ದೇಶ ಪ್ರೇಮದ ಪರೀಕ್ಷೆ ಕೇವಲ ಸಿನಿಮಾ ಹಾಲ್ ಗೆ ಸೀಮಿತವಾಗಬಾರದು -ನಟ ಪವನ್ ಕಲ್ಯಾಣ್

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

Last Updated : Mar 11, 2019, 03:46 PM IST
ದೇಶ ಪ್ರೇಮದ ಪರೀಕ್ಷೆ ಕೇವಲ ಸಿನಿಮಾ ಹಾಲ್ ಗೆ ಸೀಮಿತವಾಗಬಾರದು -ನಟ ಪವನ್ ಕಲ್ಯಾಣ್ title=
file photo

ನವದೆಹಲಿ: ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಯನ್ನು ಮೊಳಗಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಮಾತನಾಡಿದ ಪವನ್ ಕಲ್ಯಾಣ್  'ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ದೇಶಪ್ರೇಮವೇ?', ಸಿನಿಮಾ ಮಂದಿರಗಳಲ್ಲಿ ನಮ್ಮ ಕುಟುಂಬದ ಜೊತೆಗೆ ಸಿನಿಮಾವನ್ನು ನೋಡುತ್ತೇವೆ.ಅದು ನಮ್ಮ ದೇಶ ಭಕ್ತಿಯನ್ನು ಪರೀಕ್ಷಿಸಿಕೊಳ್ಳಲು ಅದು ಸೂಕ್ತ ಸ್ಥಳವಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರಪ್ರೇಮವನ್ನು ಕೇವಲ ಸಿನಿಮಾ ಹಾಲ್ ಗೆ ಸೀಮಿತ ಗೊಳಿಸುವ ಕ್ರಮವನ್ನು ಖಂಡಿಸಿದ ಪವನ್ ಕಲ್ಯಾಣ್ "ರಾಜಕೀಯ ಪಕ್ಷಗಳು ತಮ್ಮ ಸಭೆ ನಡೆಯುವ ಮೊದಲು ರಾಷ್ಟ್ರಗೀತೆ ಹಾಡಬಹುದಲ್ಲ. ಸಿನಿಮಾ ಮಂದಿರಗಳಲ್ಲಿ ಮಾತ್ರವೇಕೆ? ದೇಶದ ಅತ್ಯುನ್ನತ ಕಚೇರಿಗಳಲ್ಲೂ ರಾಷ್ಟ್ರಗೀತೆ ಹಾಡಬೇಕು ಎಂದಿದ್ದಾರೆ. ಸಮಾಜದಲ್ಲಿ ಇನ್ನೂ ರೌಡಿಯಿಸಂ, ಭ್ರಷ್ಟಾಚಾರಗಳು ಅಸ್ತಿತ್ವದಲ್ಲಿ ಇವೆ.ಅವುಗಳನ್ನು ನಿರ್ಮೂಲನ ಮಾಡಬೇಕು. ಆ ಮೂಲಕ ನಮ್ಮ ದೇಶಭಕ್ತಿ ತೋರಿಸಬೇಕು ಎಂದರು. 

2018 ಜನವರಿ 9 ರಂದು ರಾಷ್ಟ್ರಗೀತೆ ವಿಚಾರವಾಗಿ ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಸಿನಿಮಾ ಹಾಲ್​ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಅಂತಿಮ ತೀರ್ಪು ನೀಡಿತ್ತು. ಅಲ್ಲದೆ ರಾಷ್ಟ್ರಗೀತೆಯನ್ನು ಪ್ರಸಾರ ಮಾಡುವುದು ಸಿನಿಮಾ ಮಂದಿರದ ಮಾಲಿಕರಿಗೆ ಬಿಟ್ಟಿದ್ದು ಎಂದು ಅದು ಹೇಳಿತ್ತು.   

 

Trending News