ಬೆಂಗಳೂರು: ನಟ ಅನಿರುದ್ದ್ ವಿಷ್ಣುವರ್ಧನ್ ಇತ್ತೀಚಿಗೆ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹಲವು ವಿಚಾರಗಳನ್ನ ಹಂಚಿಕೊಂಡರು. ಆ ಸಂದರ್ಭದಲ್ಲಿ ಜೊತೆಜೊತೆಯಲಿ ಸೀರಿಯಲ್ ನಿಂದ ಹೊರಬಂದ ಸಂದರ್ಭದಲ್ಲಿ ನಾನು ತುಂಬಾ ಅಂದ್ರೆ ತುಂಬಾ ನೋವು ಅನುಭವಿಸಿದೆ. ನಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ ಹಾಗೇ ಅಗೋಯ್ತು. ಆ ಟೈಮ್ ನಲ್ಲಿ ನನ್ನ ಕುಟುಂಬ ನಂಗೆ ತುಂಬಾ ಬೆಂಬಲವಾಗಿ ನಿಂತಿತ್ತು.
ಇದನ್ನೂ ಓದಿ: Ragini Dwivedis: ರಾಗಿಣಿ ಹೊಸ ಫೋಟೋಶೂಟ್, ಯಾರವ್ವ ಇವಳು ಚೆಲುವೆ ಚೆಲುವೆ ನನ್ನಾ ಕಣ್ಣೇ ಬಿತ್ತು ಎಂದ ಫ್ಯಾನ್ಸ್!
ನಾನು ಜೊತೆಜೊತೆಯಲಿ ಧಾರವಾಹಿಗಾಗಿ ಟೈಮ್ ಕೂಡ ನೋಡಿಲ್ಲ. ನನ್ನ ಸೀರಿಯಲ್ ಅಂತ ತುಂಬಾ ಖುಷಿಯಿಂದ ಕೆಲಸ ಮಾಡುತ್ತಿದ್ದೆ. ಸ್ಕ್ರಿಪ್ಟ್ ಚೆನ್ನಾಗಿ ಕೊಡಿ ಅಂತ ಕೇಳಿದ್ದಕ್ಕೆ ನಂಗೆ ಈ ರೀತಿಯ ಶಿಕ್ಷೆ ಕೊಟ್ಟರು.ಈಗ ನೋಡಿದ್ರೆ ಆ ಧಾರವಾಹಿಗೆ ಸರಿಯಾದ ಅಂತ್ಯ ಸಿಗಲೇ ಇಲ್ಲ. ಎಷ್ಟೋ ಅಭಿಮಾನಿಗಳು ನನ್ನ ಮನೆ ಹತ್ತಿರ ಬಂದು ಕಣ್ಣೀರು ಹಾಕಿದ್ದಾರೆ.
ಯಾಕೆ ಸರ್ ಹೀಗಾಯ್ತು ಅಂತ ಗೋಳಾಡಿದ್ದಾರೆ. ನನ್ನ ಆ ತಂಡ ಪಕ್ಕದಲ್ಲಿ ಕೂರಿಸಿ ಚರ್ಚೆ ಮಾಡದೇ ಮಾಧ್ಯಮಗಳಿಗೆ ಹೋಗಿ ನನಗೆ ನೋವು ಕೊಟ್ಟರು.ನಾನೇ ಈ ಧಾರವಾಹಿಗೆ ಬೇಕು ಅಂತ ಹೇಳುದವರು ಕೊನೆಗೆ ನೀವಿಲ್ಲದೆ ಸೀರಿಯಲ್ ಮಾಡ್ತೀವಿ ಅನ್ನೋ ಮಟ್ಟಿಗೆ ಮಾತನಾಡಿ ಇಡೀ ಜೀವನವೇ ಮರೆಯಲಾಗದ ನೋವು ಕೊಟ್ಟರು.
ಅಷ್ಟೇ ಅಲ್ಲದೇ ಇಡೀ ಕಿರುತೆರೆಯಿಂದಲೇ ನನ್ನ ಬ್ಯಾನ್ ಮಾಡಲು ಹೋಗಿ ನನ್ನ ಅನ್ನ ಕಿತ್ತುಕೊಳ್ಳೋ ಪ್ರಯತ್ನ ಮಾಡಿದ್ದು ಎಷ್ಟು ಸರಿ ಅಂತ ತುಂಬಾ ನೋವಿನಿಂದಲೇ ಹಲವಾರು ವಿಚಾರಗಳನ್ನ ಹಂಚಿಕೊಂಡರು ಅನಿರುದ್ದ್ ವಿಷ್ಣುವರ್ಧನ್.
ಇದನ್ನೂ ಓದಿ: Ambareesh Birth Anniversary: ಮಾತು ಒರಟು-ಮನಸು ಮೃದು: ರೆಬಲ್ ಸ್ಟಾರ್ ಅಂಬಿ ಗುಣಗಳಿವು...!
ಯಾವ ಆರ್ಟಿಸ್ಟ್ ಈ ತರಹದ ನೋವು ಆಗ್ಬಾರ್ದು. ಮಾಡದ ತಪ್ಪಿಗೆ ಎಲ್ಲವನ್ನೂ ಅನುಭಿಸಿದೆ ಮತ್ತು ಸಹಿಸಿಕೊಂಡೆ.ಆ ವ್ಯಕ್ತಿ ಈಗ ನನ್ನ ಮುಖ ಕೂಡ ನೋಡುತ್ತಿಲ್ಲ ಯಾಕೆ ಅನ್ನೋ ಪ್ರಶ್ನೆಯನ್ನ ಮುಂದಿಟ್ಟರು ಅನಿರುದ್ದ್.