Fruit Eating Rules: ಹಣ್ಣುಗಳನ್ನು ಸೇವಿಸುವ ಈ ಮೂರು ನಿಯಮಗಳನ್ನು ತಪ್ಪದೆ ಅನುಸರಿಸಿ!

Rules To Eat Fruits: ಹಣ್ಣುಗಳ ಸೇವನೆ ಆರೋಗ್ಯಕ್ಕೆ ಲಾಭಕಾರಿ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಆದರೆ ಹಣ್ಣುಗಳನ್ನು ತಿನ್ನಲು ಕೆಲವು ವಿಧಾನಗಳಿವೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ನೀವು ಹಣ್ಣುಗಳನ್ನು ಸರಿಯಾಗಿ ಸೇವಿಸದಿದ್ದರೆ, ಅವು ಪ್ರಯೋಜನಗಳ ಬದಲಿಗೆ ಹಾನಿಯನ್ನುಂಟುಮಾಡುತ್ತವೆ.  

Written by - Nitin Tabib | Last Updated : May 2, 2023, 07:11 PM IST
  • ವಾಸ್ತವವಾಗಿ, ಹಣ್ಣುಗಳು ನೈಸರ್ಗಿಕ ಮತ್ತು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ನಲ್ಲಿ ಸಮೃದ್ಧವಾಗಿವೆ,
  • ಅವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೇ.
  • ಅವು ಅನೇಕ ವಿಧದ ಜೀವಸತ್ವಗಳು, ಖನಿಜಗಳು ಮತ್ತು ಕಿಣ್ವಗಳನ್ನು ಹೊಂದಿರುತ್ತವೆ,
  • ಅವುಗಳನ್ನು ದೇಹಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗುತ್ತದೆ.
Fruit Eating Rules: ಹಣ್ಣುಗಳನ್ನು ಸೇವಿಸುವ ಈ ಮೂರು ನಿಯಮಗಳನ್ನು ತಪ್ಪದೆ ಅನುಸರಿಸಿ! title=
ಹಣ್ಣುಗಳ ಸೇವನೆಯ ಸರಿಯಾದ ವಿಧಾನ!

Tips To Eat Fruits: ನಮ್ಮ  ಆಹಾರದಲ್ಲಿ ನಾವು ಸರಿಯಾದ ಪ್ರಮಾಣದಲ್ಲಿ ಹಣ್ಣುಗಳು, ತರಕಾರಿಗಳು, ಒಣ ಹಣ್ಣುಗಳನ್ನು ಸೇರಿಸಿದರೆ, ಅನಾರೋಗ್ಯ ಹೆಚ್ಚು ನಮ್ಮನ್ನು ಸುತ್ತುವರೆಯುವುದಿಲ್ಲ. ಆಹಾರದಲ್ಲಿ ಹಣ್ಣುಗಳನ್ನು ಸೇರಿಸುವುದು ಎಷ್ಟೊಂದು ಲಾಭಕಾರಿಯಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ವಾಸ್ತವವಾಗಿ, ಹಣ್ಣುಗಳು ನೈಸರ್ಗಿಕ ಮತ್ತು ಸುಕ್ರೋಸ್, ಫ್ರಕ್ಟೋಸ್ ಮತ್ತು ಗ್ಲೂಕೋಸ್ನಲ್ಲಿ ಸಮೃದ್ಧವಾಗಿವೆ, ಅವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೇ. ಅವು ಅನೇಕ ವಿಧದ ಜೀವಸತ್ವಗಳು, ಖನಿಜಗಳು ಮತ್ತು ಕಿಣ್ವಗಳನ್ನು ಹೊಂದಿರುತ್ತವೆ, ಅವುಗಳನ್ನು ದೇಹಕ್ಕೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಹಣ್ಣುಗಳನ್ನು ಸೇವಿಸುವಾಗ ನೀವು ಕೆಲವು ವಿಷಯಗಳ ಕಾಳಜಿವಹಿಸಬೇಕು, ಆಗ ಮಾತ್ರ ಅವು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗುತ್ತವೆ. ಏಕೆಂದರೆ ತಪ್ಪಾದ ರೀತಿಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹಾಗಾದರೆ ಹಣ್ಣುಗಳನ್ನು ತಿನ್ನುವ ಸರಿಯಾದ ವಿಧಾನ ಯಾವುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 

