ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ಭೀಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ 40ಕ್ಕೂ ಅಧಿಕ ಯೋಧರ ಕುಟುಂಬಗಳಿಗೆ 2 ಕೊಠಡಿಗಳ ಮನೆ ನೀಡುವುದಾಗಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ ಆಫ್ ಇಂಡಿಯಾ(CREDAI) ಘೋಘಿಸಿದೆ.
ಕುಟುಂಬದ ಸದ್ಯರನ್ನು ಕಳೆದುಕೊಂಡು ದುಃಖದಲ್ಲಿರುವ ಹುತಾತ್ಮ ಯೋಧರ ಕುಟುಂಬಗಳಿಗೆ ಅವರ ರಾಜ್ಯದಲ್ಲಿ ಅಥವಾ ನಗರಗಳಲ್ಲಿ ಎರಡು ಕೊಠಡಿಗಳ ಒಂದೊಂದು ಮನೆಯನ್ನು ನೀಡಲು ನಿರ್ಧರಿಸಲಾಗಿದೆ. ರಿಯಲ್ ಎಸ್ಟೇಟ್ ಅಸೋಸಿಯೇಶನ್'ನ 12,500 ಸದಸ್ಯ ಕಂಪನಿಗಳೂ ಯೋಧರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಕೊಡಲೆಂದು ಪ್ರಾರ್ಥಿಸಿವೆ ಎಂದು CREDAI ಅಧ್ಯಕ್ಷ ಜೆ.ಷಾ ತಿಳಿಸಿದ್ದಾರೆ.
CREDAI ದೇಶದ ಪ್ರತಿಷ್ಟಿತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿದ್ದು, ದೇಶಾದ್ಯಂತ 23 ರಾಜ್ಯಗಳ 203 ನಗರಗಳಲ್ಲಿ 12,000ಕ್ಕೂ ಅಧಿಕ ಸದಸ್ಯ ಕಂಪನಿಗಳನ್ನು ಹೊಂದಿದೆ.
ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ದೇಶದ ಹಲವು ಸಂಘಟನೆಗಳು ಮತ್ತು ಗಣ್ಯರು ಹುತಾತಂ ಯೋಧರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಒಂದೆಡೆ ದೇಶದ ಪ್ರತಿಷ್ಟಿತ ರಿಲಯನ್ಸ್ ಸಂಸ್ಥೆ ಹುತಾತ್ಮ ಯೋಧರ ಕುಟುಂಬದವರ ಶಿಕ್ಷಣ ಮತ್ತು ಉದ್ಯೋಗದ ಸಂಪೂರ್ಣ ಜವಾಬ್ದಾರಿ ಹೊರುವುದಾಗಿ ತಿಳಿಸಿದ್ದರೆ, ಮತ್ತೊಂದೆಡೆ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರತಿ ಯೋಧನ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇನ್ನು, ಮಹಾರಾಷ್ಟ್ರದ ಸಾಯಿಬಾಬಾ ಮಂದಿರ ಟ್ರಸ್ಟ್ ಹುತಾತ್ಮ ಯೋಧರ ಕುಟುಂಬಗಳಿಗೆ ಒಟ್ಟು 2.51 ಕೋಟಿ ರೂ.ಗಳ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದೆ.