಂಟ್ ಮನೆಯ ಕೆಟ್ಟ ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ಇದು ಮನೆಯಿಂದ ನಕಾರಾತ್ಮಕತೆಯನ್ನು ದೂರಮಾಡುತ್ತದೆ. ಅಲ್ಲದೆ ಮನೆಯ ಸದಸ್ಯರನ್ನು ಕಾಯಿಲೆಗಳಿಂದ ದೂರವಿಡುತ್ತದೆ.

- ಉದ್ಯೋಗ ಮತ್ತು ವ್ಯವಹಾರದ ಪ್ರಗತಿಗಾಗಿ ನಿಮ್ಮ ಕೆಲಸದ ಸ್ಥಳದಲ್ಲಿ ಮನಿ ಪ್ಲಾಂಟ್‌ನೊಂದಿಗೆ ಸ್ಪೈಡರ್ ಪ್ಲಾಂಟ್ ಅನ್ನು ಇರಿಸಬೇಕು. ಹೀಗೆ ಮಾಡುವುದರಿಂದ ಸುತ್ತಲೂ ಉತ್ತಮ ವಾತಾವರಣವಿರುತ್ತದೆ ಮತ್ತು ಕೆಲಸದಲ್ಲಿ ಉತ್ತಮ ಪ್ರಗತಿ ಇರುತ್ತದೆ.

ಇದನ್ನೂ ಓದಿ: Grah Yuti 2023: ಈ ರಾಶಿಯವರಿಗೆ ಅದೃಷ್ಟದೊಂದಿಗೆ ಹಠಾತ್ ಧನಲಾಭವಾಗಲಿದೆ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News