ಚೆನ್ನೈ: ಇಲ್ಲಿನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ 15 ರನ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಈಗ ಐಪಿಎಲ್ ಟೂರ್ನಿಯಲ್ಲಿ ಫೈನಲ್ ಗೆ ತಲುಪಿದೆ.
ಇದನ್ನೂ ಓದಿ: ಮಳೆಗೆ ಕಬ್ಬನ್ ಪಾರ್ಕ್‌ನಲ್ಲಿ ಅವಾಂತರ ಬುಡ ಸಮೇತ ಕಿತ್ತು ಬಿದ್ದ ಅಪರೂಪದ ಮರಗಳು
ಟಾಸ್ ಗೆದ್ದ ಗೆದ್ದ ಗುಜರಾತ್ ಟೈಟಾನ್ಸ್ ತಂಡವು ಮೊದಲು ಫೀಲ್ಡಿಂಗ್ ನ್ನು ಆಯ್ದುಕೊಂಡಿತು.ಈ ಹಂತದಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಋತುರಾಜ್ ಗಾಯಕ್ವಾಡ್ 60 ಹಾಗೂ ಕಾನ್ವೆ ಅವರ 40 ರನ್ ಗಳ ನೆರವಿನಿಂದಾಗಿ ಮೊದಲ ವಿಕೆಟ್ ಗೆ 87 ರನ್ ಗಳ ಭರ್ಜರಿ ಜೊತೆಯಾಟ ಬಂದಿತು.ನಂತರ ಬಂದಂತಹ ಯಾವುದೇ ಆಟಗಾರನು ಕೂಡ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡಲಿಲ್ಲ.ಕೊನೆಯಲ್ಲಿ ರವಿಂದ್ರ ಜಡೇಜಾ 16 ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ಚೆನ್ನೆ ತಂಡವು ಸ್ಪರ್ಧಾತ್ಮಕ ಮೊತ್ತವನ್ನು ಗಳಿಸುವಲ್ಲಿ ನೆರವಾದರು.ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
𝘿𝙊 𝙉𝙊𝙏 𝙈𝙄𝙎𝙎!
🎥 Join the Chennai Super Kings as they celebrate a spectacular win and become the first finalists of #TATAIPL 2023 🙌#TATAIPL | #Qualifier1 | #GTvCSK | @ChennaiIPL pic.twitter.com/ZLPIY2gEEu
— IndianPremierLeague (@IPL) May 23, 2023
ಇದನ್ನೂ ಓದಿ: ಕೆಎಸ್ಆರ್ಟಿಸಿಯ ಡ್ರೈವರ್ ಪುತ್ರನಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ 589 ರ್ಯಾಂಕ್..!
ಚೆನ್ನೈ ಸೂಪರ್ ಕಿಂಗ್ಸ್ ತಂಡವು ನೀಡಿದ 173 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡಕ್ಕೆ ಚೆನ್ನೈ ನ ಬೌಲರ್ ಗಳು ತಮ್ಮ ಮಾರಕ ದಾಳಿಯಿಂದ ಬ್ಯಾಟಿಂಗ್ ಬೆನ್ನೆಲುಬು ಮುರಿದರು.ಬೃಹತ್ ಬ್ಯಾಟಿಂಗ್ ಪಡೆಯನ್ನೇ ಹೊಂದಿರುವ ಗುಜರಾತ್ ತಂಡಕ್ಕೆ ಸುಲಭವಾಗಿ ಗೆಲ್ಲಬಹುದು ಎನ್ನುವ ಲೆಕ್ಕಾಚಾರವಿದ್ದರೂ ಕೂಡ ಚೆನ್ನೈ ಸಾಂಘಿಕ ಬೌಲಿಂಗ್ ದಾಳಿಯಿಂದಾಗಿ ಗುಜರಾತ್ ತಂಡವು ಅಂತಿಮವಾಗಿ 20 ಓವರ್ ಗಳಲ್ಲಿ 157 ರನ್ ಗಳಿಗೆ ಸರ್ವಪತನವನ್ನು ಕಂಡಿತು.ಚೆನ್ನೈನ ಪರವಾಗಿ ದೀಪಕ್ ಚಹಾರ್, ಮಹೇಶ್ ತೀಕ್ಷನಾ, ರವಿಂದ್ರ ಜಡೇಜಾ,ಮಥೀಶ್ ಪಥಿರಣಾ ತಲಾ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಗುಜರಾತ್ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.
ಗುಜರಾತ್ ತಂಡದ ಪರವಾಗಿ ಶುಬ್ಮನ್ ಗಿಲ್ 42,ಹಾಗೂ ರಶಿದ್ ಖಾನ್ 30 ರನ್ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