Dwayne Bravo Dance Video: ನಾಲ್ಕು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ತಂಡ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ನ 16 ನೇ ಸೀಸನ್ನಲ್ಲಿ ಮತ್ತೆ ಫೈನಲ್ಗೆ ಪ್ರವೇಶಿಸಿದೆ. ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಈ ತಂಡವು ಕ್ವಾಲಿಫೈಯರ್-1 ರಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಜಯ ದಾಖಲಿಸಿತು. ಇದಾದ ಬಳಿಕ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಲಿಫ್ಟ್ ನಲ್ಲಿಯೇ ಡ್ಯಾನ್ಸ್ ಮಾಡಲು ಆರಂಭಿಸಿದರು.
ಇದನ್ನೂ ಓದಿ : IPL 2023: ಗುಜರಾತ್ ಟೈಟಾನ್ಸ್ ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್-1 ರಲ್ಲಿ ಸಿಎಸ್ಕೆ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಅನ್ನು 15 ರನ್ಗಳಿಂದ ಸೋಲಿಸಿತು. ಇದೀಗ ಗುಜರಾತ್ಗೆ ಮತ್ತೊಂದು ಅವಕಾಶ ಸಿಗಲಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ ಈಗ ಎಲಿಮಿನೇಟರ್ ಗೆದ್ದ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಆರಂಭಿಕ ಆಟಗಾರ ರಿತುರಾಜ್ ಗಾಯಕ್ವಾಡ್ ಅವರ 60 ಮತ್ತು ಡೆವೊನ್ ಕಾನ್ವೆ ಅವರ 40 ರನ್ಗಳ ನೆರವಿನಿಂದ CSK 7 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶುಬ್ಮನ್ ಗಿಲ್ (42) ಮತ್ತು ರಶೀದ್ ಖಾನ್ (30) ಹೊರತುಪಡಿಸಿ ಗುಜರಾತ್ ಟೈಟಾನ್ಸ್ ತಂಡದ ಎಲ್ಲಾ ಬ್ಯಾಟ್ಸ್ ಮನ್ ಗಳು ವಿಫಲರಾಗಿ ತಂಡ 157 ರನ್ ಗಳಿಗೆ ಆಲೌಟ್ ಆಯಿತು. ಗಾಯಕ್ವಾಡ್ ಪಂದ್ಯ ಶ್ರೇಷ್ಠರಾಗಿ ಆಯ್ಕೆಯಾದರು.
ಇದನ್ನೂ ಓದಿ : ಚಹರ್ನ ಸೂಪರ್ ಟ್ರಿಕ್ಗೆ ಧೋನಿ ಕೊಟ್ಟ ರಿಯಾಕ್ಷನ್ ನೋಡಿ.!
ಲಿಫ್ಟ್ನಲ್ಲಿ ಬ್ರಾವೋ ನೃತ್ಯ :
ಫೈನಲ್ನಲ್ಲಿ ಸ್ಥಾನ ಖಚಿತವಾದ ಬಳಿಕ ಇಡೀ ಚೆನ್ನೈ ಕ್ರೀಡಾಂಗಣದಲ್ಲಿ ಸಂಭ್ರಮ ಮನೆ ಮಾಡಿತು. ತಂಡದ ಆಟಗಾರರು ಕೂಡ ಸಾಕಷ್ಟು ಸಂಭ್ರಮಿಸಿದರು. ತಂಡದ ಆಟಗಾರರು ಹೋಟೆಲ್ನ ಲಿಫ್ಟ್ನಲ್ಲಿ ನೃತ್ಯ ಮಾಡಿದರು. ಈ ಸಮಯದಲ್ಲಿ, CSK ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅತ್ಯಂತ ಉತ್ಸಾಹದಲ್ಲಿ ಕಾಣಿಸಿಕೊಂಡರು, ಅವರು ತುಷಾರ್ ದೇಶಪಾಂಡೆ ಮತ್ತು ಇತರ ಆಟಗಾರರೊಂದಿಗೆ ಲಿಫ್ಟ್ನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದರು. ಇದಕ್ಕೂ ಮುನ್ನ ಪಂದ್ಯದ ಕೊನೆಯ ಕ್ಷಣಗಳಲ್ಲಿ ದೀಪಕ್ ಚಹರ್ ಕ್ಯಾಚ್ ಹಿಡಿದಾಗ, ಬ್ರಾವೋ ಬೌಂಡರಿ ಬಳಿ ಸಂಭ್ರಮಿಸುತ್ತಿರುವುದು ಕಂಡುಬಂದಿತು.
Dwayne Bravo and CSK's players dances in a lift after qualifier 1 confirmation for in this IPL!#ChennaiSuperKings #CSKvsDCpic.twitter.com/UC0EHremB3
— Vikram Rajput (@iVikramRajput) May 20, 2023
10ನೇ ಬಾರಿ ಫೈನಲ್ ತಲುಪಿದ ಚೆನ್ನೈ ತಂಡ :
ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ 10ನೇ ಬಾರಿಗೆ ಐಪಿಎಲ್ನಲ್ಲಿ ಫೈನಲ್ ಪ್ರವೇಶಿಸಿದೆ. ಈ ತಂಡವು ನಾಲ್ಕು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿದೆ. ಮೊದಲು ಅವರು 2010 ರಲ್ಲಿ, ನಂತರ 2011, 2018 ಮತ್ತು 2021 ರಲ್ಲಿ ಚಾಂಪಿಯನ್ ಆಗಿದೆ.
ಇದನ್ನೂ ಓದಿ : ಧೋನಿಗೆ ‘ಗಿಲ್’ ಪರೀಕ್ಷೆ-ಫೈನಲ್ ಎಂಟ್ರಿಗೆ ಕಾದಾಟ! ಅಮೋಘ ಪಂದ್ಯದ ಪ್ಲೇಯಿಂಗ್ 11 ಹೀಗಿದೆ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.