ಹಣ್ಣುಗಳನ್ನು ತಿನ್ನುವ ಸರಿಯಾದ ಮಾರ್ಗಗಳು

1. ಹಣ್ಣುಗಳನ್ನು ಕತ್ತರಿಸದೆಯೇ ಸೇವಿಸಿ
ನಮ್ಮಲ್ಲಿ ಬಹುತೇಕ ಜನರು  ಯಾವಾಗಲೂ ಹಣ್ಣುಗಳನ್ನು ಕಟ್ ಮಾಡಿ ಸೇವಿಸುತ್ತಾರೆ ಅಥವಾ ಹಣ್ಣಿನ ರಸವನ್ನು ಹೊರತೆಗೆದು ಕುಡಿಯುತ್ತಾರೆ. ಹಣ್ಣಿನಿಂದ ರಸವನ್ನು ಹೊರತೆಗೆದಾಗ, ಅದರಲ್ಲಿರುವ ಫೈಬರ್, ಜೀವಸತ್ವಗಳು, ಖನಿಜಗಳು ಮತ್ತು ಕಿಣ್ವಗಳನ್ನು ಸಹ ಹೊರಟುಹೋಗುತ್ತವೆ.  ಅಲ್ಲದೆ, ರಸವು ನಿಮ್ಮ ಹೊಟ್ಟೆಯನ್ನು ವೇಗವಾಗಿ ತಲುಪುತ್ತದೆ ಮತ್ತು ಅದು ಫ್ರೂಕ್ಟೊಸ್ ಹೊಂದಿರುವ ಕಾರಣ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಯೂರಿಕ್ ಆಸಿಡ್ ಕೂಡ ವೇಗವಾಗಿ ಹೆಚ್ಚಾಗುತ್ತದೆ. ಹೀಗಾಗಿ  ಹಣ್ಣುಗಳನ್ನು ಯಾವಾಗಲೂ ಕತ್ತರಿಸದೆ ಸೇವಿಸಿ.

2. ಊಟದ ಬಳಿಕ ಹಣ್ಣುಗಳನ್ನು ತಿನ್ನಬೇಡಿ
ನೀವೂ ಕೂಡ ಊಟದ ಬಳಿಕ ಹಣ್ಣುಗಳನ್ನು ಸೇವಿಸುತ್ತಿದ್ದರೆ ಇಂದಿನಿಂದಲೇ ಆ ಅಭ್ಯಾಸವನ್ನು ನಿಲ್ಲಿಸಿ. ಏಕೆಂದರೆ ಹಣ್ಣು ನಿಮ್ಮ ಹೊಟ್ಟೆಗೆ ಹೋಗಿ ಆಹಾರವನ್ನು ಹಾಳುಮಾಡಲು ಪ್ರಾರಂಭಿಸುತ್ತದೆ. ಇದಕ್ಕಾಗಿ ಹೊಟ್ಟೆಯು ಹೆಚ್ಚು ಆಮ್ಲವನ್ನು ಉತ್ಪಾದಿಸಬೇಕಾಗುತ್ತದೆ. ಇದರಿಂದ ಹಣ್ಣುಗಳು ಬೇಗನೆ ಹಾಳಾಗುತ್ತವೆ ಮತ್ತು ಹೆಚ್ಚು ಆಮ್ಲವನ್ನು ಉತ್ಪತ್ತಿ ಮಾಡುತ್ತವೆ. ಇದರೊಂದಿಗೆ, ನಿಮ್ಮ ದೇಹವು ಆಹಾರದ ಗುಣಗಳನ್ನು ಪಡೆಯುವುದಿಲ್ಲ.

ಇದನ್ನೂ ಓದಿ-Summer Tips: ಬೇಸಿಗೆ ಕಾಲದಲ್ಲಿ ನಿತ್ಯ ಜಲ್ ಜೀರಾ ಸೇವನೆಯಿಂದಾಗುವ ಲಾಭಗಳು ನಿಮಗೆ ಗೊತ್ತಾ?

3. ಹಣ್ಣುಗಳನ್ನು ತಿನ್ನುವ ಮೊದಲು ನಟ್ಸ್ ಸೇವಿಸಿ
ಹಣ್ಣುಗಳನ್ನು ತಿನ್ನುವ ಮೊದಲು ನೀವು ಡ್ರೈ ಫ್ರೂಟ್ ಗಳನ್ನು ಸೇವಿಸಿದರೆ ಉತ್ತಮ, ಏಕೆಂದರೆ ಅವು  ರಕ್ತದಲ್ಲಿನ ಸಕ್ಕರೆಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ನಟ್ಸ್ ಕೊಬ್ಬಿನ ಮೂಲವಾಗಿರುವುದರಿಂದ, ಹಣ್ಣುಗಳ ಮೊದಲು ಅವುಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Deadly Disease: ಈ ಒಂದೇ ಒಂದು ಟೆಸ್ಟ್ ಮಾಡಿಸಿ ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯಗಳಿಂದ ಪಾರಾಗಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News