Pooja Hegde: ನಟಿ ಪೂಜಾ ಹೆಗ್ಡೆಗೆ ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!

Pooja Hegde Favorite Mangalorean Dish : ಸೂಪರ್ ಬ್ಯುಸಿ ಶೆಡ್ಯೂಲ್ ಹೊಂದಿದ್ದ ಪೂಜಾ ಹೆಗ್ಡೆ ಮನೆಗೆ "ಕ್ವಿಕ್ ಟ್ರಿಪ್" ಮಾಡಿದ್ದಾರೆ. ತಮ್ಮ Instagram ಪ್ರೊಫೈಲ್‌ನಲ್ಲಿ ಕರಾವಳಿ ಟ್ರಿಪ್‌ನ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಂಗಳೂರಿನಲ್ಲಿ ಬಾಯಲ್ಲಿ ನೀರೂರಿಸುವ ಒಂದು ಖಾದ್ಯವನ್ನು ನಟಿ ಸವಿದಿದ್ದಾರೆ.  

Written by - Chetana Devarmani | Last Updated : Apr 25, 2023, 03:50 PM IST
  • ನಟಿ ಪೂಜಾ ಹೆಗ್ಡೆ ಮಂಗಳೂರು ಟ್ರಿಪ್‌
  • ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!
  • ಬಾಯಲ್ಲಿ ನೀರೂರಿಸುವ ಖಾದ್ಯ ಸವಿದ ನಟಿ
Pooja Hegde: ನಟಿ ಪೂಜಾ ಹೆಗ್ಡೆಗೆ ಮಂಗಳೂರಿನ ಈ ಖಾದ್ಯ ಅಂದ್ರೆ ಪಂಚಪ್ರಾಣ!  title=
Pooja Hegde

Pooja Hegde in Mangalore : ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರದಲ್ಲಿ ನಿರತರಾಗಿದ್ದ ನಟಿ, ಚಿತ್ರದ ಬಿಡುಗಡೆಯ ನಂತರ ಮಂಗಳೂರಿಗೆ ಹಾರಿದ್ದಾರೆ. ಇನ್‌ಸ್ಟಾದಲ್ಲಿ ಈ ಬಗ್ಗೆ ಹಂಚಿಕೊಂಡ ಪೂಜಾ ಹೆಗ್ಡೆ ತಮ್ಮ ಮನೆಯ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ತಂದೆಯೊಂದಿಗೆ ಕಳೆದ ಸುಂದರ ಕ್ಷಣ, ಹೆಬ್ಬಲಸು, ಮುದ್ದಿನ ಬ್ರೌನಿಯ ವಿಡಿಯೋ ಜೊತೆಗೆ ತಾವು ಸೇವಿಸಿದ ಊಟದ ಫೋಟೋ ಕೂಡ ಶೇರ್‌ ಮಾಡಿದ್ದಾರೆ. 

ಪೂಜಾ ಹೆಗ್ಡೆ ತಮ್ಮ ಹುಟ್ಟೂರಾದ ಮಂಗಳೂರಿನಲ್ಲಿ ರಜೆ ಕಳೆಯುತ್ತಿದ್ದಾರೆ. "ಮಂಗಳೂರಿಗೆ ತ್ವರಿತ ಪ್ರವಾಸ ಮತ್ತು ಪೇಜಕಾಯಿಗಾಗಿ ಬೇಟೆ" ಎಂದು ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪ್ರಕೃತಿ ಮಾತೆಯ ಮಡಿಲಲ್ಲಿ ಮತ್ತು ಕುಟುಂಬದೊಂದಿಗೆ ಆನಂದಿಸುತ್ತಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 

ಇದನ್ನೂ ಓದಿ: ಮಾರ್ಟಿನ್ ಚಿತ್ರತಂಡಕ್ಕೆ ಶಾಕ್ ಕೊಟ್ಟ ಕಿಡಿಗೇಡಿಗಳು...!

Pooja Hegde Favorite Mangalorean Dish

ಮಂಗಳೂರು ಅಂದ್ರೆ ಮೀನು. ಮಂಗಳೂರಿನವರಾದ ಅದರಲ್ಲೂ ಕುಡ್ಲದ ಕುವರಿ ಪೂಜಾಗೆ ಸೀಫುಡ್ ಎಂದರೆ ಪಂಚಪ್ರಾಣವಂತೆ. ಅದಕ್ಕಾಗಿಯೇ ಅವರು ಮನೆಗೆ ಭೇಟಿ ನೀಡಿದ ವೇಳೆ ಮಂಗಳೂರಿಗೆ ಬಂದು ಏಡಿ ಸುಕ್ಕ ಸವಿದಿದ್ದಾರೆ. ಇದಕ್ಕೂ ಮುನ್ನ ಮಣ್ಣಿನ ಪಾತ್ರೆಯಲ್ಲಿ ಅಮ್ಮ ಮಾಡಿದ ಮೀನು ಸಾರಿನ ಫೋಟೋವನ್ನು ಪೂಜಾ ಹೆಗ್ಡೆ ಒಮ್ಮೆ ಹಂಚಿಕೊಂಡಿದ್ದರು.

ಮೀನು, ಏಡಿ ಹೀಗೆ ಸೀಫುಡ್‌ ಅನ್ನು ಪೂಜಾ ಬಾಯಿ ಚಪ್ಪರಿಸಿ ಸೇವಿಸುತ್ತಾರಂತೆ. ನಾನ್‌ವೆಜ್‌ ಪ್ರಿಯೆ ಪೂಜಾಗೆ ಸಿಗಡಿ ಅಂದ್ರೆ ತುಂಬಾ ಇಷ್ಟವಂತೆ. ಅವರ ನೆಕ್ಸ್ಟ್ ಚಾಯ್ಸ್‌ ಚಿಕನ್ ಹಾಗೂ ಮಟನ್.  

Pooja Hegde Favorite Mangalorean Dish

ಇದನ್ನೂ ಓದಿ: ಬಿಕಿನಿ ತೊಟ್ಟ ಕನ್ನಡದ ಈ ನಟಿಯ ನೋಡಿದ್ರೆ.. ಜೀವ ಝಲ್‌ ಅಂತದೆ, ಬಾಡಿ ಝುಮ್‌ ಅಂತದೆ!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News